Shree Basava Mantapa

Shree Basava Mantapa Claimed

ಶ್ರೀ ಬಸವ ಮಂಟಪ

Average Reviews

Description

ಬಸವ ಮಂಟಪ – ಬೆಂಗಳೂರು

ಕರ್ತೃ – ಪೂಜ್ಯ ಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು

ಬೆಂಗಳೂರು ಮಹಾನಗರದ ಹೃದಯ ಭಾಗದ ರಾಜಾಜಿನಗರದ ಕಾರ್ಡ್ ರಸ್ತೆಗೆಹೊಂದಿಕೊಂಡಂತೆ ಇರುವ ಶ್ರೀ ಬಸವ ಮಂಟಪವು ಕೂಡಲಸಂಗಮದ ಬಸವ ಧರ್ಮಪೀಠದ ಕೇಂದ್ರ ಕಛೇರಿಯಾಗಿದ್ದು ಇಲ್ಲಿಂದಲೇ ದೇಶಾದ್ಯಂತ ತನ್ನಕಾರ್ಯಚಟುವಟಿಕೆಗಳನ್ನು ನಡೆಸುತ್ತದೆ. 1970ರಲ್ಲಿ ಪೂಜ್ಯ ಶ್ರೀ ಮಹಾಜಗದ್ಗುರುಲಿಂಗಾನಂದ ಮಹಾಸ್ವಾಮಿಗಳವರು ಬೆಂಗಳೂರಿನಲ್ಲಿ “ಬಸವ ಮಂಟಪ”ವನ್ನು ಸ್ಥಾಪಿಸಿ ಆಮುಖೇನ ಒಂದು ಸಾಮಾಜಿಕ ಕ್ರಾಂತಿಯ ಮೂಲಪುರುಷರಾಗಿದ್ದಾರೆ.ಪೂಜ್ಯ ಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ತಮ್ಮಪ್ರವಚನಗಳ ಮೂಲಕ ನಾಡಿನಾದ್ಯಂತ ಅಸಂಖ್ಯ ಶಿಷ್ಯವೃಂದವನ್ನು ಹೊಂದಿದವರು.ಲಿಂಗಾಯತ ಧರ್ಮ ತತ್ತ್ವ ಪ್ರಚಾರಕರಾಗೇ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡಶ್ರೀಗಳು ಲಿಂಗಾಯತ ಸ್ವತಂತ್ರ್ಯ ಧರ್ಮವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡವರು. ತಮ್ಮಆಚರಣೆಗಳ ಮೂಲಕ, ಪ್ರವಚನಗಳ ಮೂಲಕ ಪ್ರಸಿದ್ದರಾಗಿದ್ದ ಶ್ರೀಗಳು ಬೆಂಗಳೂರು,ಕೂಡಲಸಂಗಮ, ಧಾರವಾಡ, ಬಸವಕಲ್ಯಾಣ ಮುಂತಾದೆಡೆಗಳಲ್ಲಿ ತಮ್ಮಕಾರ್ಯಚಟುವಟಿಕೆಗಳನ್ನು ಹೊಂದಿ ಭಕ್ತರನ್ನು ದರ್ಮಮಾರ್ಗದಲ್ಲಿ ಕೊಂಡೊಯ್ದವರು.ಇವರ ಎಲ್ಲಾ ಆಶೋತ್ತರಗಳನ್ನು ಮುಂದುವರೆಸಿಕೊಂಡು ಬಲಿಷ್ಠ ಸಮಾಜದ ನಿರ್ಮಾಣಕ್ಕೆಕಟಿಬದ್ದವಾಗಿ ದುಡಿಯುತ್ತಿರುವವರೇ ಈಗಿನ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆಮಹಾದೇವಿ ಅಮ್ಮನವರು.ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳು 1966ರಲ್ಲಿ ವಿಶ್ವ ಕಲ್ಯಾಣ ಮಿಷನ್ಚಾರಿಟಬಲ್ ಟ್ರಸ್ಟ್ ಪ್ರಾರಂಭಿಸಿದ್ದು 1970ರಲ್ಲಿ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಬಸವಮಂಟಪವನ್ನು ಸ್ಥಾಪಿಸಿದರು. ಪ್ರಸ್ತುತ ಮಾತೆ ಮಹಾದೇವಿ ಅಮ್ಮನವರು ಇದರಕಾರ್ಯಾಧ್ಯಕ್ಷರಾಗಿದ್ದು ಇವರ ಎಲ್ಲಾ ಕಾರ್ಯಚಟುವಟಿಕೆಗಳ ಕೇಂದ್ರ ಕಛೇರಿಯಾಗಿದೆ.ಇಲ್ಲಿಂದಲೇ ದೇಶದ ನಾನಾಭಾಗಗಳಲ್ಲಿರುವ ಬಸವ ಮಂಟಪಗಳನ್ನು ರಾಷ್ಟ್ರೀಯಬಸವದಳಗಳನ್ನು ನಿರ್ವಹಿಸಲಾಗುತ್ತಿದೆ. ಇಲ್ಲಿಗೆ ಸಮೀಪದಲ್ಲೇ ಬೆಂಗಳೂರಿನಹೊರವಲಯದ ಕುಂಬಳಗೋಡಿನಲ್ಲಿ ಬಸವಗಂಗೋತ್ರಿ ಆಶ್ರಮವಿದೆ.1970ರಲ್ಲಿ ಬೆಂಗಳೂರಿನ ಕೇಂದ್ರ ಬಸವ ಮಂಟಪ ಸ್ಥಾಪಿತಗೊಂಡ ನಂತರಕುಂಬಳಗೋಡಿನ ಬಸವಗಂಗೋತ್ರಿ ಆಶ್ರಮ (1970), ಧಾರವಾಡದಲ್ಲಿರುವ ಪ್ರಪ್ರಥಮಮಹಿಳಾ ಜಗದ್ಗುರು ಪೀಠ (1972), ಕೂಡಲಸಂಗಮದ ಶ್ರೀ ಬಸವ ಧರ್ಮ ಪೀಠ (1987)ಬಸವ ಕಲ್ಯಾಣದ ಅಲ್ಲಮಪ್ರಭು ಶೂನ್ಯಪೀಠ (2001) ಕುಂಬಳಗೋಡು ಹಾಗೂಉಳವಿಗಳಲ್ಲಿ ಶ್ರೀ ಚನ್ನಬಸವೇಶ್ವರ ಜ್ಞಾನಪೀಠ (2008-09) ಹಾಗೂ ಮಹಾರಾಷ್ಟ್ರದಅಲ್ಲಮಗಿರಿಯಲ್ಲಿ (ಕೊಲ್ಲಾಪುರ ಜಿಲ್ಲೆ ಹಾತ್‍ಕಣಗಲೆ ಗ್ರಾಮ) ಶ್ರೀ ಅಲ್ಲಮ ಪ್ರಭುಯೊಗಪೀಠ (2012)ಗಳು ಸ್ಥಾಪನೆಗೊಂಡವು. ಹಾಗೆಯೇ ಹಳೆ ದೆಹಲಿಯಲ್ಲಿ ಮಾತಾಶ್ರಮ.ಬೀದರ್ ಬಸವ ಮಂಟಪ, ಹೈದರಾಬಾದ್‍ನ ಬಸವ ಮಂಟಪಗಳು ಸೇರಿದಂತೆದೇಶದಾದ್ಯಂತ ಬಸವ ಮಂಟಪಗಳು ಸ್ಥಾಪನೆಗೊಂಡವು. ಈ ರೀತಿಯಾಗಿ ತಮ್ಮ ದಣಿವರಿಯದ ಕಾರ್ಯಚಟುವಟಿಕೆಗಳಿಂದಶ್ರೀಮಠವನ್ನು ಮುನ್ನಡೆಸಿಕೊಂಡು ಬಂದಿರುವ ಮಹಾಜಗದ್ಗುರು ಶ್ರೀ ಮಾತೆ ಮಹಾದೇವಿಅಮ್ಮನವರು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವ ರೀತಿಯ ಸಂಘಟನೆಯನ್ನು ಕಟ್ಟಿದ್ದಾರೆ.ಕೂಡಲಸಂಗಮದಲ್ಲಿ ಶ್ರೀ ಬಸವಧರ್ಮ ಪೀಠವನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿರುವಅಮ್ಮನವರು ಪ್ರತಿ ವರ್ಷ ಜನವರಿ 11 ರಿಂದ 15ರವರೆಗೆ “ಶರಣ ಮೆಳ”ವನ್ನುನಡೆಸಿಕೊಡುತ್ತಾರೆ. ಆ ಸಮಯದಲ್ಲಿ ಲಕ್ಷೋಪಲಕ್ಷ ಜನರು ಈ ಕಾರ್ಯಕ್ರಮಕ್ಕೆಸಾಕ್ಷಿಯಾಗುತ್ತಾರೆ.