ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡಲುಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕಾಲುವೆ ಮಠವು ವಿರಕ್ತ ಸಂಪ್ರದಾಯದಮಠವಾಗಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳನ್ನು ಹೆಸರಿಸಲಾಗಿದ್ದು ಸ್ಥಾಪಿತಕಾಲಮಾನ ಸುಮಾರು 300 ವರ್ಷಗಳ ಹಿಂದೆ ಎಂದು ಹೇಳಲಾಗಿದೆ. ಶ್ರೀ ಮಠದಮುಂಭಾಗದಲ್ಲಿ ನೀರಾವರಿಯ ಕಾಲುವೆ ಇರುವುದರಿಂದ ರೂಢಿಗತವಾಗಿ “ಕಾಲುವೆ ಮಠ”ಎಂದು ಹೆಸರು ಬಂದಿದೆ.ಶ್ರೀ ಶಿವರುದ್ರ ಸ್ವಾಮಿಗಳು ಸಂಚಾರದಲ್ಲಿ ಇಲ್ಲಿಗೆ ಬಂದವರಾಗಿದ್ದು ವೀರಶೈವಧರ್ಮ ಪ್ರಚಾರ ಕಾರ್ಯ ಮಾಡುತ್ತಾ ತಮ್ಮ ಆಚರಣೆಗಳ ಮೂಲಕ ಭಕ್ತರನ್ನುಧರ್ಮಮಾರ್ಗದಲ್ಲಿ ಮುನ್ನಡೆಸಿ, ತಮ್ಮ ಕೊನೆಗಾಲದಲ್ಲಿ ಇಲ್ಲಿ ಮಠವನ್ನು ಸ್ಥಾಪಿಸಿದರೆಂದುಹೇಳಲಾಗುತ್ತದೆ. ಊರಿನ ಭಕ್ತರು ಗುರುಗಳ ಸಮಾದಿಯನ್ನು ಮಠದ ಆವರಣದಲ್ಲಿನಿರ್ಮಿಸಿ ನಿತ್ಯ ಪೂಜೆಗೆ ಒಳಪಡಿಸಿದ್ದಾರೆ. ಕಾಲ ಕ್ರಮೇಣ ಶ್ರೀಮಠವುಜೀರ್ಣಗೊಳ್ಳತೊಡಗಿದಾಗ ಭಕ್ತರು ಇಲ್ಲಿಗೆ ಸಮೀಪದ ದೊಡ್ಡಬೆಲೆ ಗ್ರಾಮದ ಶ್ರೀದೊಡ್ಡಮಠದ ಶ್ರೀ ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳಿಗೆ ಈ ಮಠದ ಆಡಳಿತವನ್ನುವಹಿಸಿಕೊಡುತ್ತಾರೆ.ದೊಡ್ಡಬೆಲೆಯ ಶ್ರೀ ದೊಡ್ಡಮಠವು ಕೂಡ ಸುಮಾರು ಮುನ್ನೂರು ವರ್ಷಗಳಇತಿಹಾಸವನ್ನು ಹೊಂದಿದ್ದು ಮಠದ ಪ್ರಥಮ ಗುರುಗಳಿಂದ ಈವರೆಗಿನ ಶ್ರೀಗಳೆಲ್ಲರು ಶ್ರೀರುದ್ರಮುನಿ ಸ್ವಾಮಿಗಳೆಂದೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಶ್ರೀ ದೊಡ್ಡಮಠದಜೊತೆಯಲ್ಲಿ ಶ್ರೀ ಕಾಲುವೆ ಮಠದ ಅಧಿಕಾರವನ್ನೂ ಪಡೆದ ಶ್ರೀ ರುದ್ರಮುನಿ ಸ್ವಾಮಿಗಳುನೂರಾರು ವರ್ಷಗಳಿಂದ ಖಾಲಿ ಉಳಿದು ಜೀರ್ಣಗೊಂಡಿದ್ದ ಮಠವನ್ನುಪುನರುಜ್ಜೀವನಗೊಳಿಸಿದರು. ಕಾಯಕಯೋಗಿಗಳಾದ ಶ್ರೀಗಳು ಕರ್ತೃ ಗುರುಗಳಗದ್ದುಗೆಯನ್ನು ನವೀಕರಿಸಿದ್ದಲ್ಲದೇ ಮಠದ ಕಟ್ಟಡವನ್ನು ಸುಭದ್ರಗೊಳಿಸಿದರು. ಮಠದಸುತ್ತಾ ಆವರಣವನ್ನು ನಿರ್ಮಿಸಿದ ಶ್ರೀಗಳು ಶ್ರೀಮಠವನ್ನು ಹಂತಹಂತವಾಗಿಅಭಿವೃದ್ದಿಗೊಳಿಸಿದರು. ಪ್ರಸ್ತುತ ವಯೋವೃದ್ದರಾಗಿರುವ ಶ್ರೀಗಳಿಗೆ ಸಹಕಾರದ ಅಗತ್ಯವಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ಕಾಲುವೆ ಮಠ
ತ್ಯಾಮಗೊಂಡಲು - 562 132
ನೆಲಮಂಗಲ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