ಸುಮಾರು 20ನೇ ಶತಮಾನದ ಅಂತ್ಯ ಭಾಗದಲ್ಲಿ ಶ್ರೀ ಶಿವಲಿಂಗ ಮಹಾಸ್ವಾಮಿಗಳಿಂದ ಭದ್ರಾವತಿ ತಾಲ್ಲೂಕು ಕೇಂದ್ರದಿಂದ ಸುಮಾರು 19 ಕಿ.ಮೀ ದೂರದಲ್ಲಿರುವ ಅರಕೆರೆಗ್ರಾಮದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಶ್ರೀ ಸಿದ್ದಲಿಂಗ ಶಿವಯೋಗಿ ವಿರಕ್ತಮಠವು ಈ ಭಾಗದಲ್ಲಿಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಹೆಸರಾಗಿದೆ.ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಶ್ರೀ ಮಠವನ್ನು ಸ್ಥಾಪಿಸಿ ಅರಕೆರೆಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಶ್ರೀಗಳು ಪುರಾಣ ಪ್ರವಚನಗಳನ್ನುಮಾಡುವುದರ ಮೂಲಕ ಶರಣರ ತತ್ವಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ಶ್ರೀಗಳು ಸ್ವತಃಕಾಯಕಯೋಗಿಗಳಾಗಿದ್ದು ಭಕ್ತರ ಸಹಕಾರದೊಂದಿಗೆ ತಮ್ಮ ಸ್ವಂತ ಶ್ರಮದಿಂದ ಮಠವನ್ನುಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.ಶ್ರೀಗಳು ತಾವೇ ಸ್ಥಾಪಿಸಿದ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚು ಮಹತ್ವನೀಡುತ್ತಾ ಬಂದಿದ್ದಾರೆ. ಹಾಗೆಯೇ ಮಠದ ಭಕ್ತರ ಮನೆಮನೆಗೆ ಭೇಟಿ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಭಕ್ತರ ಹಾಗೂ ಮಠದ ನಡುವಿನ ಸಂಬಂಧವನ್ನು ವೃದ್ಧಿಸುತ್ತಿದ್ದಾರೆ.ಶ್ರೀಗಳು ಶ್ರಾವಣ ಮಾಸದ ಪರ್ಯಂತ ಮೌನವ್ರತಾಚರಣೆಯಲ್ಲಿದ್ದು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ದಿನನಿತ್ಯ ಪೂಜಾಕಾರ್ಯಗಳಲ್ಲದೆ ಪ್ರತಿ ಅಮವಾಸ್ಯೆಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆಪುನಸ್ಕಾರಗಳನ್ನು ನಡೆಸುತ್ತಾ ಬಂದಿದ್ದಾರೆ.ಹಾಗೆಯೇ ಶ್ರಾವಣಮಾಸದಲ್ಲಿ ಪ್ರತಿನಿತ್ಯ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಚೈತ್ರಮಾಸದ ಸಪ್ತಮಿ ದಿವಸ ಶ್ರೀ ಗುರು ಸಿದ್ದಲಿಂಗೇಶ್ವರ ಮಹಾಸ್ವಾಮಿಗಳರಥೋತ್ಸವ ಜರುಗುತ್ತದೆ.
Swamiji
Swamiji Name :
ಶ್ರೀ ಸಿದ್ದಲಿಂಗ ಶಿವಯೋಗಿ ವಿರಕ್ತಮಠ
Date of Birth :
7-12-1943
Place :
ಸಿಂದಗಿ ತಾ||
Photo :
Programs
ಪ್ರತಿ ಅಮಾವಾಸ್ಯೆಗೆ ಶಿವಾನುಭವ ಗೋಷ್ಠಿ. ತ್ರ ಮಾಸದ ಷಷ್ಟಿಯಂದು ಶ್ರೀ ಚೌಡೇಶ್ವರಿ ತಾಯಿಗೆ ಉಡಿತುಂಬುವುದು. ಸಪ್ತಮಿಯಂದು ಶ್ರೀ ಗುರು ಸಿದ್ದಲಿಂಗೇಶ್ವರರ ರಥೋತ್ಸವ. ವಣ ಮಾಸದ ಪರ್ಯಂತ ಶ್ರೀಗಳ ಮೌನವ್ರತ ಅನುಷ್ಠಾನ. ಸರಾದಲ್ಲಿ ದೇವಿ ಪುರಾಣ ಪಾರಾಯಣ ಹಾಗೂ ಮೌನವ್ರತ ಅನುಷ್ಠಾನ. ಕ್ಷೇತ್ರ ಯಡಿಯೂರಿನಲ್ಲಿ 108 ಜಂಗಮರುಗಳ ಆರಾಧನೆ ಮತ್ತು ಮಹೇಶ್ವರಗಳ ಸೇವಾ ಸಂತರ್ಪಣೆ.
Photos
Full Address Kannada
ಶ್ರೀ ಸಿದ್ದಲಿಂಗ ಶಿವಯೋಗಿ ವಿರಕ್ತಮಠ ಅರಕೆರೆ- 577 233 ಭದ್ರಾವತಿ ತಾ., ಶಿವಮೊಗ್ಗ ಜಿ.