ಪೂಜ್ಯ ಮಾತೆಯವರು ಇದೇ ರೀತಿಯಾಗಿ ಬೀದರ್ ಜಿಲ್ಲೆಯ ಸುಂದರ ತಾಣಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ತಮ್ಮ ಅನಂತ ವರ್ಷಗಳ ಸಂಕಲ್ಪದಿಂದಅನೇಕ ಬಸವ ಭಕ್ತರ ಬೇಡಿಕೆಯಂತೆ ಬಸವ ಕಲ್ಯಾಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ21 ಎಕರೆ ಜಮೀನು ಖರೀದಿಸಿ ಅಲ್ಲಿ ಅನೇಕ ಕಾರ್ಯಗಳನ್ನು ಸಾಕಾರಗೊಳಿಸಿದರು.ಮುಖ್ಯವಾಗಿ 24 ಅಡಿ ಪೀಠದ ಮೇಲೆ 108 ಅಡಿ ಬೃಹತ್ ಅಭಯಹಸ್ತದಿಂದ ಆಸೀನರಾದಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೇ ರೀತಿಕೂಡಲಸಂಗಮದಲ್ಲಿ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರ 63 ಅಡಿ ಎತ್ತರದ¨s Àವ್ಯಸ್ಮಾರಕ ಹಾಗೂ ಬೆಂಗಳೂರು ಹೊರವಲಯದ ಕುಂಬಳಗೋಡಿನಬಸವಗಂಗೋತ್ರಿಯಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಿಸಲುಕಾರ್ಯೋನ್ಮುಖರಾಗಿದ್ದಾರೆ.ಪೂಜ್ಯ ಮಾತೆಯವರು ಚಿಂತನಶೀಲರೂ, ಪ್ರಗತಿಪರರೂ ಆಗಿದ್ದು ಲಿಂಗಾಯತಸಮಾಜದವರಲ್ಲಿನ ಆಸ್ಮಿತೆಯನ್ನು ಬಡಿಗೆಬ್ಬಿಸುತ್ತಿದ್ದಾರೆ. ಪೂಜ್ಯ ಮಾತೆಯವರುಬೆಂಗಳೂರಿನ ಬಸವ ಮಂಟಪವನ್ನು ಕೇಂದ್ರವಾಗಿಟ್ಟುಕೊಂಡು ಕೂಡಲಸಂಗಮ, ಬಸವಕಲ್ಯಾಣಗಳಿಂದ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ. ಪ್ರಸ್ತುತ ಲಿಂಗಾಯತಸ್ವತಂತ್ರ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಮಾತೆಯವರು ಆ ನಿಟ್ಟಿನಲ್ಲಿಸಮಾನ ಮನಸ್ಕರ ವೇದಿಕೆ ರೂಪಿಸಿಕೊಂಡು ಹೋರಾಟವನ್ನು ಸಂಘಟಿಸುತ್ತಿದ್ದಾರೆ. ಈರೀತಿಯಾಗಿ ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಸಂಘಟನಾತ್ಮಕ ಹೋರಾಟಗಳಿಂದಹೆಸರಾಗಿರುವ ಅಮ್ಮನವರ ಕಾರ್ಯವ್ಯಪ್ತಿ ಬಹಳ ವಿಸ್ತಾರವಾಗಿದ್ದು ದೇಶದ್ಯಾಂತ ಹರಡಿವೆ.

