ಸುಮಾರು 12ನೇ ಶತಮಾನದಲ್ಲಿ ಗೋಣಿಬೀಡು ಗ್ರಾಮದ ಭದ್ರಾನದಿಯದಡದಲ್ಲಿ ಶ್ರೀದೊಡ್ಡಸಿದ್ಧವೀರ ಸ್ವಾಮಿಗಳೆಂಬ ಮಹಾನ್ ಶಿವಯೋಗಿಗಳಿಂದ ಸ್ಥಾಪನೆಗೊಂಡಿರುವ ಶ್ರೀ ಶೀಲಸಂಪಾದನಾ ಮಠವು ಬಸವಾದಿ ಶಿವಶರಣರ ಕಾಲದಲ್ಲಿಅಸ್ಥಿತ್ವದಲ್ಲಿತ್ತು ಎಂದು ತಿಳಿದು ಬರುತ್ತದೆ.ಶ್ರೀಮಠವು ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಸಹೋದರಿಮಹಾಶಿವಶರಣೆ ‘ಅಕ್ಕನಾಗಲಾಂಭಿಕೆ’ ತಾಯಿಯವರ ಲಿಂಗೈಕ್ಯ ಕ್ಷೇತ್ರವಾಗಿ ಮತ್ತುಮಹಾಶಿವಶರಣ ‘ನುಲಿಯಚಂದಯ್ಯ’ನವರ ತಪೋಕ್ಷೇತ್ರವಾಗಿ ಹಾಗೂ ಇವರ ಕ್ರಿಯಾಮೂರ್ತಿಗಳಾಗಿದ್ದ ಮಹಾಮಹಿಮ ಶೀಲಸಂಪಾದನೆಯ ಶ್ರೀ ದೊಡ್ಡಸಿದ್ದವೀರ ಶಿವಯೋಗಿಗಳಿಂದ ಸ್ಥಾಪನೆಯಾಗಿ, ‘ಶ್ರೀ ಶೀಲಸಂಪಾದನೆ’ ಎಂಬ ವಿಶ್ವದ ಏಕೈಕ ಮಠ ಎಂದುಪ್ರಖ್ಯಾತಿಗೆ ಕಾರಣವಾಗಿದೆ.ಕರ್ತೃ ಗುರುಗಳಾದ ಶ್ರೀದೊಡ್ಡಸಿದ್ಧವೀರ ಶಿವಯೋಗಿಗಳಾದ ಮೇಲೆ ಸುಮಾರು25-26 ಸ್ವಾಮಿಗಳು ಮಠದ ಅಧಿಕಾರವನ್ನು ಪಡೆದುಕೊಂಡು ಧರ್ಮಜಾಗೃತಿ ಸ್ಥಳವನ್ನಾಗಿಮಾಡಿದ್ದಾರೆ. ಆದರೆ ಶ್ರೀಮಠದ ಪರಂಪರೆಯಲ್ಲಿ ಬಂದ ಗುರುಗಳ ಬಗ್ಗೆ ದಾಖಲೆಗಳಿಲ್ಲದಿರುವುದು ಬೇಸರದ ಸಂಗತಿ.ಶ್ರೀಮಠದ ಇತಿಹಾಸದಲ್ಲಿ ಶ್ರೀಸಿದ್ಧವೀರ ಸ್ವಾಮಿಗಳು ನಂತರ ಶ್ರೀ ಚಂದ್ರಶೇಖರಸ್ವಾಮಿಗಳು ಹಾಗೂ ತದನಂತರ ಈಗಿನ ಶ್ರೀಸಿದ್ದಲಿಂಗ ಸ್ವಾಮಿಗಳತನಕ ಪರಂಪರೆಯನ್ನುಗುರುತಿಸಬಹುದಾಗಿದೆ. ಶ್ರೀ ಸಿದ್ಧವೀರ ಸ್ವಾಮಿಗಳು ಹಾನಗಲ್ಲ ಶ್ರೀ ಗುರು ಕುಮಾರಶಿವಯೋಗಿಗಳಿಗೆ ಹಾಗೂ ಲಿಂ|| ಪಂಡಿತ ಪುಟ್ಟರಾಜ ಗವಾಯಿಗಳವರಿಗೆ ಕ್ರಿಯಾಮೂರ್ತಿಗಳಾಗಿದ್ದರು ಎಂಬುದು ಶ್ರೀಮಠದ ಇತಿಹಾಸದ ಹೆಗ್ಗಳಿಕೆ.