Shree Khasamatha

Shree Khasamatha Claimed

ಶ್ರೀ ಖಾಸಾಮಠ

Average Reviews

Description

ಶ್ರೀ ಖಾಸಾಮಠ (ದೊಡ್ಡಮಠ)

ಕರ್ತೃ – ಶ್ರೀ ಮ.ನಿ.ಪ್ರ. ಶಾಂತವೀರ ಮಹಾಸ್ವಾಮಿಗಳು

ಸುಮಾರು 300 ವರ್ಷಗಳ ಹಿಂದೆ ಶ್ರೀ ಶಾಂತವೀರ ಮಹಾಸ್ವಾಮಿಗಳೆಂಬಮಹಾಮಹಿಮರು ಲೋಕಸಂಚಾರ ಕೈಗೊಂಡು ನಾರಾಯಣಪುರ(ಗುರುಮಠಕಲ್)ಕಾಡಿನಲ್ಲಿ ಅನುಷ್ಠಾನಗೊಂಡಿದ್ದ ಸಮಯದಲ್ಲಿ ಅನೇಕ ಭಕ್ತರಿಗೆ ತಮ್ಮ ತಪೋಬಲದಿಂದಒಳಿತನ್ನು ಮಾಡಿ ಭಕ್ತರಿಗೆ ಸನ್ಮಾರ್ಗ ತೋರಿದ್ದು ಆ ಭಕ್ತರ ಒತ್ತಾಸೆಯ ಮೇರೆಗೆ ಇಲ್ಲಿಯೇನೆಲೆನಿಂತರೆಂದು ತಿಳಿದುಬರುತ್ತದೆ. ಹೀಗೆ ನೆಲೆನಿಂತ ಶ್ರೀಗಳಿಗಾಗಿ ಭಕ್ತರು ಬೃಹದಾಕಾರದಮಠವನ್ನು ಕಟ್ಟಿಸಿಕೊಟ್ಟರು. ಶ್ರೀಗಳ ಪವಾಡಗಳನ್ನು ಕೇಳಿ ತಿಳಿದಿದ್ದ ಚಿತ್ರದುರ್ಗ ಮುರುಘಾಬೃಹನ್ಮಠದ ಶ್ರೀಗಳು ಇಲ್ಲಿಗೆ ಆಗಮಿಸಿ ಶ್ರೀಗಳ ತತ್ವಾದರ್ಶಗಳಿಗೆ ಮನಸೋತು ಇಲ್ಲಿ ಕೆಲಕಾಲನೆಲೆನಿಂತು ಜೀವಂತ ಸಮಾಧಿಹೋದರೆಂದು ಪ್ರತೀತಿ.ಹೀಗೆ ಶ್ರೀ ಶಾಂತವೀರ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ಶ್ರೀಮಠದಪರಂಪರೆಯು ಇಲ್ಲಿಯವರೆಗೂ 10 ಜನ ಶ್ರೀಗಳ ಮುಖಾಂತರ ಮುಂದುವರೆದುಕೊಂಡುಬಂದಿದ್ದು ಕರ್ತೃಗುರುಗಳ ನಂತರ ಅಧಿಕಾರಕ್ಕೆ ಬಂದಿರುವ ಎಲ್ಲಾ ಗುರುಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಮಠದ 8ನೇ ಶ್ರೀಗಳಾದ ಶ್ರೀ ಶಾಂತವೀರ ಸ್ವಾಮಿಗಳುಯಾನಗುಂದಿಯ ಶ್ರೀ ಮಾತಾ ಮಾಣಿಕ್ಯೇಶ್ವರಿ ತಾಯಿಯವರಿಗೆ ಅನುಗ್ರಹ ನೀಡಿಆಶೀರ್ವದಿಸಿದರೆಂದೂ, ಮಾತೆಯವರು ಶ್ರೀಮಠದಲ್ಲೇ ಇರುವ ಶ್ರೀದೇವಿ ಮಂದಿರದಗುಹೆಯಲ್ಲಿ ಅನುಷ್ಠಾನಗೈದರೆಂದು ತಿಳಿದುಬರುತ್ತದೆ.ಹೀಗೆ ಮಹಾಮಹಿಮರ ಅನುಷ್ಠಾನದಿಂದಾಗಿ ತನ್ನದೇ ಆದ ಹಿರಿಮೆಯನ್ನುಹೊಂದಿರುವ ಶ್ರೀಮಠವು, 1886ರಲ್ಲಿ ಲಿಂಗೈಕ್ಯರಾದ 8ನೇ ಶ್ರೀಗಳ ನಂತರ ಸುಧೀರ್ಘ 8ದಶಕಗಳ ಕಾಲ ಖಾಲಿ ಉಳಿದದ್ದು ಬೇಸರದ ಸಂಗತಿ. ಆನಂತರ 1965ರಲ್ಲಿ ಶ್ರೀಮಠದಅಧಿಕಾರ ವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಂಗಮೇಶ್ವರ ಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಗೆ ಚಾಲನೆ ನೀಡಿ ಶ್ರೀಮಠವನ್ನುಪ್ರಚಲಿತಕ್ಕೆ ತಂದರು. ಪ್ರಸ್ತುತ ಶ್ರೀ ಮ.ನಿ.ಪ್ರ. ಶಾಂತವೀರ ಗುರು ಮುರುಘರಾಜೇಂದ್ರಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀಗಳು ನಿರಂತರವಾಗಿ ಧಾರ್ಮಿಕ, ಸಾಮಾಜಿಕಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಯಲ್ಲಿ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ವಿಶೇಷತೆ:
ಶ್ರೀಮಠದಲ್ಲಿ ಕಲ್ಲಿನ ಗುಂಡುಗಳು, ಕಲ್ಲಿನ ದೊಡ್ಡ ಹಂಡೆ,
ಶಿಲ್ಪಕಲಾ ಕೆತ್ತನೆ ಹೊಂದಿರುವ ಮುಖ್ಯ ದ್ವಾರಗಳಿವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು
Date of Birth :
2-6-1979
Place :
ತೋಪೇನಹಳ್ಳಿ, ಚನ್ನಗಿರಿ ತಾ||
Photo :

