Shree Jade Shantalingeswara Samsthana Hirematha

Shree Jade Shantalingeswara Samsthana Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಜಡೆ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಜಡೆ ಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು

ಸುರಪುರ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ದೇವಾಪುರಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಜಡೆ ಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಜಡೆಶಾಂತ ಲಿಂಗೇಶ್ವರ ಸಂಸ್ಥಾನಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಜಡೆಶಾಂತಲಿಂಗೇಶ್ವರ ಶಿವಾಚಾರ್ಯರ ಕಾಲಮಾನಹಾಗೂ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆ ಇಲ್ಲ. ಕರ್ತೃಗುರುಗಳ ನಂತರ ಪರಂಪರೆಯುಸ್ಥಗಿತಗೊಂಡಿದ್ದು ಪುನಃ 13ನೇ ಶತಮಾನದಲ್ಲಿ ಶ್ರೀ ಷ.ಬ್ರ. ಸಿದ್ದಲಿಂಗ ದೇಶಿಕಮಹಾಸ್ವಾಮಿಗಳಿಂದ ಪುನರಾರಂಭಗೊಂಡು ಇಲ್ಲಿಯವರೆಗೂ ಸುಮಾರು 42 ಜನ ಶ್ರೀಗಳುಶ್ರೀಮಠದ ಪಟ್ಟಕ್ಕೆ ಬಂದಿದ್ದಾರೆಂದು ಹೇಳಲಾಗುತ್ತದೆ. ಆದರೆ ಅವರುಗಳ ಹೆಸರುಗಳುಪೂರ್ಣವಾಗಿ ಲಭ್ಯವಿಲ್ಲ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯಸ್ವಾಮಿಗಳು 1975ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿಕಾರ್ಯರೂಪಕ್ಕೆ ತರುವಾಗಲೇ 1987ರಲ್ಲಿ ಲಿಂಗೈಕ್ಯರಾದರು. ಈ ಕಾರಣದಿಂದಾಗಿಶ್ರೀಮಠವು ಮತ್ತೊಮ್ಮೆ ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು 2001ರಏಪ್ರಿಲ್ 19ರಂದು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು ಶ್ರೀಮಠದ ಸರ್ವಾಂಗೀಣಅಭಿವೃದ್ದಿಗೆ ಯೋಜನೆ ರೂಪಿಸಿಕೊಂಡು ಶ್ರಮವಹಿಸುತ್ತಿದ್ದಾರೆ ಹಾಗೂ ಭಕ್ತರನ್ನುಸಂಘಟನಾತ್ಮಕವಾಗಿ ಸಂಘಟಿಸಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ಪ್ರತಿವರ್ಷ ತಮ್ಮ ಪಟ್ಟಾಭಿಷೇಕದ ವಾರ್ಷಿಕೋತ್ಸವದಲ್ಲಿ ವಿವಿಧಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಪ್ರತಿ ಮೂರುವರ್ಷಗಳಿಗೊಮ್ಮೆ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು
Date of Birth :
13-12-1983
Place :
ದೇವಾಪುರ, ಸುರಪುರ ತಾ||
Pattadikara :
19-4-2001
Photo :

Programs

ವೈಶಾಖ ಮಾಸದಲ್ಲಿ 15 ದಿನಗಳ ಕಾಲ ಪುರಾಣ,
ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.

Photos

Full Address Kannada

ಶ್ರೀ ಜಡೆ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ
ದೇವಾಪುರ - 585 224
ಸುರಪುರ ತಾ||, ಯಾದಗಿರಿ ಜಿ||

Map

Near by Places

ತಿಥಣಿ ಸೇತುವೆ - 9 ಕಿ.ಮೀ.
ಸುರಪುರ - 10 ಕಿ.ಮೀ.
ಲಿಂಗಸೂಗೂರು - 38 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!