ಸೊರಬ ತಾಲ್ಲೂಕಿನ ಬಾಡದ ಬೈಲು ಗ್ರಾಮವು ತಾಲ್ಲೂಕು ಕೇಂದ್ರದಿಂದ 15ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ2008ರಲ್ಲಿ ಪ್ರಾರಂಭವಾಗಿರುವ ಶ್ರೀ ನಂದೀಶ್ವರ ಮಠವು ಅಸ್ತಿತ್ವದಲ್ಲಿದ್ದು ಈ ಗ್ರಾಮದಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ಗ್ರಾಮವು ಕೇವಲ 8 ಕಿ.ಮೀ. ದೂರದಲ್ಲಿದ್ದುಮತ್ತು ಸಿದ್ದಾಪುರ ಪಟ್ಟಣವು 10 ಕಿ.ಮೀ. ದೂರದಲ್ಲಿದ್ದು ಪ್ರವಾಸಿಗರಿಗೆ ಅನುಕೂಲವಾಗುವಸ್ಥಳದಲ್ಲಿ ಶ್ರೀಮಠವು ಸ್ಥಾಪಿಸಲ್ಪಟ್ಟಿದೆ.ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಹಾಸನ ತಾಲ್ಲೂಕಿನ ಇಬ್ದಣಿ ಎಂಬಗ್ರಾಮದವರಾಗಿದ್ದು ದಾವಣಗೆರೆ ಜಿˉÉ್ಲ, ಹರಿಹರ ತಾಲ್ಲೂಕಿನ ನಂದಿಗುಡಿ ಶ್ರೀ ವೃಷಭಪುರಿಮಹಾಸಂಸ್ಥಾನ ಬೃಹನ್ಮಠದ ಪೀಠಾಧಿಪತಿಗಳಾಗಿದ್ದವರು. ಶ್ರೀಗಳು ನಂದಿಗುಡಿಯಲ್ಲಿದ್ದಾಗಶ್ರೀಮಠವನ್ನು ಅಭಿವೃದ್ಧಿಪಡಿಸಿ ಭಕ್ತ ವೃಂದವನ್ನು ಸಂಪಾದಿಸಿದ್ದರು. ಹಾಗೆಯೇ ತಮ್ಮಆಧ್ಯಾತ್ಮಿಕ ಚಿಂತನೆಯಿಂದ ಹೆಸರಾಗಿದ್ದವರು.ಶ್ರೀಗಳು ನಂದಿಗುಡಿ ಮಠವನ್ನು ತೊರೆದು ಬಂದು 2008 ರಲ್ಲಿ ಬಾಡದಬೈಲುಗ್ರಾಮದಲ್ಲಿ ಶ್ರೀ ನಂದೀಶ್ವರ ಮಠವನ್ನು ಸ್ಥಾಪಿಸಿಕೊಂಡು ಇಲ್ಲಿನ ಜನರ ಧಾರ್ಮಿಕ ಹಾಗೂಸಾಮಾಜಿಕ ಆಚರಣೆಗಳಿಗೆ ವೇದಿಕೆ ಒದಗಿಸಿದ್ದಾರೆ ಹಾಗೂ ಬಹು ಬೇಗನೆ ಶ್ರೀ ಮಠದಅಭಿವೃದ್ಧಿಯೊಂದಿಗೆ ಭಕ್ತರನ್ನು ಶ್ರೀಮಠಕ್ಕೆ ಸೆಳೆಯುತ್ತಿದ್ದಾರೆ. ಹಾಗೆಯೇ ಶ್ರೀಗಳ ಹಳೆಯಭಕ್ತವೃಂದವೂ ಕೂಡ ಬಾಡದ ಬೈಲು ಗ್ರಾಮದ ಶ್ರೀಮಠಕ್ಕೆ ಬಂದು ಹೋಗುತ್ತಿದ್ದಾರೆ.ಶ್ರೀಮಠದಲ್ಲಿ ಶ್ರೀಗಳು ಪ್ರತಿನಿತ್ಯ ತಮ್ಮ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮವಾಸ್ಯೆಯಲ್ಲಿ ವಿಶೇಷ ಪೂಜೆ ಹಾಗೂ ಪ್ರತಿ ಹಬ್ಬಗಳನ್ನು ಮಠದ ಭಕ್ತರ ಸಹಕಾರದೊಂದಿಗೆ ನಡೆಸುತ್ತಾರೆ. ಶ್ರೀಮಠಕ್ಕೆ ಬರುವ ಭಕ್ತರ ಪ್ರಸಾದ ವ್ಯವಸ್ಥೆಯನ್ನು ಕೂಡಮಾಡಲು ಯೋಜಿಸುತ್ತಿದ್ದಾರೆ.
Swamiji
Swamiji Name :
ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
26-12-1967
Place :
ಇಬ್ದಣಿ, ಹಾಸನ ತಾ||
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಶ್ರಾವಣ, ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ. ಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.
Photos
Full Address Kannada
ಶ್ರೀ ನಂದೀಶ್ವರ ಮಠ ಬಾಡದ ಬೈಲು, ಹೆಚ್ಚೆ ಪೋಸ್ಟ್ - 577 ಸೊರಬ ತಾ|| ಶಿವಮೊಗ್ಗ ಜಿ||