ಸುರಪುರ ಪಟ್ಟಣವು ಪುರಾತನ ಪಟ್ಟಣವಾಗಿದ್ದು ಸುಮಾರು 16-17ನೇಶತಮಾನಗಳಲ್ಲಿ ವೈಭವಯುತ ರಾಜಾಳ್ವಿಕೆಯನ್ನು ಹೊಂದಿತ್ತು. ಅಂತಹ ಸುರಪುರಸಂಸ್ಥಾನದ ಪ್ರಧಾನ ಮಂತ್ರಿಗಳ ಮನೆತನವೇ ನಿಷ್ಠಿಯವರ ಮನೆತನ. ಆ ಮನೆತನದಲ್ಲಿ ಜನ್ಮತಳೆದ ಶ್ರೀ ನಿಷ್ಠಿ ಕಡ್ಲಪ್ಪನವರು ಸಂಸ್ಥಾನದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದವರು.ಇವರು ಧರ್ಮಾನುಯಾಯಿಗಳಾಗಿದ್ದು ನಾಡಿನಾದ್ಯಂತ 101 ಮಠ, ಕೆರೆ, ಬಾವಿಗಳನ್ನುಕಟ್ಟಿಸಿದ ಮಹನೀಯರು. ಈ ಎಲ್ಲಾ ಮಠಗಳ ಕೇಂದ್ರಸ್ಥಾನವಾಗಿದ್ದುದೇ ಶ್ರೀ ಕಡ್ಲಪ್ಪನವರಮಠ. ಅವರ ಪ್ರೇರಕ ಶಕ್ತಿಯಾಗಿದ್ದವರು ಶ್ರೀಮಠದ ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ.ಪ್ರಭುಲಿಂಗ ಮಹಾಸ್ವಾಮಿಗಳು.ಉತ್ತರದ ಕಡೆಯಿಂದ ಬಂದು ಸುರಪುರದಲ್ಲಿ ನೆಲೆನಿಂತ ಶ್ರೀ ಪ್ರಭುಲಿಂಗಸ್ವಾಮಿಗಳ ತೇಜಸ್ಸಿಗೆ ಮಾರುಹೋದ ಕಡ್ಲಪ್ಪನವರು, ಅವರಿಗೆ ಸುರಪುರದಲ್ಲಿ ಮಠ ಕಟ್ಟಿಸಿಕೊಟ್ಟು ಅವರ ಅನುಯಾಯಿಗಳಾದರು. ಶ್ರೀ ಪ್ರಭುಲಿಂಗಸ್ವಾಮಿಗಳು ಕಡ್ಲಪ್ಪನವರಿಗೆ ಹಾಗೂವೀರಪ್ಪನವರಿಗೆ ಆಶೀರ್ವದಿಸಿ ಅವರಿಗೆ ನಾಡಿನಾದ್ಯಂತ ಕೆರೆಕಟ್ಟೆಗಳು, ಮಠಗಳನ್ನುಸ್ಥಾಪಿಸಲು ಆದೇಶಿಸಿ ಆ ಪುಣ್ಯಕಾರ್ಯಕ್ಕಾಗಿ ತಮ್ಮ ಬೆಳ್ಳಿ ಬೆತ್ತವನ್ನು ನೀಡಿದರೆಂದು ಪ್ರತೀತಿ.ಹೀಗೆ ಪ್ರಾರಂಭವಾದ ಶ್ರೀಮಠದ ಪರಂಪರೆಯಲ್ಲಿ ನಂತರ ಬಂದ ಶ್ರೀಬಸವಲಿಂಗ ಸ್ವಾಮಿಗಳು ಬಲಶೆಟ್ಟಿಹಾಳದ ಮಠದಲ್ಲಿ ಲಿಂಗೈಕ್ಯರಾಗಿದ್ದು ಅವರ ಗದ್ದುಗೆಪೂಜ್ಯನೀಯವಾಗಿದೆ. ನಂತರದ ಮೂರು ಜನ ಶ್ರೀಗಳ ಗದ್ದುಗೆಗಳು ನಾಯ್ಕಲ್‍ದ ವಿರಕ್ತಮಠದಲ್ಲಿವೆ. ನಂತರ ಬಂದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು ಶ್ರೀಮಠವನ್ನುಪ್ರಚಲಿತಕ್ಕೆ ತಂದಿದ್ದು ಇವರ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿಗೊಂಡಿದೆ. ಇವರಿಗೆಕರ್ನಾಟಕಾದಿ ಆಂಧ್ರಪ್ರದೇಶಗಳಲ್ಲೂ ಅನುಯಾಯಿಗಳಿರುವುದು ಕಂಡುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭುಲಿಂಗಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳೊಂದಿಗೆ, ಪುರಾಣ-ಪ್ರವಚನಗಳು, ಧರ್ಮಸಭೆಗಳನ್ನು ಏರ್ಪಡಿಸುತ್ತಾ ಧರ್ಮಜಾಗೃತಿ ಮಾಡುತ್ತಿದ್ದು ಮಾಘಮಾಸದಲ್ಲಿ ಲಿಂ. ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಹಮ್ಮಿಕೊಂಡು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿಗೋಶಾಲೆಯನ್ನು ಪ್ರಾರಂಭಿಸಿದ್ದು ಗೋಸಂತತಿಯ ರಕ್ಷಣೆಗೆ ಕಟಿಬದ್ಧರಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪ್ರಭುಲಿಂಗ ಮಹಾಸ್ವಾಮಿಗಳು
Date of Birth :
9-5-1965
Place :
ಸುರಪುರ (ತಾ||)
Pattadikara :
2001
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಭಜನೆ
ಫಾಲ್ಗುಣ ಶುದ್ಧ ನವಮಿಗೆ
ಲಿಂ. ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳ ಪುಣ್ಯಾರಾಧನೆ.