Programs

ಪ್ರತಿ ಹುಣ್ಣಿಮೆಗೆ ಗಜಾರ್ ಖೋಟ್‍ನಲ್ಲಿ ‘ಅರಿವು ಆಚಾರ’ ಉಪನ್ಯಾಸ ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ ಹಾಗೂ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ.
ನಾಗರಪಂಚಮಿಯಂದು ಶಾಲೆಯ ಮಕ್ಕಳಿಗೆ ಹಾಲು ಕುಡಿಸುವ ಕಾರ್ಯಕ್ರಮ.
ಮಾಘ ಮಾಸದಲ್ಲಿ ಪ್ರಸ್ತುತ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ.
ನವೆಂಬರ್ 8 ರಂದು ಲಿಂ. ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳ
ಸ್ಮರಣೋತ್ಸವ ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ.
ಬಸವ ಜಯಂತಿ ಆಚರಣೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಫ್ರೌಢಶಾಲೆ

Photos

Full Address Kannada

ಶ್ರೀ ಖಾಸಾಮಠ (ದೊಡ್ಡಮಠ)
ಗುರುಮಠಕಲ್ - 585 214
ಯಾದಗಿರಿ ತಾ|| ಜಿ||

Map

Near by Places

ಯಾದಗಿರಿ - 40 ಕಿ.ಮೀ.
ಶಹಾಪುರ - 70 ಕಿ.ಮೀ.
ಸುರಪುರ - 65 ಕಿ.ಮೀ.
ಕಲಬುರ್ಗಿ - 100 ಕಿ.ಮೀ.

Statistic

114 Views
0 Rating
0 Favorite
0 Share
error: Content is protected !!