Shree Chowki Matha

Shree Chowki Matha Claimed

ಶ್ರೀ ಚೌಕಿ ಮಠ

Average Reviews

Description

ಶ್ರೀ ಚೌಕಿಮಠ, ಹಾರನಹಳ್ಳಿ

ಕರ್ತೃ – ಶ್ರೀ ಜಗದ್ಗುರು ಸಿದ್ದಲಿಂಗ ಶಿವಯೋಗಿಗಳು

ಆನಂದಪುರಂ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಶಾಖಾಮಠವಾದಹಾರನಹಳ್ಳಿ ಚೌಕಿಮಠವು ಶ್ರೀ ಜಗದ್ಗುರು ಸಿದ್ಧಲಿಂಗ ಶಿವಯೋಗಿಗಳವರಿಂದ (ಕಾಲ 1830)ಸ್ಥಾಪನೆಯಾಗಿದೆ. ಶ್ರೀ ಜಗದ್ಗುರು ಸಿದ್ದಲಿಂಗ ಮಹಾಶಿವಯೋಗಿಗಳವರ ಕರ್ತೃ ಗದ್ದುಗೆಹಾಗೂ ಆನಂದ ಪುರಂನ 13ನೇ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಇಮ್ಮಡಿ ಶಾಂತವೀರಮಹಾಶಿವಯೋಗಿಗಳ (ಕಾಲ 1890) ಗದ್ದುಗೆ ಶ್ರೀ ಚೌಕೀಮಠದಲ್ಲಿರುವುದು ಗಮನಾರ್ಹಸಂಗತಿ. ಶ್ರೀಮಠವು ಅತ್ಯಂತ ಜಾಗೃತ ಸ್ಥಳವಾಗಿ ಈ ಪ್ರಾಂತ್ಯದ ಜನರ ಧರ್ಮಜಾಗೃತಿಕೇಂದ್ರವಾಗಿ ಕಂಗೊಳಿಸುತ್ತಿದೆ.ಆನಂದಪುರಂ ಮಠದ 15 ನೇ ಪೀಠಾಧಿಕಾರಿಗಳಾದ ಶ್ರೀ ಇಮ್ಮಡಿ ಲಿಂಗಮಹಾಸ್ವಾಮಿಗಳವರು, ಹಾರನಹಳ್ಳಿ ಶಾಖಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳುಹಾಗೂ ಇಮ್ಮಡಿ ಶಾಂತವೀರ ಮಹಾಸ್ವಾಮಿಗಳು ಶಿವಯೋಗ ಸಮಾಧಿ ಹೊಂದಿರುವಚೌಕಿಮಠವನ್ನು ಜೀರ್ಣೋದ್ಧಾರ ಮಾಡಲು ತೀರ್ಮಾನಿಸಿ 1912 ರಲ್ಲಿ ನಿರ್ಮಿಸಿದರು.ಆದರೆ ಮಠವು ಸ್ವಾಮಿಗಳು ಇಲ್ಲದೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿಹಿಂದುಳಿಯತೊಡಗಿತು. ಮತ್ತೊಮ್ಮೆ 1980 ರಲ್ಲಿ ಗ್ರಾಮದ ಭಕ್ತರು ಮಠವನ್ನುಆನಂದಪುರಂ ಮಠದ ಶ್ರೀ ಮಲ್ಲಿಕಾರ್ಜುನ ಮುರಘರಾಜೇಂದ್ರ ಮಹಾಸ್ವಾಮಿಗಳಆಶೀರ್ವಾದದಿಂದ ಜೀರ್ಣೋದ್ಧಾರ ಮಾಡಿದ್ದಾರೆ.ಭಕ್ತರಿಗೆ ಸದಾ ಕಾಲ ಸ್ವಾಮಿಗಳು ದೊರಕಬೇಕೆಂಬ ಉದ್ದೇಶದಿಂದ ಹಾರನಹಳ್ಳಿಚೌಕಿಮಠಕ್ಕೆ ಪೂಜ್ಯಶ್ರೀ ಸನ್ನಿಧಿಯವರು ಮತ್ತು ಭಕ್ತ ಮಂಡಳಿಯವರು ಪರಮಪೂಜ್ಯ ಶ್ರೀಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳವರನ್ನು 2007 ರಲ್ಲಿ ನಿಯೋಜಿಸಿದ್ದಾರೆ. ಚೌಕಿಮಠಕ್ಕೆಶ್ರೀಗಳವರು ನಿಯುಕ್ತಿಯಾದಾಗಿನಿಂದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಜನಕˉÁ್ಯಣಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ.ಶ್ರೀಗಳು ಪ್ರತಿ ಸೋಮವಾರ ಶಿವಾನುಭವ ಗೋಷ್ಠಿ, ಮಾಸಿಕ ಶಿವಾನುಭವಗೋಷ್ಠಿಗಳು, ಪ್ರತಿವರ್ಷ ದೀಪೋತ್ಸವದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ,ಸಾಮೂಹಿಕ ವಿವಾಹ, ಧರ್ಮಸಭೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಹಾಗೂಶ್ರೀಗಳ ಮುಂದಾಳತ್ವದಲ್ಲಿ ಮಠವನ್ನು ಅಭಿವೃದ್ಧಿ ಪಡಿಸಬೇಕೆಂದು ಸುಮಾರು 60 ಲಕ್ಷರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡˉÁಗಿದೆ.

ವಿಶೇಷತೆ :

ಪ್ರತಿ ವರ್ಷ ಕಾರ್ತೀಕದಲ್ಲಿ “ಕˉÁ ರತ್ನ” ಹಾಗೂ

“ಯುವ ಕˉÁರತ್ನ” ಪ್ರಶಸ್ತಿ ಪ್ರದಾನ.

Swamiji

Swamiji Name :
ಶ್ರೀ ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳು
Date of Birth :
24-10-1983
Place :
ನಿಂಬಾಳ ಆಳಂದ ತಾ||
Pattadikara :
2007
Photo :

Programs

ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ, ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ. ಮಹಾಶಿವರಾತ್ರಿ, ಬಸವ ಜಯಂತಿ, ಶ್ರೀ ಅಕ್ಕಮಹಾದೇವಿ ಜಯಂತಿ, ದಸರಾ ಆಚರಣೆ,

Photos

Full Address Kannada

ಶ್ರೀ ಚೌಕಿ ಮಠ ಹಾರನಹಳ್ಳಿ - 577 416 ಶಿವಮೊಗ್ಗ ತಾ|| ಜಿ||

Map

Near by Places

ಆಯನೂರು - 5 ಕಿ.ಮೀ. ಸವಳಂಗ - 10 ಕಿ.ಮೀ. ಶಿವಮೊಗ್ಗ - 28 ಕಿ.ಮೀ. ಅಣ್ಣಿಗೆರೆ ಕಟ್ಟೆ - 26 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!