Shree Guru Revana Siddeshawara Matha

Shree Guru Revana Siddeshawara Matha Claimed

ಶ್ರೀ ಗುರು ರೇವಣಸಿದ್ದೇಶ್ವರ ಮಠ

Average Reviews

Description

ಶ್ರೀ ಗುರು ರೇವಣಸಿದ್ದೇಶ್ವರ ಮಠ

ಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು

ಶಿವಮೊಗ್ಗ ಜಿˉÉ್ಲಯ ಸೊರಬ ತಾಲ್ಲೂಕಿನ ದುಗ್ಲಿ ಮತ್ತು ಹೊಸೂರು ಎಂಬಗ್ರಾಮಗಳು ತಾಲ್ಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ. ದೂರದಲ್ಲಿದ್ದು ಈ ಗ್ರಾಮಗಳನಡುವೆ ದುಗ್ಲಿಗೆ ಸಮೀಪದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳಿಂದಸುಮಾರು 40 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಶ್ರೀ ಗುರು ರೇವಣಸಿದ್ದೇಶ್ವರ ಮಠವುಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ಗುರು ರೇವಣಸಿದ್ದೇಶ್ವರ ಮಠವನ್ನು ಸ್ಥಾಪಿಸಿದ ವೇದ ಪಂಡಿತರಾದ ಶ್ರೀಮುರುಘೇಂದ್ರ ಮಹಾಸ್ವಾಮಿಗಳು ಜನರಲ್ಲಿನ ಅಜ್ಞಾನವನ್ನು ಹೊಡೆದೋಡಿಸಿ ಅವರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಕೈಗೊಂಡರು. ತಮ್ಮ ಧಾರ್ಮಿಕಆಚರಣೆಗಳ ಮೂಲಕ ಬಹುಬೇಗನೆ ಭಕ್ತರನ್ನು ಶ್ರೀಮಠಕ್ಕೆ ಸೆಳೆದರು. ಶ್ರೀಗಳು ಉತ್ತಮವಾಗ್ಮಿಗಳಾಗಿದ್ದು ಜನರ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶ್ರೀಗಳು ಧರ್ಮನಿಷ್ಠರಾಗಿದ್ದು ಶ್ರೀ ರೇಣುಕಾಚಾರ್ಯರ ತತ್ವಾಚರಣೆಗಳನ್ನು ಪರಿಪಾಲಿಸುತ್ತಿದ್ದಾರೆ.ಶ್ರೀಗಳು ಶ್ರೀಮಠಕ್ಕೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಷ.ಬ್ರ. ರೇವಣಸಿದ್ದಶಿವಾಚಾರ್ಯಸ್ವಾಮಿಗಳನ್ನು ಆಯ್ಕೆ ಮಾಡಿಕೊಂಡು ಪಟ್ಟಕ್ಕೆ ತಂದಿದ್ದರು. ಆದರೆ ಕೆಲದಿನಗಳಕಾಲ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದ ಶ್ರೀಗಳು ನಂತರದಲ್ಲಿ ಶ್ರೀಮಠಕ್ಕೆವಿಮುಖರಾಗಿ ಮುನ್ನಡೆದಿದ್ದಾರೆ. ತದನಂತರ ಶ್ರೀ ಮುರುಘೇಂದ್ರ ಸ್ವಾಮಿಗಳು ತೀರಇತ್ತೀಚೆಗೆ 2014ರ ಮೇ 9 ರಂದು ಈಗಿನ ಕಿರಿಯ ಶ್ರೀಗಳಾದ ಶ್ರೀ ಷ.ಬ್ರ. ರೇವಣಸಿದ್ದೇಶ್ವರಸ್ವಾಮಿಗಳಿಗೆ ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.ಶ್ರೀ ಮುರುಘೇಂದ್ರ ಸ್ವಾಮಿಗಳು ತಮ್ಮ ಇಳಿವಯಸ್ಸಿನಲ್ಲಿಯೂ ಕೂಡ ಪ್ರತಿನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿಅಮವಾಸ್ಯೆಗೆ ಮಹಾರುದ್ರಾಭಿಷೇಕ, ಶ್ರಾವಣ ಮಾಸದಲ್ಲಿ ನಿತ್ಯ ಶ್ರೀ ರೇಣುಕಾಚಾರ್ಯರಪುರಾಣ ಪ್ರವಚನಗಳನ್ನು ಏರ್ಪಡಿಸˉÁಗುತ್ತದೆ. ಶ್ರೀಮಠದ ರಥೋತ್ಸವವವು (ಜಾತ್ರೆ) ಶ್ರೀರೇಣುಕಾಚಾರ್ಯ ಜಯಂತಿಯಂದು ಮೂರು ದಿನಗಳ ಕಾಲ ಜರುಗುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು
Date of Birth :
1975
Photo :
Swamiji Name :
ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಸ್ವಾಮಿಗಳು ಕಡೇನಂದಿಹಳ್ಳಿ,
Date of Birth :
30-3-1991
Place :
ಕಡೇನಂದಿಹಳ್ಳಿ, ಶಿಕಾರಿಪುರ ತಾ||
Pattadikara :
9-5-2014
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ. ಶ್ರಾವಣ ಮಾಸದಲ್ಲಿ ನಿತ್ಯ ಶ್ರೀ ರೇಣುಕಾಚಾರ್ಯರ ಪುರಾಣ. ನವರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಪಾರಾಯಣ ಹಾಗೂ ಕಾರ್ಯಕ್ರಮಗಳು. ಶ್ರೀ ರೇಣುಕಾಚಾರ್ಯ ಜಯಂತಿಯಂದು ಶ್ರೀಮಠದ ರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು. (3 ದಿನಗಳ ಜಾತ್ರೆ).

Photos

Full Address Kannada

ಶ್ರೀ ಗುರು ರೇವಣಸಿದ್ದೇಶ್ವರ ಮಠ ದುಗ್ಲಿ ಹೊಸೂರು, ಗೊಡವಿ ಪೋಸ್ಟ್ - 577 429 ಸೊರಬ ತಾ|| ಶಿವಮೊಗ್ಗ ಜಿ||

Map

Near by Places

ಶಿರಸಿ - 38 ಕಿ.ಮೀ. ಬನವಾಸಿ - 10 ಕಿ.ಮೀ. ಸೊರಬ - 22 ಕಿ.ಮೀ.

Statistic

97 Views
0 Rating
0 Favorite
0 Share
error: Content is protected !!