Shree Chikka Matha

Shree Chikka Matha Claimed

ಶ್ರೀ ಚಿಕ್ಕಮಠ,

Average Reviews

Description

ಶ್ರೀ ಚಿಕ್ಕಮಠ, ದೋರನಹಳ್ಳಿ

ಕರ್ತೃ – ಪರಮ ಪೂಜ್ಯ ಶ್ರೀ ಗುರುಶಾಂತ ಮಹಾಸ್ವಾಮಿಗಳು

ದೋರನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 100 ವರ್ಷಗಳ ಹಿಂದೆ ಶ್ರೀಷ.ಬ್ರ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಚಿಕ್ಕಮಠವುಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಬೆಳೆದುಬಂದಿರುವ ಶ್ರೀಚಿಕ್ಕಮಠವು ಶ್ರೀ ಗುರುಶಾಂತ ಶಿವಾಚಾರ್ಯರಿಗಿಂತಲೂ ಪೂರ್ವದಲ್ಲೇ ಅಸ್ತಿತ್ವದಲ್ಲಿತ್ತೆಂದುಹೇಳಲಾದರೂ ಸ್ಪಷ್ಟ ಮಾಹಿತಿಗಳು ದೊರಕುವುದಿಲ್ಲವಾದ್ದರಿಂದ ಶ್ರೀ ಗುರುಶಾಂತಶಿವಾಚಾರ್ಯರನ್ನೇ ಕರ್ತೃಗುರುಗಳೆಂದು ಪರಿಗಣಿಸಲಾಗಿದೆ. ಶ್ರೀಗಳು ಅತ್ಯಂತ ಪ್ರಭಾವಶಾಲಿಗಳಾಗಿ ವೀರಶೈವ ಧರ್ಮವನ್ನು ಪಸರಿಸಿ, ಸಂಸ್ಕಾರವಂತ ಸಮಾಜವನ್ನು ರೂಪಿಸಿದ್ದರು. ಶ್ರೀಗಳು ಶ್ರೀಮಠವನ್ನು ಅಭಿವೃದ್ಧಿಪಡಿಸಿ 1960ರಲ್ಲಿ ಲಿಂಗೈಕ್ಯರಾದರು.ತದನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಷ.ಬ್ರ. ಗುರುಲಿಂದ ಶಿವಾಚಾರ್ಯಸ್ವಾಮಿಗಳು ಹಿಂದಿನ ಶ್ರೀಗಳ ಹಾದಿಯಲ್ಲಿ ಮುನ್ನಡೆದು ವೀರಶೈವ ಧರ್ಮವನ್ನು ಪ್ರಬಲವಾಗಿಬೆಳೆಸಿದ್ದಾರೆ. ಹಾಗೂ “ಪಂಚವಟಿ” ಎಂದು ಕರೆಯಲಾಗುವ ಬಿಲ್ವ, ಬನ್ನಿ, ಅರಳಿ, ಹತ್ತಿಹಾಗೂ ಬೇವು ಈ ಐದು ಜಾತಿಗಳ ವೃಕ್ಷಗಳನ್ನು ಒಂದೇ ಬುಡದಲ್ಲಿ ಬೆಳೆಸಿ ನಿತ್ಯಪೂಜೆಗೆಒಳಪಡಿಸಿದರು. ಹಾಗೂ ಹಿರಿಯ ಗುರುಗಳ ಗದ್ದುಗೆಯನ್ನು ನಿರ್ಮಿಸಿದ ಶ್ರೀಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಲಿಂಗರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು2009ರ ಏಪ್ರಿಲ್ 30ರಂದು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಮುನ್ನಡೆಸುತ್ತಿದ್ದಾರೆ.ಮಾಘ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಪುಣ್ಯಾರಾಧನೆ ನಡೆಸುವ ಶ್ರೀಗಳು ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ ಹಾಗೂವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಶ್ರೀಮಠದ ವತಿಯಿಂದ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ “ಪ್ರತಿಭಾ ಪುರಸ್ಕಾರ”ನೀಡಿ ಸನ್ಮಾನಿಸಲಾಗುತ್ತದೆ.

ವಿಶೇಷತೆ:

ಶ್ರೀಮಠದಿಂದ ಪ್ರತಿವರ್ಷ ‘ಪ್ರತಿಭಾ ಪುರಸ್ಕಾರ’

Swamiji

Swamiji Name :
ಶ್ರೀ ಷ.ಬ್ರ. ಶಿವಲಿಂಗ ರಾಜೇಂದ್ರ ಶಿವಾಚಾರ್ಯ
Date of Birth :
6-6-1980
Place :
ಕುಮಾರಕೊಳ್ಳ, ಬೈಲಹೊಂಗಲ ತಾ||
Pattadikara :
30-4-2009
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ದಸರದಲ್ಲಿ ಶ್ರೀದೇವಿ ಪುರಾಣ ಪಾರಾಯಣ, ಅಮ್ಮನವರಿಗೆ ವಿಶೇಷ ಪೂಜೆ
ಹಾಗೂ ವಿವಿಧ ಕಾರ್ಯಕ್ರಮಗಳು.
ಮಾಘ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಗುರುಲಿಂಗ
ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಚಿಕ್ಕಮಠ
ದೋರನಹಳ್ಳಿ - 585 223
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ಶಹಾಪುರ - 8 ಕಿ.ಮೀ.
ಯಾದಗಿರಿ - 25 ಕಿ.ಮೀ.
ಸುರಪುರ - 45 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!