Shree Ekadala Bilva Bndematha

Shree Ekadala Bilva Bndematha Claimed

ಶ್ರೀ ಏಕದಳ ಬಿಲ್ವ ಬಂಡೆಮಠ

Average Reviews

Description

ಶ್ರೀ ಏಕದಳ ಬಿಲ್ವ ಬಂಡೆಮಠ – ಕೆಂಗೇರಿ ಉಪನಗರ (ಬೆಂಗಳೂರು)

ಕರ್ತೃ – ಶ್ರೀ ಮ.ನಿ.ಪ್ರ.ಸ್ವ. ಚನ್ನವೀರ ಮಹಾಸ್ವಾಮಿಗಳು

ಬೆಂಗಳೂರು ನಗರದ ಹೊರವಲಯದ ಕೆಂಗೇರಿ ಉಪನಗರ ಬಡಾವಣೆಯಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಏಕದಳ ಬಿಲ್ವ ಬಂಡೆಮಠವು ಪುರಾತನ ಮಠವಾಗಿದ್ದು 12ನೇಶತಮಾನದ ಶರಣ ಕ್ರಾಂತಿಯ ಸಮಯದ ಮಠ ಎಂದು ಹೇಳಲಾಗುತ್ತದೆ. ಬೆಂಗಳೂರುಮೈಸೂರು ಹೆದ್ದಾರಿಯಿಂದ ಸ್ವಲ್ಪ ಒಳ ಸಾಗಿದರೆ ಸಿಗುವ ಕೆಂಗೇರಿ ಹೊರಭಾಗದ ಸುಂದರಪ್ರಕೃತಿಯ ತಾಣದಲ್ಲಿ ಇರುವ ಶ್ರೀಮಠವು ನಗರದ ಜಂಜಾಟಗಳಿಂದ ದೂರದಲ್ಲಿದ್ದುಮನಸ್ಸಿಗೆ ಮುದ ನೀಡುತ್ತದೆ. ಪ್ರಸ್ತುತ ಶ್ರೀಮಠವು 30 ಕೋಟಿ ರೂಗಳ ವೆಚ್ಚದಲ್ಲಿಅಭಿವೃದ್ಧಿಗೊಳ್ಳುತ್ತಿದ್ದು ಆಧುನಿಕತೆಗೆ ತೆರೆದುಕೊಂಡಿದೆ.ಶ್ರೀಮಠದ ಕರ್ತೃ ಗುರುಗಳಾದ ಶ್ರೀ ಮ.ನಿ.ಪ್ರ.ಸ್ವ. ಚನ್ನವೀರ ಮಹಾಸ್ವಾಮಿಗಳುಕಲ್ಯಾಣದ ಕ್ರಾಂತಿಯ ನಂತರದ ಸಮಯದಲ್ಲಿ ಸಂಚಾರ ಹೊರಟು ಈ ಭಾಗಕ್ಕೆ ಬಂದುನೆಲೆನಿಂತರು ಎಂದು ಹೇಳಲಾಗುತ್ತದೆ. ಇಲ್ಲಿ ನೆಲೆನಿಂತ ಗುರುಗಳು ಭಕ್ತರನ್ನು ಹರಸುತ್ತಾ,ಅವರಿಗೆ ಶರಣ ತತ್ತ್ವಗಳನ್ನು ಪ್ರಚುರ ಪಡಿಸುತ್ತಾ ಮಠವನ್ನು ಕಟ್ಟಿದ್ದಾರೆ. ಶ್ರೀಮಠಕ್ಕೆಬಂಡೆಮಠ ಎಂಬ ಹೆಸರು ಬರಲು ಕಾರಣ ಶ್ರೀಗಳು ಪೂಜೆಯಲ್ಲಿ ನಿರತರಾಗುತ್ತಿದ್ದ ವೇಳೆಗೆಸರಿಯಾಗಿ ಸಮೀಪದ ಬಂಡೆ ಎರಡು ಹೋಳಾಗುತ್ತಿದ್ದವು ಎಂಬ ಜನಪದ ಕಥೆ ಕೇಳಿಬರುತ್ತದೆ.