ಶಿಕಾರಿಪುರ ತಾಲ್ಲೂಕು ತೊಗರ್ಸಿಯ ಮಲ್ಲಿಕಾರ್ಜುನ ಮತ್ತು ಭ್ರಮರಾಂಬದೇವಸ್ಥಾನದ ಬಲಭಾಗದಲ್ಲಿ ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾದ ಪುತ್ರವರ್ಗದಪರಂಪರೆಯ ಶ್ರೀ ಮಳೆ ಹಿರೇಮಠವು ಮಳೆಸ್ವಾಮಿಗಳು ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿದ್ದ ಶಿವಯೋಗಿಗಳಿಂದ ಸ್ಥಾಪಿತಗೊಂಡಿದೆ.ಶ್ರೀ ಮಳೆ ಹಿರೇಮಠವು ಪ್ರಾಚೀನ ಇತಿಹಾಸವನ್ನು ಹೊಂದಿದ್ದು ಶ್ರೀ ಮಠದಲ್ಲಿಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಮಲ್ಲಿಕಾರ್ಜುನ ಹಾಗೂಭ್ರಮರಾಂಬ ದೇವಸ್ಥಾನಗಳ ಪೂಜಾಕಾರ್ಯದ ಉಸ್ತುವಾರಿ ಹಾಗೂ ಜಾತ್ರೆ ಸಂದರ್ಭದಲ್ಲಿದೇವಸ್ಥಾನಗಳ ಶಾಸ್ತ್ರೋಕ್ತ ವಿಧಿ-ವಿಧಾನಗಳನ್ನು ನಡೆಸಿಕೊಡುತ್ತಿದೆ.ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾzs À್ಯ ಶಿವಾಚಾರ್ಯಮಹಾಸ್ವಾಮಿಗಳಿಂದ 1959 ರಲ್ಲಿ ಪಟ್ಟಾಧಿಕಾರ ಪಡೆದ ಈಗಿನ ಶ್ರೀಗಳಾದ ಶ್ರೀ ಮಹಾಂತದೇಶೀಕೇಂದ್ರ ಸ್ವಾಮಿಗಳು ಮಠವನ್ನು ಆರ್ಥಿಕವಾಗಿ ಸ್ವಾವಲಂಬನೆ ಹೊಂದುವಂತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳು ಕಾಯಕಯೋಗಿಗಳಾಗಿದ್ದು, ಮಠಕ್ಕೆಸಂಬಂಧಪಟ್ಟಂತಹ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಶ್ರೀ ಮಠದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಗಳ ಜೊತೆಗೆ ಶಿವರಾತ್ರಿಯಲ್ಲಿ ಹತ್ತುದಿನಗಳ ಕಾಲ ಜಾತ್ರೆಯನ್ನು ನಡೆಸುತ್ತಿದ್ದಾರೆ ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷಕಾರ್ಯಕ್ರಮಗಳ ಜೊತೆಗೆ ನಿತ್ಯ ದಾಸೋಹವನ್ನು ನಡೆಸಲಾಗುತ್ತಿದೆ.ಪ್ರಸ್ತುತ ಶ್ರೀಗಳು ತೊಗರ್ಸಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಮಿತಿ ಅಧ್ಯಕ್ಷರು.ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ವಿಶೇಷ ಕಾಳಜಿಯೊಂದಿಗೆ ಸುಮಾರು 7 ಕೋಟಿ ರೂಪಾಯಿಗಳಅನುದಾನವನ್ನು ಸರ್ಕಾರದಿಂದ ಬಿಡುಗಡೆಯಾಗಲು ಶ್ರಮಿಸಿ ರಾಜಗೋಪುರ, ದೇವಸ್ಥಾನದಮೆಟ್ಟಿಲುಗಳು, ಕಲ್ಯಾಣಿ, ಬೆಟ್ಟಕ್ಕೆ ಹೋಗುವಮೆಟ್ಟಿಲುಗಳು, ಗರ್ಭಗುಡಿಯ ಜೀರ್ಣೋದ್ಧಾರಇನ್ನೂ ಮುಂತಾದವುಗಳನ್ನು ಶ್ರೀಗಳು ಸಮಿತಿಹಾಗೂ ಭಕ್ತರ ಸಹಕಾರದೊಂದಿಗೆ ಪೂರ್ಣಗೊಳಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
9-2-1949
Place :
ತೊಗರ್ಸಿ ಶಿಕಾರಿಪುರ ತಾ||
Pattadikara :
18-2-1959
Photo :
Programs
ಶ್ರಾವಣಮಾಸದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು, ನಿತ್ಯ ದಾಸೋಹ. ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ದಸರಾದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮ. ಶಿವರಾತ್ರಿಯಿಂದ ಹತ್ತು ದಿನ ಶ್ರೀಮಠ ಜಾತ್ರೆ ಹಾಗೂ ವಿಶೇಷ ಕಾರ್ಯಕ್ರಮಗಳು.
Institutions
ಸಂಸ್ಕøತ, ವೇದ ಜೋತಿಷ್ಯ ಪಾಠಶಾಲೆ ಐ.ಟಿ.ಐ. ಕಾಲೇಜು.
Photos
Full Address Kannada
ಶ್ರೀ ಮಳೆಮಠ ತೊಗರ್ಸಿ - 577 433 ಶಿಕಾರಿಪುರ ತಾ., ಶಿವಮೊಗ್ಗ ಜಿ.