ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತಮಠವು ಐತಿಹಾಸಿಕ ಹಿನ್ನೆಲೆಯನ್ನೊಳಗೊಂಡಿದೆ. ಕರ್ತೃ ಗದ್ದುಗೆಯಲ್ಲಿ ಸದ್ಗುರು ಶ್ರೀ ಶ್ರೀ ಚನ್ನವೀರ ಮಹಾಸ್ವಾಮಿಗಳಿದ್ದು, ಇವರುಬಿಜಾಪುರ ಜಿಲ್ಲೆಯ ಯಳಮಲ್ಲಿ ಗ್ರಾಮದಿಂದ ತಪಸಿದ್ಧಿ ಪಡೆದು ಲೋಕಕಲ್ಯಾಣಾರ್ಥವಾಗಿಶಿವಲಿಂಗಾರ್ಚನೆ, ಗುರುವಿನ ಮಹಿಮೆ, ಜಂಗಮರ ಮಹತ್ವ, ಸರ್ವಧರ್ಮ ಸಮನ್ವಯತೆ,ವಿಶ್ವಮಾನವತೆ ಹಾಗೂ ವೀರಶೈವ ಧರ್ಮ ಪ್ರಚಾರಾಂದೋಲನ ಮಾಡುತ್ತಾ ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಕೆರೆ ಎಂಬ ಸುಕ್ಷೇತ್ರದಲ್ಲಿ ಬಂದು ನೆಲೆಸಿದರು.ಈಗಿನ ಶ್ರೀಗಳಾದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿಚನ್ನವೀರ ಮಹಾಸ್ವಾಮಿಗಳ ಆಶಯದಂತೆ ಧರ್ಮ ಜಾಗೃತಿ ಕಾರ್ಯಕ್ರಮಗಳು ಬಹುವರ್ಷಗಳಿಂದಲೂ ನಡೆಯುತ್ತಾ ಬಂದಿವೆ. ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಪ್ರತಿ ವರ್ಷವುಒಂಭತ್ತು ದಿವಸಗಳು ನಿರಾಹಾರಿಗಳಾಗಿ ದಿವ್ಯಜ್ಞಾನ, ದೇವವಾಣಿ, ವಾಕ್ಸಿದ್ಧಿಗಳನ್ನುಪಡೆಯಲೋಸುಗ ಶಿವಪೂಜಾ ಮಗ್ನತೆಯಿಂದ ಮೌನ ವ್ರತಾಚರಣೆಯಲ್ಲಿದ್ದು, ಕೊನೆಯದಿನ ಹೋಳಿ ಹುಣ್ಣಿಮೆಯ ಪ್ರಾತಃಕಾಲದಲ್ಲಿ ನಿರ್ದಿಷ್ಟ ಪುಣ್ಯಕ್ಷೇತ್ರದ ಶಿವಾಲಯದಲ್ಲಿರುದ್ರಾಭಿಷೇಕ ಹಾಗೂ ಧರ್ಮಸಭೆಯೊಂದಿಗೆ ಮೌನ ವ್ರತವನ್ನು ಮುಕ್ತಾಯಗೊಳಿಸುತ್ತಾರೆ.ಶ್ರೀ ಕರಿಸಿದ್ಧೇಶ್ವರ ಮಹಾಸ್ವಾಮಿಗಳು ಧರ್ಮ ಸಂರಕ್ಷಣಾ ಕಾರ್ಯಕ್ರಮವಾಗಿಇನ್ನೂ ಒಂದು ಹೆಜ್ಜೆ ಮುಂದಿಟ್ಟು ಭಗ್ನ ವಿಗ್ರಹಗಳ ನೆಲೆಗೊಳಿಸುವಿಕೆ ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದಾರೆ. ಇದಕ್ಕೋಸ್ಕರ ಒಂದು ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿದ್ದಾರೆ. ಶ್ರೀಗಳುಇಂತಹವೇ ಮುಂತಾದ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳಿಂದ ಜನಮಾನಸದಲ್ಲಿನೆಲೆಯೂರಿದ್ದಾರೆ.
ವಿಶೇಷತೆ :
ಭಗ್ನ ವಿಗ್ರಹಗಳ ಸಂಗ್ರಹಶಾಲೆ ಇದ್ದು ಇದಕ್ಕೆ ಪ್ರತ್ಯೇಕವಾದ ಕಟ್ಟಡವು ನಿರ್ಮಾಣಗೊಂಡಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಕರಿಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
10-4-1957
Place :
ಅರಕೆರೆ, ಭದ್ರಾವತಿ ತಾ||
Photo :
Programs
ಪ್ರತಿ ಅಮಾವಾಸ್ಯೆಗೆ ರುದ್ರಾಭಿಷೇಕ. ಗೌರಿ ಹುಣ್ಣಿಮೆಗೆ ಕಾರ್ತಿಕ ದೀಪೋತ್ಸವ, ಧರ್ಮಸಭೆ ಮತ್ತು ಹಿರಿಯ ಶ್ರೀಗಳ ಪುಣ್ಯಾರಾಧನೆ. ಶಿವರಾತ್ರಿಯಿಂದ ಹೋಳಿಹುಣ್ಣಿಮೆವರೆಗೆ ಶ್ರೀಗಳ ಅನುಷ್ಠಾನ ಕೊನೆಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತಮಠ ಅರಕೆರೆ- 577 233 ಭದ್ರಾವತಿ ತಾ., ಶಿವಮೊಗ್ಗ ಜಿ.