ಭದ್ರಾವತಿ ತಾಲ್ಲೂಕು ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಬಿಳಕಿಗ್ರಾಮದಲ್ಲಿ ಶ್ರೀರಂಭಾಪುರಿ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯ ಶ್ರೀಹಿರೇಮಠವು ಶ್ರೀ ಷ.ಬ್ರ.ಗುರುಬಸವ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತವಾಗಿದೆ ಎಂದುಹೇಳಲಾಗುತ್ತದೆ. ಶ್ರೀಮಠವು ಪುರಾತನ ಪರಂಪರೆಯನ್ನು ಹೊಂದಿದ್ದು ಈಗಿನ ಶ್ರೀಗಳು16ನೆಯವರೆಂದು ನಂಬಲಾಗಿದೆ.ಶ್ರೀಮಠದ ಕತೃಗುರುಗಳೆಂದು ಹೇಳಲಾದ ಶ್ರೀ ಗುರುಬಸವ ಶಿವಾಚಾರ್ಯಸ್ವಾಮಿಗಳು ತಪೋನಿಷ್ಠರಾಗಿದ್ದು ಮಠವನ್ನು ಧಾರ್ಮಿಕವಾಗಿ ಮುನ್ನಡೆಸಿದ್ದಾರೆ. ಹಾಗೆಯೇಶ್ರೀಮಠಕ್ಕೆ ಆಸ್ತಿಯನ್ನು ಸಂಪಾದಿಸಿ ಮಠ ಸ್ವಾವಲಂಬಿಯಾಗಿ ಅಭಿವೃದ್ಧಿಯಾಗುವಂತೆಮಾಡುವಲ್ಲಿ ಶ್ರಮಿಸಿದ್ದಾರೆ.ಶ್ರೀಮಠದ ಗುರುಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲದಿರುವುದು ಬೇಸರದ ಸಂಗತಿ. ಇಲ್ಲಿಯ ತನಕ 15 ಜನ ಸ್ವಾಮಿಗಳು ಆಡಳಿತ ನಡೆಸಿದರೆಂದುಹೇಳಲಾದರೂ ನಿಖರವಾದ ಮಾಹಿತಿಗಳು ಲಭ್ಯವಿರುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿಬರುವ ಶ್ರೀ ಗುರುಸಿದ್ದ ಶಿವಾಚಾರ್ಯರ ಬಗ್ಗೆ ಮಾತ್ರ ತಿಳಿದುಬರುತ್ತದೆ. ಶ್ರೀಗಳು ಮಹಾನ್ವಿದ್ವತ್ ಪಂಡಿತರಾಗಿದ್ದು ತಮ್ಮ ಪಾಂಡಿತ್ಯದಿಂದ ಹಾಗೂ ಕತೃಗುರುಗಳ ಆಶೀರ್ವಾದ ಬಲದಿಂದ ಮಠವನ್ನು, ಅದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು1990 ರ ಫೆಬ್ರವರಿ 2 ರಂದು ಸಾಲೂರು ಶ್ರೀಗಳ ದಿವ್ಯಸಾನಿಧ್ಯದಲ್ಲಿ ಪಟ್ಟಾಧಿಕಾರ ವಹಿಸಿಕೊಂಡರು. ಶ್ರೀಗಳು ಶಿಕಾರಿಪುರ ತಾಲ್ಲೂಕಿನ ಸಾಲೂರು ಮಠದಲ್ಲಿ ಸಂಸ್ಕøತ, ವೇದ ಹಾಗೂಆಗಮ ಶಾಸ್ತ್ರಗಳನ್ನು ಕಲಿತು ಸಾಲೂರು ಶ್ರೀಗಳ ನೆಚ್ಚಿನ ಶಿಷ್ಯರಾಗಿದ್ದರು.ಶ್ರೀಗಳು ಅಧಿಕಾರ ವಹಿಸಿಕೊಂಡ ಮೇಲೆ ಧಾರ್ಮಿಕ ಚಟುವಟಿಕೆಗಳನ್ನು ಚುರುಕುಗೊಳಿಸಿ ವೀರಶೈವ ಧರ್ಮೋಪದೇಶ ಮಾಡುತ್ತಾ ಭಕ್ತಾದಿಗಳ ಮನೆಮನೆಗೆ ಹೋಗಿಧಾರ್ಮಿಕ ಕ್ರಿಯಾದಿಗಳನ್ನು ಪೂರೈಸಿ ಧರ್ಮಾನುಷ್ಠಾನಗೊಳಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-7-1970
Place :
ಬಿಳಕಿ, ಭದ್ರಾವತಿ ತಾ||
Pattadikara :
2-2-1990
Photo :
Programs
ಪ್ರತಿ ಅಮಾವಾಸ್ಯೆಗೆ ರುದ್ರಾಭಿಷೇಕ ಹಾಗೂ ಕಾರ್ಯಕ್ರಮಗಳು. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿವಿಧ ಕಾರ್ಯಕ್ರಮಗಳು. ನವರಾತ್ರಿಗೆ ಶ್ರೀ ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ. ಆಶ್ವೀಜ ಬಹುಳ ತ್ರಯೋದಶಿಗೆ ಕತೃ ಶ್ರೀ ಷ.ಬ್ರ. ಗುರುಸಿದ್ದ ಶಿವಾಚಾರ್ಯರು ಹಾಗೂ ಲಿಂ. ಶ್ರೀ ಷ.ಬ್ರ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಹಿರೇಮಠ, ಬಿಳಕಿ ದೊಡ್ಡಮಘಟ್ಟ ಪೋಸ್ಟ್- 577 229 ಭದ್ರಾವತಿ ತಾ., ಶಿವಮೊಗ್ಗ ಜಿ.