Shree Murugha Rajendra Virakta Matha

Shree Murugha Rajendra Virakta Matha Claimed

ಶ್ರೀ ಮುರುಘರಾಜೇಂದ್ರ ವಿರಕ್ತಮಠ

Average Reviews

Description

ಶ್ರೀ ಮುರುಘರಾಜೇಂದ್ರ ವಿರಕ್ತಮಠ

ಕರ್ತೃ – ಶ್ರೀ ಮ.ನಿ.ಪ್ರ. ಶಾಂತಲಿಂಗ ಸ್ವಾಮಿಗಳು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣವು ಜಿಲ್ಲಾಕೇಂದ್ರದಿಂದ ಸುಮಾರು 50ಕಿ.ಮೀ. ದೂರದಲ್ಲಿದ್ದು, ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ಪುರಾತನಕಾಲದಲ್ಲಿ ಸ್ಥಾಪನೆಯಾಗಿದೆ ಎಂದು ಹೇಳಲಾಗುವ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ಸದ್ಯಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಾಖಾಮಠವಾಗಿದೆ. ಶ್ರೀಮಠದ ಕಾಲನಿರ್ಣಯ ಮಾಡಲು ಸಾಧ್ಯವಿಲ್ಲವಾದರೂ ಕರ್ತೃಗುರುಗಳು ಶ್ರೀ ಶಾಂತಲಿಂಗ ಸ್ವಾಮಿಗಳೆಂದು ಹೇಳಬಹುದು ಮತ್ತು ಅವರ ಗದ್ದುಗೆಯು ಮಠದಲ್ಲಿದ್ದು ನಿತ್ಯಪೂಜೆ ನಡೆಯುತ್ತಿದೆ.ಶ್ರೀ ವಿರಕ್ತಮಠದ ಗುರುಪರಂಪರೆಯ ಕುರಿತು ನಿಖರವಾದ ಮಾಹಿತಿಗಳುಲಭ್ಯವಿಲ್ಲ. ಕರ್ತೃಗುರುಗಳಾದ ಶ್ರೀ ಶಾಂತಲಿಂಗ ಸ್ವಾಮಿಗಳ ನಂತರ ಯಾರು ಅಧಿಕಾರನಡೆಸಿದ್ದಾರೆ ಎಂಬುದು ತಿಳಿದುಬರುತ್ತಿಲ್ಲ. ಬಹುಶಃ ಬಹುಕಾಲ ಮಠವು ಖಾಲಿ ಉಳಿದಿರುವುದು ಇದಕ್ಕೆ ಕಾರಣವಾಗಿರಬಹುದು. ಈ ಬಗ್ಗೆ ಇನ್ನಷ್ಟೇ ಸಂಶೋಧನೆ ನಡೆದು ಮಠಹಾಗೂ ಮಠದ ಪರಂಪರೆಯ ಬಗ್ಗೆ ತಿಳಿದು ಬರಬೇಕಿದೆ.ಶ್ರೀ ವಿರಕ್ತ ಮಠವು ಬಹಳ ದಿನಗಳಿಂದ ಚಿತ್ರದುರ್ಗ ಮುರುಘಾಮಠದ ಅಧೀನದಲ್ಲಿದ್ದು ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ರೀ ವಿರಕ್ತ ಮಠದ ಬಸವಸಮಿತಿಯ ಕ್ರಿಯಾಶೀಲತೆಯನ್ನು ನೋಡಿ ನೆರವು ನೀಡುತ್ತಿದ್ದಾರೆ. ಹಾಗೆಯೇ ಶರಣರುಶ್ರೀಮಠಕ್ಕೆ ಬಂದು ಇಲ್ಲಿನ ಸ್ಥಿತಿಗತಿ ನೋಡಿ ಶ್ರೀಮಠದ ಅಭಿವೃದ್ಧಿಗೆ ಯೋಜನೆ ಮಾಡಿಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುವಂತೆ ಮಾಡಿದ್ದಾರೆ.ಬಹುಕಾಲದಿಂದ ಖಾಲಿ ಉಳಿದಿದ್ದ ಶ್ರೀ ವಿರಕ್ತ ಮಠಕ್ಕೆ ಇತ್ತೀಚೆಗೆ 2005ರ ಮೇ 2ರಂದು ಚಿತ್ರದುರ್ಗದ ಮುರುಘಾ ಶರಣರು ಶ್ರೀ ಚನ್ನಬಸವ ಸ್ವಾಮಿಗಳನ್ನು ನೇಮಕಮಾಡಿದ್ದಾರೆ. ಶ್ರೀ ಚನ್ನಬಸವ ಸ್ವಾಮಿಗಳು ಹುಳಿಯಾರು ಗ್ರಾಮದವರಾಗಿದ್ದು ತಮ್ಮ ಚಿಕ್ಕವಯಸ್ಸಿನಲ್ಲಿಯೇ ತಮ್ಮ ಆಧ್ಯಾತ್ಮಿಕ ಆಸಕ್ತಿಯಿಂದಾಗಿ ಚಿತ್ರದುರ್ಗ ಮಠದ ಸಂಪರ್ಕಕ್ಕೆಬಂದವರಾಗಿದ್ದಾರೆ. ಶ್ರೀಗಳು ಮಠಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳಿಗೆ ವೇಗದೊರೆತಿದೆ. ಹಾಗೆಯೇ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಜೊತೆಯಲ್ಲಿಸಾಮಾಜಿಕ ಸಾಮರಸ್ಯದ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು
Date of Birth :
19-5-1982
Place :
ಹುಳಿಯಾರು, ಚಿಕ್ಕನಾಯಕನ ಹಳ್ಳಿ ತಾ||
Photo :

Programs

ಪ್ರತಿ ಹುಣ್ಣಿಮೆಗೆ ಮಾಸಿಕ ಶಿವಾನುಭವ ಗೋಷ್ಠಿ. ಬಸವ ಜಯಂತಿಗೆ ರಕ್ತದಾನ ಶಿಬಿರ. ಜೂನ್ ತಿಂಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು. ಕಾರ್ತೀಕ ಮಾಸದಲ್ಲಿ ಸುಜ್ಞಾನದ ಬೆಳಕು ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಶ್ರಾವಣ ಬಂತು ಅನುಭವ ತಂತು. ನವರಾತ್ರಿಗೆ ವಿಶೇಷ ಕಾರ್ಯಕ್ರಮ

Photos

Full Address Kannada

ಶ್ರೀ ಮುರುಘರಾಜೇಂದ್ರ ವಿರಕ್ತಮಠ ದೊಡ್ಡಪೇಟೆ, ಶಿಕಾರಿಪುರ - 577 427 ಶಿಕಾರಿಪುರ ತಾ., ಶಿವಮೊಗ್ಗ ಜಿ.

Map

Near by Places

ಆನಂದಪುರಂ - 30 ಕಿ.ಮೀ. ಶಿವಮೊಗ್ಗ - 50 ಕಿ.ಮೀ. ಹೊನ್ನಾಳಿ - 30 ಕಿ.ಮೀ. ಶಿರಾಳಕೊಪ್ಪ - 20 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!