Shree Khani Matha, Sonnena Halli

Shree Khani Matha, Sonnena Halli Claimed

ಶ್ರೀ ಖಾನಿ ಮಠ, ಸೊಣ್ಣೇನಹಳ್ಳಿ

Average Reviews

Description

ಶ್ರೀ ಖಾನಿ ಮಠ, ಸೊಣ್ಣೇನಹಳ್ಳಿ

ಕರ್ತೃ – ಶ್ರೀ ಮ.ನಿ.ಪ್ರ. ಗದ್ದುಗೆ ಮಹಾಸ್ವಾಮಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ 18ಕಿ.ಮೀ. ಅಂತರದಲ್ಲಿರುವ ಸೊಣ್ಣೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಖಾನಿ ಮಠವು ವಿರಕ್ತ ಸಂಪ್ರದಾಯದ ಮಠವಾಗಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮುಖೇನ ಪ್ರಚಲಿತದಲ್ಲಿದೆ. ಈ ಮಠದ ಕರ್ತೃ ಗುರುಗಳ ಬಗ್ಗೆನಿಖರವಾದ ಮಾಹಿತಿಗಳಿಲ್ಲ. ಪುರಾತನ ಕಾಲದಲ್ಲಿ ಶಿವಯೋಗಿಗಳೊಬ್ಬರು ಈ ಜಾಗದಲ್ಲಿಅನುಷ್ಠಾನಗೊಂಡು ಜನರನ್ನು ಹರಸಿ ಲಿಂಗೈಕ್ಯರಾಗಿದ್ದಾರೆ. ಇವರ ಗದ್ದುಗೆಯನ್ನು ಇಲ್ಲಿಮಾಡಲಾಗಿ ಭಕ್ತರು ಅವರನ್ನು ಗದ್ದುಗೆ ಸ್ವಾಮಿಗಳೆಂದು ಸಂಬೋದಿಸತೊಡಗಿದರು.ಶ್ರೀ ಖಾನಿಮಠದ ಗುರುಪರಂಪರೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಬರುವುದಿಲ್ಲ.ಈಗಿನ ಶ್ರೀಗಳು ಹೇಳುವ ಪ್ರಕಾರ ಸುಮಾರು 10ಕ್ಕೂ ಹೆಚ್ಚಿನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ಹೇಳಬಹುದಾದರೂ ಸ್ಪಷ್ಟತೆಯಿಲ್ಲ. ಪ್ರಸ್ತುತ ಲಭ್ಯವಿರುವ ಐದು ಜನ ಶ್ರೀಗಳಕುರಿತಾಗಿ ದಾಖಲಿಸಬಹುದು. ಪರಂಪರೆಯಲ್ಲಿ ಬಂದಿರುವ ಶ್ರೀ ಓಂಕಾರ ಮಹಾಸ್ವಾಮಿಗಳಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಭಾವಯುತವಾಗಿ ಬೆಳೆದಿದೆ. ಶ್ರೀಗಳು ಸುತ್ತಮುತ್ತಲಿನಹತ್ತಾರು ಗ್ರಾಮಗಳಲ್ಲಿ ಅಪಾರ ಭಕ್ತರನ್ನು ಹೊಂದಿದ್ದು ಶ್ರೀಮಠದ ಅಭಿವೃದ್ದಿಗೆಕಾರಣಕರ್ತರಾಗಿದ್ದಾರೆ.ನಂತರದ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸಪ್ಪ ಸ್ವಾಮಿಗಳು ಕೂಡ ಶ್ರೀ ಓಂಕಾರಸ್ವಾಮಿಗಳಂತೆಯೇ ಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು ಶ್ರೀಮಠ ಹಾಗೂಸಮಾಜಗಳೆರಡರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ನಂತರದ ಶ್ರೀ ಮ.ನಿ.ಪ್ರ. ಷಡಕ್ಷರಸ್ವಾಮಿಗಳು ಸಿದ್ದಗಂಗೆಯ ಹಿಂದಿನ ಶ್ರೀಗಳಾದ ಶ್ರೀ ಉದ್ದಾನ ಶಿವಯೋಗಿಗಳ ಶಿಷ್ಯರಾಗಿಆಧ್ಯಾತ್ಮದ ಅರಿವನ್ನು ಪಡೆದವರು. ಶ್ರೀಗಳು ಖಾನಿ ಮಠದ ಅಧಿಕಾರ ವಹಿಸಿಕೊಂಡ ನಂತರಶ್ರೀಮಠದ ಕಟ್ಟಡವನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಿದರು.ಶ್ರೀ ಷಡಕ್ಷರಿ ಸ್ವಾಮಿಗಳು 1990ರ ಫೆಬ್ರವರಿ 02ರಂದು ಈಗಿನ ಶ್ರೀಗಳಾದ ಶ್ರೀಮ.ನಿ.ಪ್ರ. ಬಸವರಾಜ ಸ್ವಾಮಿಗಳನ್ನು ಪಟ್ಟಕ್ಕೆ ತಂದು 1990ರ ನವೆಂಬರ್ 05ರಲ್ಲಿಲಿಂಗೈಕ್ಯರಾಗಿದ್ದಾರೆ. ಶ್ರೀ ಬಸವರಾಜ ಸ್ವಾಮಿಗಳು ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿಪೂರೈಸಿದ ವಿದ್ವತ್ ಪುರುಷರು. ಶ್ರೀಗಳು ಗುರುಗಳ ಹಾದಿಯಲ್ಲಿ ಮುನ್ನಡೆದಿದ್ದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿಪ್ರೌಢಶಾಲೆಯನ್ನು ಪ್ರಾರಂಭಿಸಿರುವ ಶ್ರೀಗಳು ಮಠದಲ್ಲಿರುವ ವಿದ್ಯಾರ್ಥಿಗಳಿಗೆ ತಾವೇ ಸ್ವತಃವೇದ ಪಾಠವನ್ನು ಹೇಳಿಕೊಡುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಬಸವರಾಜ ಮಹಾಸ್ವಾಮಿಗಳು
Date of Birth :
01-06-1963
Place :
ಹುಸ್ಕೂರು, ನೆಲಮಂಗಲ ತಾ||
Pattadikara :
02-02-1990
Photo :

