Shree Durudundeshwara Virakta Matha

Shree Durudundeshwara Virakta Matha Claimed

ಶ್ರೀ ದುರುದುಂಡೇಶ್ವರ ವಿರಕ್ತ ಮಹಾಮಠ

Average Reviews

Description

ಶ್ರೀ ದುರುದುಂಡೇಶ್ವರ ವಿರಕ್ತ ಮಹಾಮಠ

ಕರ್ತೃ – ಪರಮಪೂಜ್ಯ ಶ್ರೀ ದುರದುಂಡೇಶ್ವರ ಮಹಾಸ್ವಾಮಿಗಳು

ಸುರಪುರ ತಾಲ್ಲೂಕು ಕೊಡೇಕಲ್ ಗ್ರಾಮದ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ದುರುದುಂಡೇಶ್ವರ ವಿರಕ್ತ ಮಹಾಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠವು ಸುಮಾರು 12ನೇ ಶತಮಾನದಲ್ಲಿಯೇ ಬಸವಾದಿ ಪ್ರಥಮರಿಂದಸ್ಥಾಪಿತಗೊಂಡಿತೆಂದು ಹೇಳಲಾದರೂ ದಾಖಲೆಗಳು ಲಭ್ಯವಿಲ್ಲ. ಆನಂತರ ದೀರ್ಘಕಾಲಖಾಲಿ ಉಳಿದಿರುವ ಶ್ರೀಮಠವನ್ನು ಪರಮಪೂಜ್ಯ ಶ್ರೀ ದುರದುಂಡೇಶ್ವರ ಮಹಾಸ್ವಾಮಿಗಳುಪುನರ್‍ಸ್ಥಾಪಿಸಿ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆಂದು ಹೇಳಲಾಗಿದ್ದು ಈ ಕಾರಣದಿಂದಾಗಿಶ್ರೀಮಠವನ್ನು ಶ್ರೀ ದುರದುಂಡೇಶ್ವರ ವಿರಕ್ತ ಮಹಾಮಠವೆಂದೇ ಕರೆಯಲಾಗುತ್ತದೆ.ಕರ್ತೃಗುರುಗಳ ನಂತರದ ಇತಿಹಾಸದಲ್ಲಿ ಪೂಜ್ಯ ಶ್ರೀ ದೊಡ್ಡ ಸಿದ್ದಲಿಂಗೇಶ್ವರರು,ಶ್ರೀ ಸಣ್ಣ ಸಿದ್ದಲಿಂಗೇಶ್ವರರು, ಪೂಜ್ಯ ಶರಣಯ್ಯನವರು ಹೀಗೆ ಪರಂಪರೆ ಮುಂದುವರೆದಿದೆ.ಪೂಜ್ಯ ಶರಣಯ್ಯನವರಿಂದ ಮರಿದೇವರಾಗಿ ನೇಮಕಗೊಂಡ ಶ್ರೀ ಸಿದ್ದಲಿಂಗೇಶ್ವರರುಆನಂತರ ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. ಇವರ ಕಾಲಾನಂತರ ಇವರ ಪುತ್ರಿಯಾದ ಶರಣೆಗುರುಲಿಂಗಮ್ಮ ತಾಯಿಯವರು ಶ್ರೀಮಠವು ಖಾಲಿ ಉಳಿಯಬಾರದೆಂದು ತಮ್ಮ ಮಗನಾದಶ್ರೀ ಶಿವಕುಮಾರ ದೇವರನ್ನು ಶ್ರೀಮಠಕ್ಕೆ ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಸೂಚನೆಯಮೇರೆಗೆ ಮರಿಯಾಗಿ ಬಿಡುತ್ತಾರೆ. ಅವರೇ ಈಗಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು.ಶ್ರೀಗಳು ತಮ್ಮ ಬಾಲ್ಯಾವಸ್ಥೆಯಿಂದಲೂ ಗುರುಹಿರಿಯರ ಸೇವೆ ಮಾಡುತ್ತಾ ಅವರಕೃಪಾಶೀರ್ವಾದಕ್ಕೆ ಒಳಗಾದವರು. ಸಂಸ್ಕøತ, ವೇದ, ಯೋಗ, ಸಂಗೀತ, ಕಾವ್ಯ ಮುಂತಾದವಿಷಯಗಳನ್ನು ಸಜ್ಜಲಗುಡ್ಡದಲ್ಲಿ ಅಭ್ಯಸಿಸಿದ ಶ್ರೀಗಳು ಸುಮಾರು 30 ವರ್ಷಗಳ ಕಾಲ ಖಾಲಿಉಳಿದಿದ್ದ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ತಮ್ಮ ಸಾಮಾಜಿಕ,ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನುಸಂಪಾದಿಸಿದ್ದು ಅವರಿಗೆ ಸನ್ಮಾರ್ಗ ತೋರುತ್ತಿದ್ದಾರೆ. 2000ರಲ್ಲೇ ಶ್ರೀಮಠಕ್ಕೆ ಆಗಮಿಸಿರುವಶ್ರೀಗಳು ಶ್ರೀಮಠವನ್ನು ಉನ್ನತೀಕರಿಸಿದ ನಂತರವಷ್ಟೇ ಪಟ್ಟಾಧಿಕಾರ ಸ್ವೀಕರಿಸಲಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು
Date of Birth :
4-8-1978
Place :
ಕೊಡೇಕˉï, ಸುರಪರ ತಾ||
Pattadikara :
ನವೆಂಬರ್ 2000
Photo :

Programs

ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಪ್ರತಿ ಅಮವಾಸ್ಯೆಗೆ ಶ್ರೀಮಠದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ನಿತ್ಯ ಶ್ರೀ ದುರದುಂಡೇಶ್ವರ ಕಾರ್ತಿಕೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ.
ಶಿವರಾತ್ರಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ.

Institutions

ಪೂರ್ವ ಪ್ರಾಥಮಿಕ ಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
ಸಂಸ್ಕøತ / ಸಂಗೀತ ಪಾಠಶಾಲೆ.
ಐ.ಟಿ.ಐ. ಕಾಲೇಜು.
ಶ್ರೀ ದುರದುಂಡೇಶ್ವರ ಉಚಿತ ವಸತಿನಿಲಯ.

Photos

Full Address Kannada

ಶ್ರೀ ದುರುದುಂಡೇಶ್ವರ ವಿರಕ್ತ
ಮಹಾಮಠ ಕೊಡೇಕಲ್ - 585 237
ಸುರಪುರ ತಾ||, ಯಾದಗಿರಿ ಜಿ||

Map

Near by Places

ನಾರಾಯಣಪುರ - 10 ಕಿ.ಮೀ.
ತಿಥಿಣಿ ಸೇತುವೆ - 25 ಕಿ.ಮೀ.
ಮುದ್ದೇಬಿಹಾಳ - 20 ಕಿ.ಮೀ.
ಸುರಪುರ - 35 ಕಿ.ಮೀ.

Statistic

82 Views
0 Rating
0 Favorite
0 Share
error: Content is protected !!