Shree Okkaligera Hirematha

Shree Okkaligera Hirematha Claimed

ಶ್ರೀ ಒಕ್ಕಲಿಗೇರ ಹಿರೇಮಠ

Average Reviews

Description

ಶ್ರೀ ಒಕ್ಕಲಿಗೇರ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳು

ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ದೊಡ್ಡಸಗರ ಗ್ರಾಮದಲ್ಲಿ ಸುಮಾರು400 ವರ್ಷಗಳ ಹಿಂದೆ ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀ ಒಕ್ಕಲಿಗೇರ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತಕ್ಕೆ ಬಂದಿದೆ.ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಬೆಳೆದುಬಂದಿರುವ ಶ್ರೀಒಕ್ಕಲಿಗೇರ ಹಿರೇಮಠದ ಪೂರ್ವೇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲ. ಬಹುಶಃ ಶ್ರೀಮಠವುಆಗಾಗ ಖಾಲಿ ಉಳಿದಿರುವುದರಿಂದ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಕರ್ತೃಗುರುಗಳಾದ ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳ ನಂತರ ಇದುವರೆಗೂ4 ಜನ ಶ್ರೀಗಳು ಅಧಿಕಾರ ನಡೆಸಿದ್ದು ಈಗಿನವರು 5ನೇ ಶ್ರೀಗಳೆಂದು ತಿಳಿದು ಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಭಕ್ತರಿಗೆ ತಮ್ಮ ಧಾರ್ಮಿಕ ಆಚರಣೆಗಳ ಮೂಲಕಸನ್ಮಾರ್ಗವನ್ನು ತೋರುತ್ತಾ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿರುವುದು ತಿಳಿದುಬರುತ್ತದೆ. ಆದರೆ ಇವರ ಕಾಲಾನಂತರ ಶ್ರೀಮಠವು ಬಹುಕಾಲ ಖಾಲಿ ಉಳಿದಿರುವುದರಿಂದಸ್ಪಷ್ಟತೆಯಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮರುಳ ಮಹಾಂತ ಶಿವಾಚಾರ್ಯ ಸ್ವಾಮಿಗಳು2004-05ರ ಸುಮಾರಿಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ್ದಾರೆ. ತದನಂತರ ಶ್ರೀಮಠದ ಅಭಿವೃದ್ಧಿಗೆ ಪಣ ತೊಟ್ಟ ಶ್ರೀಗಳು ಭಕ್ತರಸಹಕಾರದೊಂದಿಗೆ ಒಂದೊಂದೇ ಕಾರ್ಯಗಳನ್ನು ಪೂರ್ಣಗೊಳಿಸುತ್ತಾ ಆನಂತರವಷ್ಟೇ2013ರ ಫೆಬ್ರವರಿ 17ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಫಾಲ್ಗುಣಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ಆಯೋಜಿಸುತ್ತಾಬಂದಿದ್ದಾರೆ. ಶ್ರೀಮಠದ ರಥೋತ್ಸವವು ಮಹಾ ಶಿವರಾತ್ರಿಯಲ್ಲಿ ಜರುಗುತ್ತಿದ್ದು ಆಸಮಯದಲ್ಲಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳುಆಯೋಜನೆಗೊಂಡಿರುತ್ತವೆ.

Swamiji

Swamiji Name :
ಶ್ರೀ ಷ.ಬ್ರ. ಮರುಳ ಮಹಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
12-12-1977
Place :
ದೇವರ ಹಿಪ್ಪರಗಿ, ಸಿಂಧಗಿ ತಾ||
Pattadikara :
17-2-2013
Photo :

Programs

ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಮಹಾಶಿವರಾತ್ರಿಗೆ ಪುರಾಣ ಪ್ರವಚನ, ರಥೋತ್ಸವ ಹಾಗೂ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಒಕ್ಕಲಿಗೇರ ಹಿರೇಮಠ
ದೊಡ್ಡ ಸಗರ - 587 323
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ರಸ್ತಾಪುರ ಕ್ರಾಸ್ - 8 ಕಿ.ಮೀ.
ಶಹಾಪುರ - 16 ಕಿ.ಮೀ.
ಯಾದಗಿರಿ - 42 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!