Shree Siddalingeshwara Samsthana Hirematha

Shree Siddalingeshwara Samsthana Hirematha Claimed

ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ

ಕರ್ತೃ – ಶ್ರೀ ಗುರು ವೀರತಪಸ್ವಿ ಸಿದ್ದಲಿಂಗ ಶಿವಯೋಗಿಗಳು

ಬಾಲಕಿಯೊಬ್ಬಳು ಶಿವಲಿಂಗಕ್ಕೆ ಹಾಲನ್ನು ಕುಡಿಸಿ ಮುಗ್ಧ ಭಕ್ತಿಯನ್ನು ಪ್ರದರ್ಶಿಸಿಶಿವನಲ್ಲಿ ಐಕ್ಯಗೊಂಡ “ಕೋಳೂರು ಕೊಡಗೂಸು” ಕಥಾನಕವು ಜನಜನಿತ ಕಥೆಯಾಗಿದೆ.ಹೀಗೆ ಬಾಲಕಿಯ ಮುಗ್ಧ ಭಕ್ತಿಗೆ ಒಲಿದ ಶಿವನ ಕಥೆಯ ಊರಾದ ಕೋಳೂರು ನಂತರಕನ್ನೆಕೋಳೂರು ಎಂಬ ಹೆಸರು ಪಡೆದಿತೆಂದು ಐತಿಹ್ಯ. ಇಂತಹ ಜನಪದ ಐತಿಹ್ಯವುಳ್ಳಕನ್ನೆಕೋಳೂರು ಗ್ರಾಮವಿರುವುದು ಶಹಾಪುರದಿಂದ 8 ಕಿ.ಮೀ. ದೂರದಲ್ಲಿ.ಇಂತಹ ಕನ್ನೆಕೋಳೂರು ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಗುರು ವೀರ ತಪಸ್ವಿಸಿದ್ಧಲಿಂಗ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಸಿದ್ದಲಿಂಗೇಶ್ವರಸಂಸ್ಥಾನ ಹಿರೇಮಠವು ಅಸ್ತಿತ್ವದಲ್ಲಿದ್ದು, ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ಧಿಗೆ ಬಂದಿದೆ. ಕರ್ತೃಗುರುಗಳ ನಂತರದಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಈಗಿನವರು 5ನೇ ಶ್ರೀಗಳೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರದಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀ ಗುರುಲಿಂಗಶಿವಾಚಾರ್ಯರು ಪಟ್ಟಕ್ಕೆ ಬಂದಿದ್ದು ತದನಂತರ ಅಧಿಕಾರಕ್ಕೆ ಬಂದ 4ನೇ ಶ್ರೀಗಳಾದ ಶ್ರೀಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಪವಾಡಪುರುಷರಾಗಿ ವಾಕ್ಸಿದ್ಧಿಪುರುಷರಾಗಿಶ್ರೀಮಠವನ್ನು ಪ್ರಸಿದ್ಧಿಗೆ ತಂದರು. ಆದರೆ 1925ರಲ್ಲಿ ಶ್ರೀಗಳು ಲಿಂಗೈಕ್ಯರಾದ ನಂತರಶ್ರೀಮಠವು ಸುಮಾರು 75 ವರ್ಷಗಳ ಕಾಲ ಖಾಲಿ ಉಳಿದಿದೆ.ಬಹುಕಾಲದ ನಂತರ 2002ರ ಏಪ್ರಿˉï 26ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದಅನುಗ್ರಹವನ್ನು ಪಡೆದ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಜೀರ್ಣಗೊಂಡಿದ್ದಶ್ರೀಮಠವನ್ನು ಸುಸ್ಥಿತಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು “ಅನುಷ್ಠಾನ ಮೂರ್ತಿ”ಗಳೆಂದೇ ಪ್ರಸಿದ್ಧರು.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ವಿವಿಧಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸˉÁಗುತ್ತಿದ್ದು, ದವನದ ಹುಣ್ಣಿಮೆಗೆ ಶ್ರೀ ಹಿರಿಯಗುರುಗಳ ಪುಣ್ಯಾರಾದನೆಯನ್ನು ಆಯೋಜಿಸˉÁಗುತ್ತಿದೆ.

Swamiji

Swamiji Name :
ಕರ್ತೃ ಶ್ರೀ ಗುರು ವೀರತಪಸ್ವಿ ಸಿದ್ದಲಿಂಗ ಶಿವಯೋಗಿಗಳು
Date of Birth :
1968
Place :
ಕನ್ನೆಕೊಳೂರು, ಶಹಾಪುರ ತಾ||
Pattadikara :
26-4-2002
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ದವನದ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾದನೆ.

Photos

Full Address Kannada

ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ
ಕನ್ನೆಕೊಳೂರು - 585 323
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ದೋರನಹಳ್ಳಿ - 5 ಕಿ.ಮೀ.
ಶಹಾಪುರ - 8 ಕಿ.ಮೀ.
ಯಾದಗಿರಿ - 30 ಕಿ.ಮೀ.
ಸುರಪುರ - 28 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!