1822ರಲ್ಲಿ ಶಹಾಪುರ ತಾಲ್ಲೂಕಿನ ಅನುವಾರದ ಹಿರೇಮಠದಲ್ಲಿ ಜನ್ಮ ತಾಳಿದಪೂಜ್ಯ ಶ್ರೀ ಬಸವಯ್ಯ ತಾತನವರು ಬಾಲ್ಯದಿಂದಲೇ ಆಧ್ಯಾತ್ಮ ಜೀವಿಗಳು. ಹಿರಿಯರಮಾತಿಗೆ ಕಟ್ಟುಬಿದ್ದು ಸಂಸಾರ ಬಂಧನಕ್ಕೆ ಒಳಗಾಗುವ ಶ್ರೀ ಬಸವಯ್ಯನವರು ಕಾಲಾನಂತರಸಂಸಾರ ಸಮೇತ ಶಹಾಪುರಕ್ಕೆ ಆಗಮಿಸುತ್ತಾರೆ. ಇಲ್ಲಿನ ಅವರ ಭಕ್ತರು ಗುರುಗಳಿಗೆಮಠವನ್ನು ಕಟ್ಟಿಸಿಕೊಟ್ಟು ಆ ಮಠಕ್ಕೆ “ಕಂತೆ ಮಠ” ವೆಂದು ಕರೆದರು. ಅದುವೇ ಮುಂದೆಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ ಎಂದು ಹೆಸರಾಯಿತು.ಶ್ರೀ ಬಸವಯ್ಯ ತಾತನವರು ಇಲ್ಲಿ ನೆಲೆಗೊಂಡು ಅನೇಕ ಸತ್ಕಾರ್ಯಗಳನ್ನುಮಾಡುವ ಮೂಲಕ ಹೆಚ್ಚು ಪ್ರಸಿದ್ಧಿಗೊಂಡರು. ಶ್ರೀಗಳು ಹೆಚ್ಚು ಸಂಚಾರ ಮಾಡುತ್ತಿದ್ದಕಾರಣ ಕ್ರಮೇಣ ಜನರು ಅವರನ್ನು ಶ್ರೀ ಚರಬಸವೇಶ್ವರರೆಂದೇ ಸಂಬೋಧಿಸುತ್ತಿದ್ದರು.ವಾಕ್‍ಸಿದ್ಧಿಪುರುಷರಾಗಿದ್ದ ಶ್ರೀ ಚರಬಸವೇಶ್ವರರು ಶತಾಯುಷಿಗಳಾಗಿ ಧರ್ಮ ಜಾಗೃತಿಮಾಡಿ 1922ರಲ್ಲಿ ಲಿಂಗೈಕ್ಯರಾದರು.ತದನಂತರ ಶ್ರೀಮಠದ ಭಕ್ತವರ್ಗವೇ ಶ್ರೀಗಳ ಗದ್ದುಗೆ ನಿರ್ಮಿಸಿ ನಿತ್ಯ ಪೂಜೆನಡೆಸುತ್ತಾ ಬಂದರು. ನಂತರದಲ್ಲಿ ಶ್ರೀಗಳ ಸಹೋದರರ ಮೊಮ್ಮಗನಾದ ಶ್ರೀಮಹಾಲಿಂಗಯ್ಯ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಾ ಶ್ರೀಮಠವನ್ನು ಅಭಿವೃದ್ದಿಪಡಿಸಿದ್ದರು.ಪ್ರಸ್ತುತ ಶ್ರೀ ಮಹಾಲಿಂಗಯ್ಯ ಸ್ವಾಮಿಗಳ ಪುತ್ರರಾದ ಶ್ರೀ ವೇ. ಬಸವಯ್ಯಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಹಾಗೂ ಶ್ರೀ ಚರಬಸವೇಶ್ವರರ ಪುರಾಣ ಮತ್ತು ನಾಟಕಗಳನ್ನು ಬರೆಸಿಪ್ರಕಟಿಸಿದ್ದಾರೆ. ನಿತ್ಯ ನೂರಾರು ಜನರಿಗೆ ನಿತ್ಯ ದಾಸೋಹದ ವ್ಯವಸ್ಥೆ ಮಾಡಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಯುಗಾದಿಪಂಚಮಿಯಂದು ಶ್ರೀಮಠದ ರಥೋತ್ಸವವು ಜರುಗುತ್ತಿದ್ದು ಜೊತೆಗೆ ದನಗಳ ಜಾತ್ರೆಯನ್ನುಆಯೋಜಿಸಲಾಗುತ್ತದೆ. ಹಾಗೂ ನವೆಂಬರ್ ತಿಂಗಳಲ್ಲಿ ವಿಶೇಷವಾಗಿ “ಕನ್ನಡ ಅಭಿಮಾನಉತ್ಸವ” ಎಂಬ ಕಾರ್ಯಕ್ರಮದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ವೇ. ಬಸವಯ್ಯ ಸ್ವಾಮಿಗಳು
Date of Birth :
4-3-1953
Place :
ಶಹಾಪುರ (ತಾ||)
Photo :
Programs
ಪ್ರತ್ರಿ ನಿತ್ಯ ರುದ್ರಾಭಿಷೇಕ ಹಾಗೂ ತ್ರಿಕಾಲ ಪೂಜೆ.
ಯುಗಾದಿ ಪಂಚಮಿಯಂದು ಶ್ರೀಮಠದ ರಥೋತ್ಸವ
ಹಾಗೂ ದನಗಳ ಜಾತ್ರೆ.
ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಪಲ್ಲಕಿ ಉತ್ಸವ.
ನವೆಂಬರ್ ತಿಂಗಳಲ್ಲಿ ಕನ್ನಡ ಅಭಿಮಾನ ಉತ್ಸವ.
Photos
Full Address Kannada
ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ
ಶಹಾಪುರ - 585 223
ಶಹಾಪುರ ತಾ||, ಯಾದಗಿರಿ ಜಿ||