ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಪ್ರಾಚೀನ ಪರಂಪರೆಯ ಶ್ರೀ ಕೂಡ್ಲಿಮಠವುಅಸ್ತಿತ್ವದಲ್ಲಿದೆ. ಈ ಮೊದಲು ಶರಾವತಿ ನದಿ ಹಾಗೂ ಎಣ್ಣೆಹೊಳೆ ನದಿಗಳ ಸಂಗಮಕ್ಷೇತ್ರದಲ್ಲಿ ಇದ್ದ ಮಠವೇ ಕೂಡ್ಲಿ ಮಠ.ಇಂತಹ ಪುರಾಣ ಪ್ರಸಿದ್ಧ ಮಠ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ನಿರ್ಮಿಸಿದನಂತರ ಆಣೆಕಟ್ಟೆಯ ಹಿನ್ನೀರಿನಿಂದ 1962ರಲ್ಲಿ ಮುಳುಗಡೆಯಾಯಿತು. ಮುಳುಗಡೆಗೂಮುನ್ನವೇ ಶ್ರೀ ಸಿದ್ದಲಿಂಗ ಸ್ವಾಮಿಗಳು ಹಳೇ ಮಠದಲ್ಲಿ ಪಟ್ಟಾಧಿಕಾರ ಪಡೆದು ನಂತರತಾಳಗುಪ್ಪಕ್ಕೆ ಮಠವನ್ನು 1963ರಲ್ಲಿ ಸ್ಥಳಾಂತರ ಮಾಡಿದರು. ಹಿಂದೆ ಎರಡೂ ನದಿಗಳಸಂಗಮದಲ್ಲಿ ಮಠವು ನಿರ್ಮಾಣಗೊಂಡಿದ್ದ ಕಾರಣಕ್ಕೆ ತಾಳಗುಪ್ಪದ ಮಠಕ್ಕೆ ‘ಕೂಡ್ಲಿಮಠ’ಎಂದು ಹೆಸರು ಬಂತು.ಮಠ ಮರುಸ್ಥಾಪನೆಯಾದ ಮೇಲೆ ಏಳುವರ್ಷ ನೆಲೆನಿಂತ ಶ್ರೀ ಸಿದ್ದಲಿಂಗಸ್ವಾಮಿಗಳು ಈಗಿನ ಪುಣಜಿ ಮೂಲಗದ್ಧೆಯಲ್ಲಿ ತಮಗೆ ಪಟ್ಟಾಧಿಕಾರದ ಅನುಗ್ರಹ ನೀಡಿದಶ್ರೀ ಸದಾನಂದ ಸ್ವಾಮಿಗಳ ಹೆಸರಿನಲ್ಲಿ ಸದಾನಂದಾಶ್ರಮವನ್ನು 1970ರಲ್ಲಿ ಸ್ಥಾಪಿಸಿಕೊಂಡು,ಶ್ರೀ ಸದಾನಂದಸ್ವಾಮಿಗಳು 1989ರಲ್ಲಿ ಲಿಂಗೈಕ್ಯರಾದ ಮೇಲೆ ತಾಳಗುಪ್ಪದಲ್ಲಿ ಸಮಾಧಿಗದ್ದುಗೆ ನಿರ್ಮಿಸಿ ಮೂಲಗದ್ದೆಯಲ್ಲಿ ತೋರುಗದ್ದುಗೆ ನಿರ್ಮಿಸಿ ಪೂಜಿಸುತ್ತಿದ್ದಾರೆ. 2006ರವರೆಗೂ ತಾಳಗುಪ್ಪ ಹಾಗೂ ಮೂಲಗದ್ದೆ ಮಠಗಳೆರಡನ್ನೂ ನೋಡಿಕೊಳ್ಳುತ್ತಿದ್ದ ಶ್ರೀಗಳು2006 ರಲ್ಲಿ ತಾಳಗುಪ್ಪದ ಮಠಕ್ಕೆ ಶ್ರೀ ಸಿದ್ದವೀರ ಮಹಾಸ್ವಾಮಿಗಳನ್ನು ನೇಮಿಸಿದ್ದಾರೆ.2006 ರಲ್ಲಿ ಶ್ರೀ ಮಠದ ಅಧಿಕಾರ ವಹಿಸಿಕೊಂಡ ಶ್ರೀ ಮ.ನಿ.ಪ್ರ.ವಿದ್ವಾನ್ಸಿದ್ದವೀರ ಮಹಾಸ್ವಾಮಿಗಳು ಹಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಶ್ರೀಮಠವನ್ನು ಅಭಿವೃದ್ಧಿ ಪಥದತ್ತಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಪ್ರಖ್ಯಾತ ವಾಸ್ತುಶಾಸ್ತ್ರಜ್ಞರಾಗಿದ್ದು ಮಲೆನಾಡ ಭಾಗದಲ್ಲಿಹೆಸರುವಾಸಿಯಾಗಿದ್ದಾರೆ. ಹಾಗೆಯೇ ಶ್ರೀಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಗಳಿಂದ ಸರ್ವಧರ್ಮೀಯರನ್ನೂ ಶ್ರೀಮಠಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವಿದ್ವಾನ್ ಸಿದ್ದವೀರ ಸ್ವಾಮಿಗಳು
Date of Birth :
25-10-1973
Place :
ಕೊರವಿ ಕೊಪ್ಪ ಬೈಲಹೊಂಗಲ ತಾ||
Pattadikara :
10-2-2006
Photo :
Programs
ವರ್ಷದ ಕಾರ್ಯಕ್ರಮಗಳು ಶಿವರಾತ್ರಿಯಂದು ಶ್ರೀಮಠದ ಜಾತ್ರೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ. ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
Photos
Full Address Kannada
ಶ್ರೀ ಕೂಡ್ಲಿ ಮಹಾ ಸಂಸ್ಥಾನ ಮಠ ತಾಳಗುಪ್ಪ - 577 430 ಸಾಗರ ತಾ., ಶಿವಮೊಗ್ಗ ಜಿ.