Programs

ಪ್ರತಿ ಅಮವಾಸೆಗೆಪ್ರತಿ ಅಮವಾಸೆಗೆ ರುದ್ರಾಭಿಷೇಕ
ಪ್ರತಿ ಹುಣ್ಣಿಮೆಗೆ ಶ್ರೀ ಮಠದಲ್ಲಿ ಭಜನೆ
ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಧಾರ್ಮಿಕ ಕಾರ್ಯಕ್ರಮಗಳು
ಶಿವರಾತ್ರಿಗೆ ಅಭಿಷೇಕ, ಜಾಗರಣೆ, ಭಜನೆ

Institutions

ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ ವೇದ ಶಿಕ್ಷಣ

Photos

Full Address Kannada

ಶ್ರೀ ಖಾನಿ ಮಠ,
ಸೊಣ್ಣೇನಹಳ್ಳಿ ದೊಡ್ಡ ಬೆಳವಂಗಲ ಹೋ|| - 561 204
ದೊಡ್ಡಬಳ್ಳಾಪುರ ತಾ||, ಬೆಂಗಳೂರು ಗ್ರಾಮಾಂತರ ಜಿ||

Map

Near by Places

ದೊಡ್ಡಬಳ್ಳಾಪುರ - 13 ಕಿ.ಮೀ.
ನೆಲಮಂಗಲ - 28 ಕಿ.ಮೀ.
ನಂದಿಬೆಟ್ಟ - 35 ಕಿ.ಮೀ.
ಬೆಂಗಳೂರು - 54 ಕಿ.ಮೀ.

Statistic

94 Views
0 Rating
0 Favorite
0 Share
error: Content is protected !!