ಸುಮಾರು 350 ವರ್ಷಗಳ ಹಿಂದೆ ಶಹಾಪುರದ ಸಮೀಪದ ಕಲ್ಲುಬೆಟ್ಟದ ಮೇಲೆಶ್ರೀ ಮ.ನಿ.ಪ್ರ. ಶೀಲವಂತೇಶ್ವರ ಮಹಾಸ್ವಾಮಿಗಳಿಗೋಸ್ಕರ ಭಕ್ತರಿಂದ ಸ್ಥಾಪಿಸಲ್ಪಟ್ಟ ಮಠವೇಶ್ರೀ ಫಕೀರೇಶ್ವರ ಮಠ. ಕಾಲಕ್ರಮೇಣ ಬೆಟ್ಟದ ಮೇಲಿದ್ದ ಮಠವನ್ನು ಶಹಪುರ ಪಟ್ಟಣದಒಳಗಡೆ ನಿರ್ಮಿಸಿದ ಮಠಕ್ಕೆ ಸ್ಥಳಾಂತರಿಸಲಾಗಿದ್ದು ಶ್ರೀಮಠವು ಹಿಂದೂ-ಮುಸ್ಲಿಂಭಾವೈಕ್ಯತಾ ಕೇಂದ್ರವಾಗಿದೆ.ಕರ್ತೃಗುರುಗಳಾದ ಶ್ರೀ ಶೀಲವಂತೇಶ್ವರ ಸ್ವಾಮಿಗಳು ತಮ್ಮ ತಪಸ್ಸಿನ ಪ್ರಭಾವದಿಂದ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಮಠವನ್ನು ಬೆಟ್ಟದ ಮೇಲೆಸ್ಥಾಪಿಸಿದ್ದು ಅಲ್ಲೇ ಲಿಂಗೈಕ್ಯರಾಗಿದ್ದಾರೆ. ಈ ಕಾರಣಕ್ಕಾಗಿ ಈ ಬೆಟ್ಟವನ್ನು ಇಂದಿಗೂ ಶ್ರೀಶೀಲವಂತೇಶ್ವರ ಬೆಟ್ಟ ಎಂದೇ ಕರೆಯಲ್ಪಡುತ್ತಿದ್ದು, ವರ್ಷಕ್ಕೊಮ್ಮೆ ಇಲ್ಲಿ ಗಿರಿ ಸುತ್ತುವಕಾರ್ಯಕ್ರಮವನ್ನು ನಡೆಸಲಾಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯ ಎಲ್ಲಾ ಗುರುಗಳು ಕರ್ತೃಗುರುಗಳಹೆಸರನ್ನೇ ಅಭಿದಾನ ಪಡೆದು ಬಂದಿದ್ದರಿಂದ ಶ್ರೀಮಠದ ಇತಿಹಾಸವನ್ನು ಗುರುತಿಸಲುಆಗುವುದಿಲ್ಲ. ಆದ್ದರಿಂದ ಹಿಂದಿನ ಗುರುಗಳು ಶ್ರೀ ಗಂಗಾಧರ ಸ್ವಾಮಿಗಳೆಂಬ ಅಭಿದಾನದೊಂದಿಗೆ ಪಟ್ಟಾಧಿಕಾರಕ್ಕೆ ಬಂದು ಶ್ರೀಮಠವನ್ನು ಅಭಿವೃದ್ಧಿಪಡಿಸಿದರು. ಅವ್ಯವಸ್ಥೆಯ ಆಗರವಾಗಿದ್ದ ಮಠದ ವ್ಯವಸ್ಥೆಯನ್ನು ಸರಿಪಡಿಸಿ, ಕಾನೂನಾತ್ಮಕವಾಗಿ ಬಲಪಡಿಸಿಕೊಂಡು ತಮ್ಮಅವಿರತ ಶ್ರಮದಿಂದ ಪುರಾತನ ಶ್ರೀಮಠವನ್ನು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಮಹಾಮಹಿಮರು 1996ರಲ್ಲಿ ಮಸ್ಕಿಯಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು 1998ರ ಫೆಬ್ರವರಿ2ರಂದು ಶ್ರೀಮಠದ ಅಧಿಕಾರವಹಿಸಿಕೊಂಡು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಶ್ರೀಗಳು ಸ್ನಾತಕೋತ್ತರ ಪದವೀಧರರಾಗಿದ್ದು ತಮ್ಮ ಪಾಂಡಿತ್ಯದಿಂದಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ವೈಚಾರಿಕ ಕಾರ್ಯಕ್ರಮಗಳನ್ನು ರೂಪಿಸಿ ವಿದ್ವಾಂಸರು ಹಾಗೂ ವಿವಿಧ ಮಠಾಧೀಶರಿಂದ ಉಪನ್ಯಾಸ,ಉಪದೇಶಗಳನ್ನು ನಡೆಸಿಕೊಡುತ್ತಿದ್ದಾರೆ. ಶ್ರೀಮಠದಲ್ಲಿ ಕಾರ್ತೀಕ ಮಾಸದಲ್ಲಿ ಲಿಂ. ಶ್ರೀಗಂಗಾಧರೇಶ್ವರ ಸ್ವಾಮಿಗಳ ಪುಣ್ಯಾರಾಧನೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು
Date of Birth :
4-10-1967
Place :
ಆಳಂದ ತಾ||
Pattadikara :
2-2-1998
Photo :
Programs
ಯುಗಾದಿಗೆ “ಗಿರಿಸುತ್ತು” ಕಾರ್ಯಕ್ರಮ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.