Shree Jagadguru Murugha Rajendra Maha Samsthana Matha

Shree Jagadguru Murugha Rajendra Maha Samsthana Matha Claimed

ಶ್ರೀ ಜಗದ್ಗುರು ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠ

Average Reviews

Description

ಮುರುಘರಾಜೇಂದ್ರ ಮಹಾಸಂಸ್ಥಾನ ಮಠ

ಕರ್ತೃ – ಶ್ರೀ ಪರಮಪೂಜ್ಯ ಗಂಗಾಧರ ಶಿವಯೋಗಿಗಳು

ಸಾಗರ ತಾಲ್ಲೂಕಿನ ಆನಂದಪುರಂ ಪಟ್ಟಣದಲ್ಲಿ 18ನೇ ಶತಮಾನದ ಆರಂಭದಲ್ಲಿಸ್ಥಾಪಿತಗೊಂಡಿರುವ ಜಗದ್ಗುರು ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠವುಶಿವಮೊಗ್ಗ ಜಿಲ್ಲೆಯಲ್ಲಿಯೇ ಮಹತ್ವದ ಮಠವಾಗಿದ್ದು ಜಿಲ್ಲೆಯ ಧಾರ್ಮಿಕ ಹಾಗೂಸಾಂಸ್ಕøತಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ.ಸುಮಾರು 12ನೇ ಶತಮಾನದ ನಂತರದ ಸಾಮಾಜಿಕ ಕ್ರಾಂತಿಯ ಸಮಯದಲ್ಲಿಸ್ಥಾಪಿತಗೊಂಡಿರುವ ಶ್ರೀಮಠದ ಮೂಲಮಠವು ಶಿವಮೊಗ್ಗ ತಾಲ್ಲೂಕು ಎಲವಟ್ಟಿಯತುಂಗಾತೀರದಲ್ಲಿದ್ದು, ಕಾಲಾನಂತರ ಶಿವಮೊಗ್ಗ ನಗರಕ್ಕೆ ಸ್ಥಳಾಂತರ ಗೊಂಡಿದೆ. ಶ್ರೀಮಠದಪರಂಪರೆಯ 7ನೇ ಜಗದ್ಗುರುಗಳಾದ ಶ್ರೀ ಮ.ನಿ.ಪ್ರ.ಇಮ್ಮಡಿ ಗುರುಸಿದ್ದಸ್ವಾಮಿಗಳ ಕಾಲದಲ್ಲಿಸೋಮಶೇಖರನಾಯಕನ ಆಶಯದಂತೆ ಆನಂದಪುರಂಗೆ ಸ್ಥಳಾಂತರ ಗೊಂಡಿದೆ.ಶ್ರೀ ಮಠವು ಕೆಳದಿಯ ಅರಸರ ಕಾಲದಲ್ಲಿ ರಾಜಾಶ್ರಯದಲ್ಲಿ ಬೆಳೆದು ಕೆಳದಿಯಎಲ್ಲಾ ರಾಜರಿಂದ ದತ್ತಿ ಪಡೆದು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಆಕಾಲದ ಅಪರೂಪದ ಪೂಜಾ ಸಾಮಗ್ರಿಗಳು ಶ್ರೀ ಮಠದಲ್ಲಿ ಕಾಣಸಿಗುತ್ತವೆ. ಹಾಗೆಯೇಕೆಳದಿಯ ಅರಸರು ಮಾಡಿಸಿಕೊಟ್ಟ ರುದ್ರಾಕ್ಷಿ ಮಂಟಪದಲ್ಲೇ ಸ್ವಾಮಿಗಳು ಪ್ರತಿನಿತ್ಯ ಪೂಜಾಅನುಷ್ಠಾನ ಮಾಡುತ್ತಾರೆ.ಶ್ರೀಮಠದ ಪರಂಪರೆಯಲ್ಲಿ ಇದುವರೆಗೂ 16 ಜನ ಸ್ವಾಮಿಗಳು ಆಗಿಹೋಗಿದ್ದಾರೆ. ಈಗಿನವರಾದ ಜಗದ್ಗುರು ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು 17ನೇಯವರುಆಗಿದ್ದು, 1977ರಲ್ಲಿ ಮಠದ ಆಡಳಿತವನ್ನು ವಹಿಸಿಕೊಂಡಾಗಿನಿಂದ ಮಠವನ್ನು ಅಭಿವೃದ್ಧಿಪಥದತ್ತ ಮನ್ನಡೆಸುತ್ತಿದ್ದಾರೆ. ಹಾಗೆಯೇ ಶ್ರೀಗಳು ಸಾಹಿತ್ಯಾಸಕ್ತರಾಗಿದ್ದು ಮುತುವರ್ಜಿವಹಿಸಿ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯವತಿಯಿಂದ ಬಹಳಷ್ಟು ಕೃತಿಗಳು ಪ್ರಕಟಗೊಂಡಿವೆ.ಶ್ರೀಗಳು ಮಠದ ಅಭಿವೃದ್ಧಿಯ ಬಗ್ಗೆ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡುಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಕಾರ್ಯಗಳನ್ನು ಕೈಗೊಂಡಿದ್ದಲ್ಲದೇ ಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವಲ್ಲಿ ನಿರತರಾಗಿದ್ದಾರೆ, ಹಾಗೆಯೇ ಶಾಖಾಮಠಗಳಅಭಿವೃದ್ಧಿ ಕಡೆಗೂ ಗಮನ ಹರಿಸಿ ಅವುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಶ್ರೀಗಳು 1980 ರಲ್ಲಿಶ್ರೀ ಗುರು ಬಸವೇಶ್ವರ ವಿದ್ಯಾಪೀಠವನ್ನು ಸ್ಥಾಪಿಸಿ ಶಿವಮೊಗ್ಗ ಜಿಲ್ಲೆಯಾದ್ಯಂತ ಶಿಕ್ಷಣಕ್ರಾಂತಿಯನ್ನು ನಡೆಸಿದ್ದಾರೆ. ಹಾಗೆಯೇ ಸಮಾಜದಲ್ಲಿರುವ ಸಾಮಾಜಿಕ ಪಿಡುಗುಗಳ ಬಗ್ಗೆಜನಜಾಗೃತಿ ಮೂಡಿಸುತ್ತಿದ್ದಾರೆ.