ಶ್ರೀಮಠದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು
ಟ್ರಸ್ಟ್‍ಗಳು : 1. ವಿಶ್ವಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್ (ರಿ), ಬೆಂಗಳೂರು
2. ಅಕ್ಕಮಹಾದೇವಿ ಚಾರಿಟಬಲ್ ಟ್ರಸ್ಟ್ (ರಿ)
3. ಬಸವಧರ್ಮ ಪೀಠ ಚಾರಿಟಬಲ್ ಟ್ರಸ್ಟ್ (ರಿ)
4. ಬಸವ ಮಹಾಮನೆ ಚಾರಿಟಬಲ್ ಟ್ರಸ್ಟ್ (ರಿ)
5. ಲಿಂಗಾಯತ ಧರ್ಮ ಮಹಾಸಭಾ ಚಾರಿಟಬಲ್ ಟ್ರಸ್ಟ್ (ರಿ)

ಮುಖ್ಯ ಪೀಠಗಳು :
1. ಅಕ್ಕಮಹಾದೇವಿ ಅನುಭವ ಪೀಠ – ಧಾರವಾಡ
ಶ್ರೀ ಜಗದ್ಗುರು ಮಾತೆ ಗಂಗಾದೇವಿ ಅಮ್ಮನವರು – 9448113920
2. ಬಸವಧರ್ಮ ಪೀಠ – ಕೂಡಲಸಂಗಮ
ವ್ಯವಸ್ಥಾಪಕರು- ಜಗದ್ಗುರು ಮಾದೇಶ್ವರ ಸ್ವಾಮಿಗಳು – 9341819847
3. ಅಲ್ಲಮಪ್ರಭು ಶೂನ್ಯಪೀಠ – ಬಸವಕಲ್ಯಾಣ
ಜ.ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳು – 9448732456
4. ಚನ್ನಬಸವೇಶ್ವರ ಜ್ಞಾನಪೀಠ – ಬಸವಗಂಗೋತ್ರಿ (ಕುಂಬಳಗೊಡು)
ಜಗದ್ಗುರು ಶ್ರೀ ಚನ್ನಬಸವಾನಂದ ಮಹಾಸ್ವಾಮಿಗಳು – 9880296108
5. ಅಲ್ಲಮ ಪ್ರಭು ಯೋಗಪೀಠ – ಅಲ್ಲಮಗಿರಿ – ಮಹಾರಾಷ್ಟ್ರ
ಜಗದ್ಗುರು ಶ್ರೀ ಬಸವಕುಮಾರ ಮಹಾಸ್ವಾಮಿಗಳು-9449588669

