Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ರುಕ್ಮಾಪುರ

ಕರ್ತೃ – ಪರಮಪೂಜ್ಯ ಶ್ರೀ ಕಲ್ಲಯ್ಯ ಸ್ವಾಮಿಗಳು

ಸುರಪುರ ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವರುಕ್ಮಾಪುರ ಗ್ರಾಮದ ಹೊರವಲಯದಲ್ಲಿ ಪೂಜ್ಯ ಶ್ರೀ ಕಲ್ಲಯ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದೆ. ಶ್ರೀಮಠವು ಶ್ರೀ ರಂಭಾಪುರಿಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳ ಕಾಲಮಾನದ ಬಗ್ಗೆ ನಿಖರತೆಯಿಲ್ಲವಾದರೂ ಅವರ ಕರ್ತೃತ್ವ ಶಕ್ತಿಯಿಂದಾಗಿ ಶ್ರೀಮಠವು ಪ್ರಚಲಿತದಲ್ಲಿದೆ ಎಂದು ತಿಳಿದುಬರುತ್ತದೆ. ಕರ್ತೃಗುರುಗಳ ನಂತರಶ್ರೀ ಹುಚ್ಚಕಲ್ಲಯ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸಿದ್ದು ಇವರಧಾರ್ಮಿಕ ಹುಚ್ಚಿನಿಂದಾಗಿ ಭಕ್ತರು ಇವರನ್ನು ಹುಚ್ಚಕಲ್ಲಯ್ಯ ಸ್ವಾಮಿಗಳೆಂದೇ ಕರೆದರು.ಇವರ ನಂತರ ಬಂದವರೇ ಶ್ರೀ ಷ.ಬ್ರ. ಗುರುಶಾಂತವೀರ ಶಿವಾಚಾರ್ಯ ಸ್ವಾಮಿಗಳು.ಶ್ರೀ ಗುರುಶಾಂತವೀರ ಶಿವಾಚಾರ್ಯ ಸ್ವಾಮಿಗಳು ಕೇವಲ 35 ವರ್ಷಗಳ ಕಾಲಜೀವಿಸಿದ್ದರೂ ಇವರ ಕೀರ್ತಿ ಅಪಾರ. ಶ್ರೀಗಳು ಪವಾಡ ಪುರಷರಾಗಿ, ವಾಕ್‍ಸಿದ್ಧಿಪುರುಷರಾಗಿ, ಶ್ರೀ ಹಿರೇಮಠದ ಪೀಠಾಧಿಪತಿಗಳಾಗಿ ಸಮಗ್ರ ಭಕ್ತರ ಸಮಸ್ಯೆ, ಆತಂಕಗಳನ್ನುದೂರಮಾಡಿ, ಧರ್ಮದ ವಿಚಾರಗಳನ್ನು ತಿಳಿಸುತ್ತಾ, ಸಾಮಾಜಿಕ ಜೀವನವನ್ನು ರೂಪಿಸುತ್ತಾಸುತ್ತಮುತ್ತಲಿನ ಗ್ರಾಮಗಳ ಭಕ್ತರ ಆರಾಧ್ಯ ಪುರುಷರಾದರು. ಶ್ರೀಗಳು ಭಕ್ತರಿಗೆ ಸೂಕ್ತಮಾರ್ಗದರ್ಶನ ಮಾಡುತ್ತಾ ಕ್ರಿ.ಶ. 1883ರ ಭಾದ್ರಪದ ಮಾಸ ಬಹುಳ ಅಷ್ಟಮಿಯಲ್ಲಿಲಿಂಗೈಕ್ಯರಾದರು. ಇಂದಿಗೂ ಭಾದ್ರಪದ ಮಾಸದ ಬಹುಳ ಅಷ್ಟಮಿ, ನವಮಿ, ದಶಮಿಗಳಲ್ಲಿಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ಶ್ರೀಮಠದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮಿಗಳು2007ರಲ್ಲಿ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶ್ರೀಮಠದ ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಾಗೂ ಶ್ರೀಮಠದ ಸಮಗ್ರ ಅಭಿವೃದ್ಧಿಗೆಶ್ರಮಿಸುತ್ತಿರುವ ಶ್ರೀಗಳು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮಿಗಳು
Date of Birth :
1-4-1986
Place :
ರುಕ್ಮಾಪುರ, ಸುರಪುರ ತಾ||
Pattadikara :
3-3-2007
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ಭಾದ್ರಪದ ಮಾಸದಲ್ಲಿ ಅಷ್ಟಮಿ ಮತ್ತು
ನವಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.

Photos

Full Address Kannada

ಶ್ರೀ ಹಿರೇಮಠ
ರುಕ್ಮಾಪುರ - 585 290
ಸುರಪುರ ತಾ||, ಯಾದಗಿರಿ ಜಿ||

Map

Near by Places

ಸುರಪುರ - 5 ಕಿ.ಮೀ.
ತಿಥಣಿ ಸೇತುವೆ - 23 ಕಿ.ಮೀ.
ಕಲಬುರ್ಗಿ - 110 ಕಿ.ಮೀ.

Statistic

22 Views
0 Rating
0 Favorite
0 Share
error: Content is protected !!