ವಿಶೇಷತೆಗಳು

ಶಿವಪ್ಪನಾಯಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಪ್ರತಿಷ್ಠಾನ (ರಿ).

ಶ್ರೀ ಮುರುಘ ಗುರುಸಿದ್ದ ಪ್ರಾಚ್ಯ ಗ್ರಂಥ ಭಂಡಾರ :

 * ನೂರು ಹಸ್ತಪ್ರತಿಗಳು

 * ಮುನ್ನೂರು ಓಲೆಗರಿ ಕಟ್ಟುಗಳು

 * 10 ಸಾವಿರ ಪುಸ್ತಕಗಳು

ಶ್ರೀ ಗುರುಬಸವ ಆಧ್ಯಯನ ಪೀಠ ಮತ್ತು ಪ್ರಕಾಶನ (30 ಪುಸ್ತಕಗಳು ಪ್ರಕಟ).

ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಸೇವಾ ಟ್ರಸ್ಟ್ (ರಿ).

Swamiji

Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು
Date of Birth :
29-8-1951
Place :
ಕುನ್ನಾಳು, ಚಿಕ್ಕಮಗಳೂರು ತಾ||
Pattadikara :
1-5-1977
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ. ಬಸವ ಜಯಂತಿ ಆದರಣೆ,ಸಾಮೂಹಿಕ ವಿವಾಹಗಳು ಮತ್ತು ಕಾರ್ಯಕ್ರಮಗಳು. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ. ಕಾರ್ತಿಕ ಮಾಸದಲ್ಲಿ ಶ್ರೀಮಠದ ಜಾತ್ರೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜ್ ಸಂಸ್ಕøತ / ಸಂಗೀತ ಪಾಠಶಾಲೆ ವಿದ್ಯಾರ್ಥಿ ನಿಲಯ ಅನಾಥಾಶ್ರಮ ಗೋಶಾಲೆ

Photos

Full Address Kannada

ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಆನಂದಪುರಂ- 577 412 ಸಾಗರ ತಾ., ಶಿವಮೊಗ್ಗ ಜಿ.

Map

Near by Places

ನಂದಪುರಂ - 3 ಕಿ.ಮೀ. ಸಾಗರ - 25 ಕಿ.ಮೀ. ಶಿವಮೊಗ್ಗ - 45 ಕಿ.ಮೀ.

Statistic

19 Views
0 Rating
0 Favorite
0 Share
error: Content is protected !!