Shree Nagathana Hirematha

Shree Nagathana Hirematha Claimed

ಶ್ರೀ ನಾಗಠಾಣ ಹಿರೇಮಠ

Average Reviews

Description

ಶ್ರೀ ನಾಗಠಾಣ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಉದಯೇಶ್ವರ ಶಿವಾಚಾರ್ಯ ಸ್ವಾಮಿಗಳು

ಶಹಾಪುರ ತಾಲ್ಲೂಕಿನ ದೊಡ್ಡsಸಗರದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಉದಯೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ನಾಗಠಾಣಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದ್ದು ತನ್ನ ಧಾರ್ಮಿಕಆಚರಣೆಗಳಿಂದಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳು ಲೋಕಸಂಚಾರದಲ್ಲಿದ್ದ ಸಂದರ್ಭದಲ್ಲಿ ಗುರುಗಳ ಜೊತೆಯಲ್ಲಿ ಶ್ರೀಉದಯೇಶ್ವರ ಸ್ವಾಮಿಗಳು ಕೂಡ ಧರ್ಮ ಪ್ರಚಾರ ಕಾರ್ಯ ಮಾಡುತ್ತಾ ದೊಡ್ಡಸಗರಗ್ರಾಮಕ್ಕೆ ಆಗಮಿಸುತ್ತಾರೆ. ಇಲ್ಲಿ ಕೆಲವು ದಿನ ನೆಲೆಸಿದ ಜಗದ್ಗುರುಗಳು ಮುಂದೆ ಹೊರಟಾಗಶ್ರೀ ಉದಯೇಶ್ವರ ಸ್ವಾಮಿಗಳು ಇಲ್ಲೇ ಉಳಿದು ಮಠವನ್ನು ಸ್ಥಾಪನೆ ಮಾಡುತ್ತಾರೆ.ಹೀಗೆ ಪ್ರಾರಂಭವಾದ ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 14 ಜನಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾದರೂ ನಿಖರವಾಗಿ ತಿಳಿದು ಬರುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯರು ತಮ್ಮ ಧಾರ್ಮಿಕಆಚರಣೆಗಳಿಂದಾಗಿ ಭಕ್ತರನ್ನು ಸಂಪಾದಿಸಿಕೊಂಡು ಮಠವನ್ನು ಅಭಿವೃದ್ಧಿಪಡಿಸಿದ್ದು1964ರಲ್ಲಿ ಲಿಂಗೈಕ್ಯರಾಗಿದ್ದಾರೆ.ತದನಂತರ 1986ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನ ಹಿರಿಯ ಶ್ರೀಗಳಾದಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳು. 1965ರಲ್ಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದ ಶ್ರೀಗಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಶ್ರೀಮಠಕ್ಕೆಆಗಮಿಸಿ ಶ್ರೀಮಠದ ಕೆಲವೊಂದು ವ್ಯಾಜ್ಯಗಳನ್ನು ಕಾನೂನಾತ್ಮಕವಾಗಿ ಸರಿಪಡಿಸಿಕೊಂಡುನಂತರ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಗಳು ಶ್ರೀಮಠದಲ್ಲಿದ್ದ ಅವ್ಯವಸ್ಥೆಗಳನ್ನು ಸರಿಪಡಿಸಿ ಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸಿದರು. ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ಆದಾಯದ ಮೂಲವನ್ನಾಗಿ ಪರಿವರ್ತಿಸಿದ ಶ್ರೀಗಳು ಅದನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಾಬಂದಿದ್ದಾರೆ. ಶ್ರೀಗಳು ಇತ್ತೀಚೆಗೆ 2013ರ ಮೇ 16 ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿಶ್ರೀ ಷ.ಬ್ರ. ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳು
Place :
ಆಖಂಡಳ್ಳಿ, ಜೇವರ್ಗಿ ತಾ||
Photo :
Swamiji Name :
ಶ್ರೀ ಷ.ಬ್ರ. ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು|
Date of Birth :
13-4-1994
Place :
ಮಲ್ಲ, ಶಹಾಪುರ ತಾ||
Pattadikara :
16-5-2013
Photo :

Programs

ಪ್ರತಿ ಹುಣ್ಣಿಮೆಗೆ “ಬೆಳದಿಂಗಳ ಕೂಟ”.
ಪ್ರತಿ ಅಮವಾಸ್ಯೆಗೆ ಭಜನೆ ಕಾರ್ಯಕ್ರಮ.
ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಜಯಂತಿ.
ಹಾಗೂ ಕಿರಿಯ ಶ್ರೀಗಳ ವರ್ಧಂತಿ ಮಹೋತ್ಸವ
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ನಾಗಠಾಣ ಹಿರೇಮಠ
ದೊಡ್ಡ ಸಗರ - 587 323
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ರಸ್ತಾಪುರ ಕ್ರಾಸ್ - 8 ಕಿ.ಮೀ.
ಶಹಾಪುರ - 16 ಕಿ.ಮೀ.
ಯಾದಗಿರಿ - 42 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!