Shree Jangama Matha

Shree Jangama Matha Claimed

ಶ್ರೀ ಜಂಗಮ ಮಠ

Average Reviews

Description

ಶ್ರೀ ಜಂಗಮ ಮಠ

ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು

ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಬೆಂಗಳೂರು ನಗರದಿಂದ ಹೊರಗೆಪ್ರತ್ಯೇಕವಾಗಿದ್ದ ಒಂದು ಪುಟ್ಟಗ್ರಾಮ ಶಿವನಹಳ್ಳಿ. ಇಂದು ನಗರದ ಅವಿಭಾಜ್ಯಅಂಗವೆಂಬಂತೆ ಬೆರೆತು ಹೋಗಿರುವ ಈ ಪುಟ್ಟ ಗ್ರಾಮದ ಪ್ರದೇಶವನ್ನು ಶಿವನಗರವೆಂದುಕರೆಯಲಾಗುತ್ತದೆ. ನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಯಶವಂತಪುರದ ಕಡೆಗೆಹೋಗುವಾಗ ಎಡಭಾಗದಲ್ಲಿ ಸಿಗುವ ಈ ಶಿವನಗರ (ಶಿವನಹಳ್ಳಿ)ದಲ್ಲಿ ಒಂದು ಜಂಗಮಮಠವಿದೆ. ಇದು ಬಹಳ ಪುರಾತನ ಕಾಲದ್ದೆಂದು ಹೇಳಲಾಗುತ್ತದಾದರೂ ಮಠದ ಬಗೆಗಿನದಾಖಲೆಗಳು 18ನೇ ಶತಮಾನದಿಂದೀಚೆಗೆ ದೊರೆಯುತ್ತದೆ.ಕೆಲವು ದಾನ ಶಾಸನಗಳ ಆಧಾರದ ಮೇರೆಗೆ ಶ್ರೀಮಠದ ಪರಂಪರೆಯನ್ನುಗುರುತಿಸಬಹುದು ಆದರೆ ಸ್ಪಷ್ಟತೆಯಿಲ್ಲ. ಅವುಗಳ ಪ್ರಕಾರ ಈ ಮಠದ ಪರಂಪರೆಯಲ್ಲಿ ಶ್ರೀನಾಗಭೂಷಣ ಸಂಗನ ಬಸಪ್ಪದೇವರು (ಕ್ರಿ.ಶ. 1782), ಶ್ರೀ ಮಲ್ಲೇದೇವರು (ಕ್ರಿ.ಶ. 1822),ಶ್ರೀ ಶಿವರುದ್ರ ಮರಿದೇವರು (ಕ್ರಿ.ಶ. 1834), ಶ್ರೀ ಚನ್ನವೀರ ಮಹಾಸ್ವಾಮಿಗಳು (ಕ್ರಿ.ಶ. 1938-1935) ಅಧಿಕಾರವನ್ನು ನಡೆಸಿರುವುದು ಕಂಡು ಬರುತ್ತದೆ. ಶ್ರೀಮಠಕ್ಕೆ 1822ರಲ್ಲಿ ಮೈಸೂರಿನದೊರೆಗಳಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರು ನೀಡಿರುವ ಭೂದಾನದ ದಾಖಲೆ ಇದೆ.ಶ್ರೀ ಜಂಗಮ ಮಠವು ಶ್ರೀ ಬೇಲಿಮಠ ಹಾಗೂ ಶ್ರೀ ದೊಡ್ಡ ಮಠಗಳೆರಡರಸಂಪರ್ಕದಲ್ಲಿತೆಂಬುದು ತಿಳಿದುಬರುತ್ತದೆ. ಮೊದಲು ಸ್ವತಂತ್ರ್ಯ ಪರಂಪರೆಯಲ್ಲಿ ಬೆಳೆದುಬಂದಿರಬಹುದಾದ ಶ್ರೀಮಠವು 19ನೇ ಶತಮಾನದ ಅಂತ್ಯದ ವೇಳೆಗೆ ಶ್ರೀ ದೊಡ್ಡಮಠದಉಸ್ತುವಾರಿಗೆ ಬಂದಂತೆ ಕಾಣುತ್ತದೆ. ಮುಂದೆ ಶ್ರೀ ದೊಡ್ಡ ಮಠದ ಶ್ರೀ ಮ.ನಿ.ಪ್ರ. ಚನ್ನವೀರಮಹಾಸ್ವಾಮಿಗಳು 1918ರಲ್ಲಿ ಲಿಂಗೈಕ್ಯರಾದಾಗ ಗುರುಗಳ ಗದ್ದುಗೆಯನ್ನು ಇಲ್ಲಿಯೇಮಾಡಲಾಗಿದೆ.ಮುಂದೆ ಶ್ರೀ ದೊಡ್ಡಮಠದ ಹಿಂದಿನ ಶ್ರೀಗಳಾದ ಶ್ರೀ ಇಮ್ಮಡಿ ಚನ್ನವೀರಮಹಾಸ್ವಾಮಿಗಳು 1985ರ ವರೆಗೆ ಶ್ರೀ ಜಂಗಮ ಮಠವನ್ನು ಮುನ್ನಡೆಸಿದ್ದು, 1985ರ ವೇಳೆಗೆಶ್ರೀ ಜಂಗಮ ಮಠವನ್ನು ಶ್ರೀ ಸಿದ್ದಗಂಗಾ ಮಠಾಧೀಶರಿಗೆ ಒಪ್ಪಿಸಿದ್ದಾರೆ. ಸಿದ್ದಗಂಗಾ ಶ್ರೀಗಳಕೈ ಸೇರಿದ ಮೇಲೆ ಮಠದ ಆವರಣದಲ್ಲಿ ಸುಂದರವಾದ ಕಲ್ಯಾಣ ಮಂಟಪ, ಶಾಲಾಸಂಕೀರ್ಣಗಳು ತಲೆ ಎತ್ತಿದ್ದು ಬಹು ಜನೋಪಯೋಗಿ ಕೇಂದ್ರವಾಗಿ ಮಾರ್ಪಟ್ಟಿದೆ.

Swamiji

Swamiji Name :
ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
Date of Birth :
01-04-1907
Place :
ವೀರಾಪುರ, ಮಾಗಡಿ ತಾ||
Photo :
Swamiji Name :
ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
Photo :

Programs

ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ

Photos

Full Address Kannada

ಶ್ರೀ ಜಂಗಮ ಮಠ
#14, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ,
ಮಂಜುನಾಥನಗರ (ಶಿವನಗರ)
ರಾಜಾಜಿನಗರ, ಬೆಂಗಳೂರು - 560 010

Map

Statistic

58 Views
0 Rating
0 Favorite
0 Share
error: Content is protected !!