Shree Panchavannige Matha

Shree Panchavannige Matha Claimed

ಶ್ರೀ ಪಂಚವಣ್ಣಿಗೆ ಮಠ

Average Reviews

Description

ಶ್ರೀ ಪಂಚವಣ್ಣಿಗೆ ಮಠ, ತೊಗರ್ಸಿ

ಕರ್ತೃ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮಿಗಳು

ತೊಗರ್ಸಿಯ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬ ದೇವಾಲಯಗಳಎಡಭಾಗದಲ್ಲಿ ಶ್ರೀ ಕಾಶೀ ಪೀಠದ ಶಾಖಾಮಠವಾದ ಶ್ರೀ ಪಂಚವಣಿಗೆ ಮಠವುಪುತ್ರವರ್ಗದ ಪರಂಪರೆಯಲ್ಲಿ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮಿಗಳಿಂದ 17ನೇಶತಮಾನದಲ್ಲಿ ಸ್ಥಾಪನೆಗೊಂಡಿದೆ.ಶ್ರೀ ಮಠವು ಪ್ರಾಚೀನ ಪರಂಪರೆಯನ್ನು ಹೊಂದಿದ್ದು ಕೆಳದಿ ಅರಸರಆಶ್ರಯದಲ್ಲಿ ಬೆಳೆದು ಬಂದಿದೆ. ಹಾಗೆಯೇ ಅಲ್ಲಿಂದ ಇಲ್ಲಿಯವರೆಗೂ ಸಮಾಜದಲ್ಲಿ ಧರ್ಮಜಾಗೃತಿ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹಾಗೆಯೇ ಶೈಕ್ಷಣಿಕವಾಗಿಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನವೀರ ದೇಶೀಕೇಂದ್ರ ಶಿವಾಚಾರ್ಯಸ್ವಾಮಿಗಳು 1991 ರಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಮನ್ನಡೆಸಿಕೊಂಡುಬರುತ್ತಿದ್ದಾರೆ. ಹಾಗೂ ಮಠದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ.ಶ್ರೀಗಳು ಮಠದಲ್ಲಿ ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆಗಳೊಂದಿಗೆ ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ, ದಸರಾದಲ್ಲಿ ನಿತ್ಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿವರಾತ್ರಿಯಲ್ಲಿ ಶ್ರೀಮಠದ ಜಾತ್ರೆಯನ್ನು ಹತ್ತು ದಿನಗಳ ಪರ್ಯಂತಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
20-1-1968
Place :
ತೊಗರ್ಸಿ ಶಿಕಾರಿಪುರ ತಾ||
Pattadikara :
1-11-1991
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಕಾರ್ಯಕ್ರಮಗಳು. ದಸರಾದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು.

Institutions

ಕಿರಿಯ/ ಹಿರಿಯ ಪ್ರಾಥಮಿಕ ಶಾಲೆ (1). ಪ್ರೌಢಶಾಲೆ (4) ಒಟ್ಟು ವಿದ್ಯಾರ್ಥಿಗಳು 500.

Photos

Full Address Kannada

ಶ್ರೀ ಪಂಚವಣ್ಣಿಗೆ ಮಠ ತೊಗರ್ಸಿ - 577 433 ಶಿಕಾರಿಪುರ ತಾ., ಶಿವಮೊಗ್ಗ ಜಿ.

Map

Near by Places

ಶಿರಾಳಕೊಪ್ಪ - 10 ಕಿ.ಮೀ. ಸಾಗರ - 50 ಕಿ.ಮೀ. ಶಿಕಾರಿಪುರ - 30 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!