ಎಲೆಮರೆಯ ಕಾಯಿಯಂತೆ ಗುಪ್ತವಾಗಿದ್ದ ಈ ಸುಕ್ಷೇತ್ರವನ್ನು ನಾಡಿಗೆಪರಿಚಯಿಸುವಲ್ಲಿ ಲಿಂ|| ಚಂದ್ರಶೇಖರ ಮಹಾಸ್ವಾಮಿಗಳ ಕರಸಂಜಾತರಾಗಿ 1995 ರಫೆಬ್ರವರಿ 17 ರಂದು ಶ್ರೀಪೀಠದ ಅಧಿಕಾರ ವಹಿಸಿಕೊಂಡ ಈಗಿನ ಶ್ರೀ ಸಿದ್ದಲಿಂಗಮಹಾಸ್ವಾಮಿಗಳವರ ಶ್ರಮ ಸ್ಮರಣೀಯ. ಶ್ರೀಗಳು ಅಧಿಕಾರ ವಹಿಸಿಕೊಂಡ ಅಲ್ಪಾವಧಿಯಲ್ಲೇ ನಾಡಿನಾಚೆಗೂ ಶ್ರೀಮಠ ಪರಿಚಿತಗೊಂಡು ಸರ್ವಧರ್ಮೀಯರ ಆಧ್ಯಾತ್ಮಸಾಧನೆಯ ಸ್ಪೂರ್ತಿಯ ಕೇಂದ್ರವನ್ನಾಗಿ ಮಾಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು
Date of Birth :
2-6-1976
Place :
ಗಿರಿಯಾಪುರ, ಕಡೂರು ತಾ||
Pattadikara :
12-2-1995
Photo :
Programs
ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಪ್ರತಿ ಹುಣ್ಣಿಮೆಯಂದು ಧಾರ್ಮಿಕ ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ. ಬಸವ ಜಯಂತಿ ಆಚರಣೆ.
Institutions
ಜಾಗತೀಕ ಅನುಭಾವ ಸಾಹಿತ್ಯ ಸಂಶೋಧನಾ ಕೇಂದ್ರ. ಶ್ರೀಗುರು ಚಂದ್ರಶೇಖರ ಮಹಾಶಿವಯೋಗಿ ವಿದ್ಯಾರ್ಥಿ ನಿಲಯ. ಶಿವಶರಣ ನುಲಿಯ ಚಂದಯ್ಯ ಅತಿಥಿ ಹಾಗೂ ಗುರುಗಳ ವಸತಿ ನಿಲಯ. ಕಾಲಜ್ಞಾನಿ ಶ್ರೀ ಸಿದ್ಧವೀರ ಶಿವಯೋಗಿ ಪ್ರಾರ್ಥನೆ ಮತ್ತು ಪ್ರವಚನ ಮಂದಿರ. ಮಹಾಶರಣೆ ಅಕ್ಕನಾಗಲಾಂಭಿಕೆ ಗ್ರಂಥಾಲಯ ಹಾಗೂ ಪುರಾತನ ಗ್ರಂಥ ಮತ್ತು ತಾಡೋಲೆ ಸಂರಕ್ಷಣಾ ಮಂದಿರ.
Photos
Full Address Kannada
ಶ್ರೀ ಶೀಲಸಂಪಾದನಾ ಮಠ ಗೋಣಿಬೀಡು- 577 115 ಭದ್ರಾವತಿ ತಾ., ಶಿವಮೊಗ್ಗ ಜಿ.