Shree Guru Kanteshwara Samsthana Hirematha
Claimed
ಶ್ರೀ ಗುರು ಕಾಂತೇಶ್ವರ ಸಂಸ್ಥಾನ ಹಿರೇಮಠ
Average Reviews
Description
ಶ್ರೀ ಗುರು ಕಾಂತೇಶ್ವರ ಸಂಸ್ಥಾನ ಹಿರೇಮಠ
ಕರ್ತೃ – ಶ್ರೀ ಷ.ಬ್ರ. ಕಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು
ಯಾದಗಿರಿ ಜಿಲ್ಲೆಯ ಕೆಂಭಾವಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಕಾಂತೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗುರು ಕಾಂತೇಶ್ವರ ಸಂಸ್ಥಾನಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಕೆಂಭಾವಿಗೆ ಸಮೀಪದ ಕಮರಿ ಮಠದಲ್ಲಿದ್ದ ಶ್ರೀಗುರು ಕಾಂತೇಶ್ವರ ಸ್ವಾಮಿಗಳಪವಾಡಗಳ ಬಗ್ಗೆ ತಿಳಿದಿದ್ದ ನಿಜಾಮನ ಪರಿವಾರದವರೊಬ್ಬರು ಅವರನ್ನು ಪರೀಕ್ಷಿಸಲೆಂದುಕಾದ ಕಬ್ಬಿಣದ ಸರಪಳಿಯನ್ನು ಗುರುಗಳ ಕೊರಳಿಗೆ ಹಾಕಿದಾಗ ಅದು ಹೂವಿನ ಹಾರವಾಗಿಪರಿವರ್ತನೆಯಾಗುತ್ತದೆ. ಈ ಪವಾಡದಿಂದ ಗುರುಗಳಿಗೆ ಶರಣಾದ ನಿಜಾಮನ ಪರಿವಾರವುಅವರಿಗೆ ಸುತ್ತ ಅರವತ್ನಾಲ್ಕು ಹಳ್ಳಿಗಳನ್ನು ಉಂಬಳಿಯನ್ನಾಗಿ ನೀಡಿದರೆಂಬ ಕತೆಯು ಈಭಾಗದಲ್ಲಿ ಪ್ರಚಲಿತದಲ್ಲಿದೆ.ಶ್ರೀ ಗುರು ಕಾಂತೇಶ್ವರರು ಆನಂತರ ಧರ್ಮಪ್ರಚಾರ ಮಾಡುತ್ತಾ ಲೋಕಸಂಚಾರ ಕೈಗೊಂಡು ಅಲ್ಲಲ್ಲಿ ಅನುಷ್ಠಾನಗೈಯುತ್ತಾ ಕೆಂಭಾವಿಗೆ ಆಗಮಿಸಿದರೆಂದು, ನಂತರಇಲ್ಲೇ ನೆಲೆಗೊಂಡು ಮಠವನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ. ಹೀಗೆ ಪ್ರಾರಂಭವಾದಶ್ರೀಮಠದ ಪರಂಪರೆಯ ಮುಂದಿನ ಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳುಲಭ್ಯವಿಲ್ಲದಿರುವುದು ಬೇಸರದ ಸಂಗತಿ.ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಪಟ್ಟಾದಿಕಾರವನ್ನು ಸ್ವೀಕರಿಸಿ ತಮ್ಮ ಶಿವಪೂಜಾ ನಿಷ್ಠತೆಯಿಂದ ಧಾರ್ಮಿಕಆಚರಣೆಗಳಿಂದಾಗಿ ಶ್ರೀಮಠವನ್ನು ಮುನ್ನಡೆಸಿದ್ದು 1962ರಲ್ಲಿ ಲಿಂಗೈಕ್ಯರಾಗಿದ್ದಾರೆ. ಆದರೆಗುರುಗಳ ಕಾಲಾನಂತರ ಶ್ರೀಮಠವು ಮೂರು ದಶಕಗಳಿಗೂ ಅಧಿಕ ಕಾಲ ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯರು 1995ರಲ್ಲಿಶ್ರೀಮಠದ ಪಟ್ಟಕ್ಕೆ ಬಂದಿದ್ದು ಬಹುಕಾಲ ಖಾಲಿ ಉಳಿದಿದ್ದ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ಮಹೋತ್ಸವವನ್ನು ನಡೆಸುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
1-3-1975
Place :
ಕೆಂಭಾವಿ, ಸುರಪುರ ತಾ||
Pattadikara :
1995
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Photos
Full Address Kannada
ಶ್ರೀ ಗುರು ಕಾಂತೇಶ್ವರ ಸಂಸ್ಥಾನ ಹಿರೇಮಠ
ಕೆಂಭಾವಿ - 585 216
ಸುರಪುರ ತಾ||, ಯಾದಗಿರಿ ಜಿ||