ಕರ್ತೃ – ಪೂಜ್ಯ ಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು
ಬೆಂಗಳೂರು ಮಹಾನಗರದಿಂದ ಮೈಸೂರಿಗೆ ಹೋಗುವ ಹೆದ್ದಾರಿಯ ಮೇಲೆ20 ಕಿ.ಮೀ. ದೂರದಲ್ಲಿ ವಿಶ್ವಕಲ್ಯಾಣ ಮಿಷನ್ ಒಡೆತನದ ಬಸವ ಗಂಗೋತ್ರಿ ಆಶ್ರಮವಿದೆ.ಇಲ್ಲಿ ಚಿನ್ಮಯಜ್ಞಾನಿ ಚನ್ನಬಸವಣ್ಣವನವರ ಹೆಸರಿನ ಜ್ಞಾನಪೀಠವೂ ಸ್ಥಾಪನೆಯಾಗಿ ಇದಕ್ಕೆಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಗಳು ಪೀಠಾಧಿಪತಿಗಳಾಗಿದ್ದಾರೆ. ಆಶ್ರಮದವ್ಯವಸ್ಥಾಪನೆ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಚಟುವಟಿಕೆಗಳನ್ನು ಪೂಜ್ಯ ಶ್ರೀಮಾತೆಕಸ್ತೂರಿದೇವಿ ಅಮ್ಮನವರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಸುಮಾರು 1970ರ ಸುಮಾರಿಗೆ ಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದಮಹಾಸ್ವಾಮಿಗಳವರು ಬೆಂಗಳೂರಿನಲ್ಲಿ “ಬಸವ ಮಂಟಪ” ಸ್ಥಾಪಿಸಿದ ನಂತರಕುಂಬಳಗೋಡಿನಲ್ಲಿ ಶ್ರೀ ಬಸವಗಂಗೋತ್ರಿ ಆಶ್ರಮವನ್ನು ಸ್ಥಾಪಿಸಿದರು. ತೆಂಗಿನತೋಟದೊಡನೆ ಸುಂದರವಾದ ಪರಿಸರ ಹೊಂದಿರುವ ಆಶ್ರಮವು ಮನಸ್ಸಿಗೆ ಮುದವನ್ನುನೀಡುವ ತಾಣವಾಗಿದೆ. ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ನಂತರ ಪೂಜ್ಯ ಶ್ರೀಮಹಾಜಗದ್ಗುರು ಮಾತೆ ಮಹಾದೇವಿ ಅಮ್ಮನವರು ವಿಶ್ವ ಕಲ್ಯಾಣ ಮಿಷನ್‍ನ್ನುಮುನ್ನಡೆಸಿಕೊಂಡು ಬರುತ್ತಿದ್ದು ಅದರಡಿಯಲ್ಲಿ ಶ್ರೀ ಬಸವಗಂಗೋತ್ರಿ ಆಶ್ರಮವುಕಾರ್ಯತತ್ಪರವಾಗಿದೆ.ಪೂಜ್ಯ ಶ್ರೀ ಮಾತೆ ಮಹಾದೇವಿ ಅಮ್ಮನವರು ಟ್ರಸ್ಟ್‍ನ ಅಡಿಯಲ್ಲಿ ದೇಶಾದ್ಯಂತಸ್ಥಾಪಿಸಿರುವ ಮುಖ್ಯ ಪೀಠದಲ್ಲಿ ಒಂದಾಗಿರುವ ಶ್ರೀ ಚನ್ನಬಸವೇಶ್ವರ ಜ್ಞಾನಪೀಠವುಕುಂಬಳಗೋಡಿನಲ್ಲಿದ್ದು ಪೂಜ್ಯ ಶ್ರೀ ಜಗದ್ಗುರು ಚನ್ನಬಸವನಾಂದ ಸ್ವಾಮಿಗಳುಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಗಳು ಸದಾ ಸಂಚಾರದಲ್ಲಿರುತ್ತಾಧರ್ಮ ಪ್ರಚಾರ ಕಾರ್ಯ ಕೈಗೊಂಡಿದ್ದು ಪ್ರತಿ ವರ್ಷ ಏಪ್ರಿಲ್‍ನಲ್ಲಿ ಆಶ್ರಮದಲ್ಲಿ 15 ದಿನಗಳಕಾಲ ಜರುಗುವ “ಬಸವೋತ್ಸವ” ಕಾರ್ಯಕ್ರಮದ ನೇತೃತ್ವ ವಹಿಸಿರುತ್ತಾರೆ.ಪ್ರಸ್ತುತ ಶ್ರೀ ಬಸವಗಂಗೋತ್ರಿ ಆಶ್ರಮದಲ್ಲಿ ಪೂಜ್ಯ ಮಹಾಜಗದ್ಗುರುಲಿಂಗಾನಂದ ಮಹಾಸ್ವಾಮಿಗಳ ಕನಸಿನಂತೆ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಅಮ್ಮನವರು 30 ಅಡಿ ಪೀಠದ ಮೇಲೆ 111 ಅಡಿ ಎತ್ತರದ ಬಸವ ಪುತ್ಥಳಿ ಸ್ಥಾಪಿಸುವಯೋಜನೆ ರೂಪಿಸಿದ್ದು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತಿದ್ಧಾರೆ. ಈ ಯೋಜನೆಪೂರ್ಣಗೋಂಡ ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಮುಖ ಪ್ರೇಕ್ಷಣಿಯಸ್ಥಳವಾಗಿ ಗುರುತಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
Swamiji
Swamiji Name :
ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ ಅಮ್ಮನವರು
Date of Birth :
13-03-1947
Place :
ಸಾಸಲಹಟ್ಟಿ, ಚಿತ್ರದುರ್ಗ ತಾ||
Pattadikara :
12-12-1990
Photo :
Programs
ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆ
ತಿಂಗಳಿಗೊಮ್ಮೆ ಬಸವಜ್ಯೋತಿ ಕಾರ್ಯಕ್ರಮ
ಪ್ರತಿ ವರ್ಷ ಏಪ್ರಿಲ್‍ನಲ್ಲಿ ಬಸವೋತ್ಸವ ಕಾರ್ಯಕ್ರಮ
(ಪೀಠಾರೋಹಣ-ವಾರ್ಷಿಕೋತ್ಸವ)
ಬಸವ ಜಯಂತಿ ಆಚರಣೆ
Institutions
ಅನಾಥಾಶ್ರಮ ವೃದ್ಧಾಶ್ರಮ
Photos
Full Address Kannada
ಶ್ರೀ ಬಸವಗಂಗೋತ್ರಿ ಆಶ್ರಮ
ಬೆಂಗಳೂರು-ಮೈಸೂರು ರಸ್ತೆ, ಕುಂಬಳಗೋಡು-560 074
ಕೆಂಗೇರಿ ಹೋ|| ಬೆಂಗಳೂರು ದಕ್ಷಿಣ