ಮಾಲೂರು ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೆಳ್ಳಾವಿಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಮದ್ ಬೆಳ್ಳಿನಪುರಿ ವೀರಸಿಂಹಾಸನಸಂಸ್ಥಾನ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಸುತ್ತಲಿನ ಗ್ರಾಮಗಳಲ್ಲಿ ಧಾರ್ಮಿಕವಾತಾವರಣವನ್ನು ನೆˉÉಗೊಳಿಸಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀಮಠದ ಕರ್ತೃ ಗುರುಗಳು ಪೂಜ್ಯ ಶ್ರೀಷ.ಬ್ರ. ಮರಿಸ್ವಾಮಿ ಮಹಾಸ್ವಾಮಿಗಳು.ಕರ್ತೃ ಗುರುಗಳು ಹಾಗೂ ನಂತರದ ಗುರುಗಳ ಕುರಿತಾಗಿ ಸ್ಪಷ್ಟತೆಯಿಲ್ಲ.ಈವರೆಗೂ 5 ಜನ ಶ್ರೀಗಳು ಶ್ರೀಮಠವನ್ನು ಮುನ್ನಡೆಸಿದ್ದು ಈಗಿನವರು 6ನೇ ಪೀಠಾಧ್ಯಕ್ಷರು.ಶ್ರೀಮಠದಲ್ಲಿ ಪರಂಪರೆಯ 4 ಜನ ಶ್ರೀಗಳ ಗದ್ದುಗೆಗಳನ್ನು ಕಾಣಬಹುದಾಗಿದ್ದು 4ನೇಗುರುಗಳ ಗದ್ದುಗೆಯು ನಾಗˉÁಪುರ ಮಠದಲ್ಲಿದೆ. 3ನೇ ಶ್ರೀಗಳ ನಂತರ ಶ್ರೀಮಠವು 40ವರ್ಷಗಳಿಗೂ ಅಧಿಕ ಕಾಲ ಖಾಲಿ ಉಳಿದಿದ್ದು ಇದರಿಂದಾಗಿ ಶ್ರೀಮಠದ ದಾಖˉÉಗಳುಲಭ್ಯವಿಲ್ಲದಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಪಟ್ಟದ ವೀರರಾಜ ದೇಶೀಕೇಂದ್ರ ಶಿವಾಚಾರ್ಯಮಹಾಸ್ವಾಮಿಗಳು ಸುಧೀರ್ಘ ಕಾಲ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1986ರಸೆಪ್ಟಂಬರ್ 22ರಂದು ಲಿಂಗೈಕ್ಯರಾಗಿದ್ದಾರೆ. ಹಿಂದಿನ ಶ್ರೀಗಳು ತಾವಿರುವಾಗˉÉೀ 1986ರಜೂನ್ 26ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳನ್ನುಪಟ್ಟಕ್ಕೆ ತಂದಿದ್ದರು. ಹಿಂದಿನ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳೆದ ಪ್ರಸ್ತುತ ಶ್ರೀಗಳುಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದು, ಮರಳೆಗವಿ ಮಠ ಹಾಗೂ ಸಿದ್ದಗಂಗಾಗಳಲ್ಲಿಸಂಸ್ಕøತ ಶಿಕ್ಷಣವನ್ನು ಪಡೆದಿದ್ದಾರೆ.ಶ್ರೀ ಮಹಾಂತ ಶಿವಾಚಾರ್ಯರು ಅತ್ಯಂತ ಕ್ರಿಯಾಶೀಲರಾಗಿದ್ದು ಶ್ರೀಮಠದಲ್ಲಿವರ್ಷಪೂರ್ತಿ ವಿಶೇಷ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. 1997ರಲ್ಲಿ ಶ್ರೀ ವೀರರಾಜ ದೇಶಿಕೇಂದ್ರ ವಿದ್ಯಾನಿಕೇತನವಿದ್ಯಾಸಂಸ್ಥೆಯನ್ನು ಸ್ಥಾಪಿಸಿರುವ ಶ್ರೀಗಳು ಅಂಗವಿಕಲರ ಶಾˉÉಯನ್ನು ಮಾಲೂರಿನಲ್ಲಿಪ್ರಾರಂಭಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಶ್ರೀಮಠವನ್ನು ಸರ್ವತೋಮುಖವಾಗಿಅಭಿವೃದ್ಧಿಪಡಿಸಿರುವ ಶ್ರೀಗಳು ಭಾದ್ರಪದ ಮಾಸದ ಹಿರಿಯ ಗುರುಗಳ ಆರಾಧನೆಸಮಯದಲ್ಲಿ “ವೀರರಾಜ ಶ್ರೀ” ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
22-06-1971
Place :
ಬೆಳ್ಳಾವಿ, ಮಾಲೂರು ತಾ||
Pattadikara :
26-06-1986
Photo :
Programs
ಪ್ರತಿ ಹುಣ್ಣಿಮೆಗೆ ಪೂಜೆ, "ಚಿಂತನ ಮಂಥನ" ಗೋಷ್ಠಿ
ಮೇ ತಿಂಗಳಲ್ಲಿ ಸಾಮೂಹಿಕ ವಿವಾಹ, ಬಸವ ಜಯಂತಿ, ರೇಣುಕ ಜಯಂತಿ ಆಚರಣೆ
ಶಾª್ರÀಣ ಮಾಸದಲ್ಲಿ ನಿತ್ಯ “ಮನೆಯಿಂದ ಮನೆಗೆ ಅರಿವಿನ ಮನೆ” ಕಾರ್ಯಕ್ರಮ
ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಆರಾಧನೆ ಹಾಗೂ
“ವೀರರಾಜ ಶ್ರೀ” ಪ್ರಶಸ್ತಿ ಪ್ರಧಾನ (10,000/- ನಗದು)
ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ “ಜಾಗೃತ ಸಮಾವೇಶ” ಹಾಗೂ ದೀಪೋತ್ಸವ
ಶಿವರಾತ್ರಿ, ನವರಾತ್ರಿ, ಧನುರ್ಮಾಸಗಳಲ್ಲಿ ವಿಶೇಷ ಕಾರ್ಯಕ್ರಮಗಳು
ಎಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣೆ
Institutions
ಶ್ರೀ ವೀರರಾಜ ದೇಶಿಕೇಂದ್ರ ವಿದ್ಯಾನಿಕೇತನ ಸಂಸ್ಥೆ (ರಿ)
ಪ್ರಾಥಮಿಕ ಶಾಲೆ / ಅಂಗವಿಕಲರ ಶಾಲೆ
Photos
Full Address Kannada
ಶ್ರೀಮದ್ ಬೆಳ್ಳಿನಪುರಿ ವೀರಸಿಂಹಾಸನ ಸಂಸ್ಥಾನ ಮಠ
ಬೆಳ್ಳಾವಿ, ಮಡಿವಾಳ (ಪೋ) - 563 031
ಮಾಲೂರು ತಾ||, ಕೋಲಾರ ಜಿಲ್ಲೆ