ಪ್ರಮುಖ ಬಸವ ಮಂಟಪಗಳು ಹಾಗೂ ಆಶ್ರಮಗಳು
1. ಬಸವ ಮಂಟಪ – ಹೈದರಾಬಾದ್ (ಜಿಯಾಗೂಡ)
ವ್ಯವಸ್ಥಾಪಕರು – ಶ್ರೀ ಪ್ರಭುಲಿಂಗ ಸ್ವಾಮೀಜಿ – 9640706057
2. ಮಾತಾಶ್ರಮ – ಹಳೆದೆಹಲಿ – ಸರ್ವಮಂಗಳ ಮಾತಾಜಿ
ವ್ಯವಸ್ಥಾಪಕರು- ಮುಕ್ತಾಯಕ್ಕನವರು – 8826461184
3. ಬಸವ ಮಂಟಪ – ಬೀದರ್ – ಸತ್ಯದೇವಿ ಮಾತಾಜಿ-7259778835
4. ಬಸವ ಮಂಟಪ – ಚಿತ್ರದುರ್ಗ – ದಾನೇಶ್ವರ ಮಾತಾಜಿ-7899071420
5. ಅಕ್ಕಮಹಾದೇವಿ ಆಶ್ರಮ – ಸಾಸಲಹಟ್ಟಿ (ಮಾತಾಜಿಯವರ ಹುಟ್ಟೂರು)
ವನಜಾಕ್ಷಮ್ಮ – 9741259273
ಇವುಗಳಲ್ಲದೇ ದೇಶದ ನಾನಾಭಾಗಗಳಲ್ಲಿ ಇಪ್ಪತ್ತಾರು ಬಸವ ಮಂಟಪಗಳು,
ನೂರಾರು ರಾಷ್ಟ್ರೀಯ ಬಸವದಳಗಳು ಕಾರ್ಯನಿರ್ವಹಿಸುತ್ತಿವೆ. ಈ ಬಸವ ಮಂಟಪಗಳಿಗೆ
ಪ್ರವಾಸಿಗರು ಯಾವ ಸಮಯದಲ್ಲಾದರೂ ಬೇಟಿಕೊಟ್ಟು ಸಂದರ್ಶಿಸಬಹುದು ಹಾಗೂ
ಪ್ರಸಾದ & ವಸತಿಯ ವ್ಯವಸ್ಥೆಯಿರುತ್ತದೆ.
* ಶ್ರೀಮಠದ ವತಿಯಿಂದ 1992ರಲ್ಲಿ ರಾಷ್ಟ್ರೀಯ ಬಸವದಳಗಳಿಗೆ ಚಾಲನೆನೀಡಿದ್ದು
ನಾಡಿನಾದ್ಯಂತ ಸಾವಿರಾರು ಬಸವದಳಗಳು ಕಾರ್ಯನಿರ್ವಹಿಸುತ್ತಿವೆ.
* ಪ್ರಜಾಪ್ರಭುತ್ವ ರೀತಿಯ ಬಸವಧರ್ಮ ಸಂಪತ್ತು ಎಂಬ ವಿನೂತನ ಪರಿಕಲ್ಪನೆಯ
ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು 200 ಜನರ ಸಂಸತ್ತು ಇದಾಗಿದೆ.

Swamiji

Swamiji Name :
ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿ ಅಮ್ಮನವರು
Date of Birth :
15-3-1947
Place :
ಸಾಸಲಹಟ್ಟಿ, ಚಿತ್ರದುರ್ಗ ತಾ||
Photo :

Programs

ಪ್ರತಿ ಭಾನುವಾರ “ಶರಣ ಸಂಗಮ ಗೋಷ್ಠಿ” (ಬೆ.11 ರಿಂದ ಮ.2 ರವರೆಗೆ)
ಪ್ರತಿ ಶನಿವಾರ ಸಾಮೂಹಿಕ ಲಿಂಗಾರ್ಚನೆ, ದೀಕ್ಷೆ & ತರಬೇತಿ (ಬೆ. 7ರಿಂದ 8ರವರೆಗೆ)
ಬಸವ ಜಯಂತಿ ಹಾಗೂ ಬಸವ ಪಂಚಮಿ ಕಾರ್ಯಕ್ರಮಗಳು
ಜೂನ್ 30ರಂದು ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಸಂಸ್ಮರಣಾ ಕಾರ್ಯಕ್ರಮ

Institutions

ಕೂಡಲ ಸಂಗಮ - ಪೂರ್ವ ಪ್ರಾಥಮಿಕದಿಂದ ಪದವಿಪೂರ್ವದವರೆಗಿನ ಶಿಕ್ಷಣ
ಕುಂಬಳಗೋಡು - ಅನಾಥಾಶ್ರಮ ಹಾಗೂ ವೃದ್ದಾಶ್ರಮ
ಧಾರವಾಡ, ಬೀದರ್, ಬಸವಕಲ್ಯಾಣಗಳಲ್ಲಿ ಅನಾಥಾಶ್ರಮಗಳು

Photos

Full Address Kannada

ಶ್ರೀ ಬಸವ ಮಂಟಪ
2035, 20ನೇ ಮುಖ್ಯರಸ್ತೆ, 2ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು - 560 010

Map

Near by Places

ನವರಂಗ್ ವೃತ್ತ - 500 ಮೀ.
ಯಶವಂತಪುರ - 3 ಕಿ.ಮೀ.
ಕೆಂ.ಬ.ನಿ. - 4 ಕಿ.ಮೀ.
ರೈಲ್ವೆಸ್ಟೇಷನ್ - 4 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!