ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಪರಮಪೂಜ್ಯ ಶ್ರೀಬಲವಂತ ಶರಣರಿಂದ ಸ್ಥಾಪಿತಗೊಂಡಿರುವ ಶ್ರೀ ಶರಣ ಬಸವೇಶ್ವರ ದಾಸೋಹ ಮಠವುತನ್ನ ವಿಶಿಷ್ಟ ಪರಂಪರೆಯಿಂದ, ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ಬಲವಂತ ಶರಣರು, ಶ್ರೀ ಶರಣ ಬಸವೇಶ್ವರರಆಶೀರ್ವಾದದಿಂದ ಅರಳುಗುಂಡಿಗೆಯಲ್ಲಿ ಜನಿಸಿದವರು. ಗುರುಗಳು ಬಾಲ್ಯದಲ್ಲೇಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಅನುಷ್ಠಾನಾದಿಗಳನ್ನು ಕೈಗೊಳ್ಳುತ್ತಾ ಭಕ್ತರಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಶ್ರೀಗಳು ಲೋಕಸಂಚಾರ ಕೈಗೊಂಡು ನಗನೂರುಗ್ರಾಮಕ್ಕೆ ಆಗಮಿಸಿ ಶ್ರೀಮಠವನ್ನು ಸ್ಥಾಪಿಸಿದ್ದು ವೀರಶೈವ ಧರ್ಮದ ಆಚರಣೆಗಳ ಮೂಲಕಧರ್ಮದ ತಳಹದಿಯ ಮೇಲೆ ಸಮಾಜವನ್ನು ರೂಪಿಸಿದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಕೆಲ ಶ್ರೀಗಳ ಹೆಸರನ್ನು ದಾಖಲಿಸಿದೆಯಾದರೂ ಅವರುಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಗುವುದಿಲ್ಲ. ಶ್ರೀಮಠದ ಪರಂಪರೆಯವಿಶೇಷತೆಯೆಂದರೆ ಪುತ್ರವರ್ಗದ ಸಂಪ್ರದಾಯದಲ್ಲಿ ಬೆಳೆದ ಶ್ರೀಮಠದ ಗುರುಗಳುಸಂಸಾರಿಗಳಾಗಿಯೇ ಧರ್ಮಗುರುಗಳಾಗಿ ಪರಂಪರೆಯನ್ನು ಬೆಳೆಸಿರುವುದು.ಪ್ರಸ್ತುತ ಪೂಜ್ಯ ಶ್ರೀ ಶರಣಪ್ಪ ಶರಣರು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬಂದಿದ್ದು ಶ್ರೀಮಠದ ಅಭಿವೃದ್ಧಿಯತ್ತ ಚಿತ್ತ ಹರಿಸಿದ್ದಾರೆ. ಶ್ರೀಗಳು ಭಕ್ತರಸಹಕಾರದೊಂದಿಗೆ ಶ್ರೀಮಠದಲ್ಲಿ ವಿಶಿಷ್ಟ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕೃಷಿಮೇಳ, ಸಂಗೀತ ಗೋಷ್ಠಿಗಳನ್ನು ಆಗಾಗಆಯೋಜಿಸುತ್ತಾ ಬಂದಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತದೆ. ಹಾಗೂ ಚೈತ್ರಮಾಸದಲ್ಲಿಶ್ರೀಮಠದ ಜಾತ್ರೆ ನಡೆಯುತ್ತಿದ್ದು ಆ ಸಮಯದಲ್ಲಿ ಸಾಮೂಹಿಕ ವಿವಾಹಗಳೊಂದಿಗೆ ವಿವಿಧಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಶರಣಪ್ಪ ಶರಣರು
Place :
ನಗನೂರು, ಸುರಪುರ ತಾ||
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.
ಚೈತ್ರ ಮಾಸದಲ್ಲಿ ಶ್ರೀಮಠದ ಜಾತ್ರೆ, ಸಾಮೂಹಿಕ ವಿವಾಹಗಳು
ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.