ಇನ್ನು ಶ್ರೀಮಠಕ್ಕೆ ಏಕದಳ ಬಿಲ್ವ ಬಂಡೆ ಮಠವೆಂಬ ಹೆಸರು ಬರಲು ಕಾರಣಶ್ರೀಮಠದ ಆವರಣದಲ್ಲಿ ಪುರಾತನವಾದ ಏಕದಳ ಬಿಲ್ವಪತ್ರೆ ಮರವಿತ್ತು ಎಂಬುದಾಗಿದೆ. ಆಮರವು ಇದ್ದ ಸ್ಥಳ ಈಗಲೂ ಇರುವುದನ್ನು ಕಾಣಬಹುದು. ಈ ರೀತಿಯಾಗಿ ಐತಿಹ್ಯಹೊಂದಿರುವ ಬೆಂಗಳೂರಿನ ಪುರಾತನ ಮಠಗಳಲ್ಲಿ ಒಂದಾಗಿ ಬೆಳೆದಿರುವ ಶ್ರೀಮಠದಇತಿಹಾಸದಲ್ಲಿ ಈವರೆಗೂ 12ಜನ ಶ್ರೀಗಳು ಅಧಿಕಾರ ನಡೆಸಿರುವರು ಎಂದು ತಿಳಿಯುತ್ತದೆ.ಅದಕ್ಕೆ ಪೂರಕವಾಗಿ ಶ್ರೀಮಠದ ಆವರಣದಲ್ಲಿ 11 ಗದ್ದುಗೆಗಳನ್ನು ಕಾಣಬಹುದು.ಶ್ರೀಮಠದ ಪರಂಪರೆಯು ಸುಧೀರ್ಘವಾಗಿದ್ದು ಇನ್ನೂ ಹೆಚ್ಚಿನ ಶ್ರೀಗಳು ಅಧಿಕಾರನಡೆಸಿರಬಹುದಾದರೂ ಸ್ಪಷ್ಟತೆಯಿಲ್ಲ. 12ನೇ ಶತಮಾನದಲ್ಲಿ ಪ್ರಾರಂಭವಾಗಿ ಶರಣ ತತ್ತ್ವದಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಶ್ರೀಮಠವು ನಂತರ 15ನೇ ಶತಮಾನದಲ್ಲಿ ಶ್ರೀತೋಂಟದ ಸಿದ್ದಲಿಂಗೇಶ್ವರರ ಕಾಲದಲ್ಲಿ ನಡೆದ ಧಾರ್ಮಿಕ ಆಂದೋಲನದಲ್ಲಿ ಸಮಾಜದಅನಿಷ್ಟ ಪದ್ಧತಿಗಳನ್ನು ದೂರಮಾಡಲು ಸ್ಪಂದಿಸಿ ವೀರಶೈವ – ಲಿಂಗಾಯತ ಧರ್ಮವುಬೆಳೆಯಲು ಶ್ರಮಿಸಿದೆ. ಶ್ರೀಮಠಕ್ಕೆ ವಿಜಯನಗರ ಅರಸರು, ಕೆಳದಿ ಅರಸರು, ಮೈಸೂರುಅರಸರು ಹಾಗೂ ಮಾಗಡಿ ಕೆಂಪೇಗೌಡರ ಕಾಲದಲ್ಲಿ ರಾಜಾಶ್ರಯ ದೊರೆತು ಪ್ರಮುಖಮಠವಾಗಿ ರೂಪುಗೊಂಡಿರುವುದು ಸ್ಪಷ್ಟವಾಗಿದೆ.ಶ್ರೀಮಠದ ಪರಂಪರೆಯಲ್ಲಿ ಕರ್ತೃ ಗುರುಗಳಿಂದ ಇಂದಿನ ಶ್ರೀಗಳವರೆಗೆ ಎಲ್ಲಾಶ್ರೀಗಳೂ ಆಯುರ್ವೇದ ಔಷಧಿಗಳನ್ನು ನೀಡುತ್ತಾ ಬಂದಿದ್ದಾರೆ. ಗುರುಪರಂಪರೆಯ 4ನೇಚರಮೂರ್ತಿ ಶ್ರೀ ಕರಿವೃಷಭೇಂದ್ರ ಮಹಾಸ್ವಾಮಿಗಳ ಅವಧಿಯಲ್ಲಿ ಆಗಿನ ಮೈಸೂರು ಅರಸ ್ರೀ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಬೆನ್ನುಪಣಿ ಗಾಯವುಂಟಾಗಿ ಆಗಿನ ಶ್ರೀಗಳು ಅದಕ್ಕೆಔಷಧವನ್ನು ಕೊಟ್ಟು ನಿವಾರಿಸಿದ್ದಕ್ಕೆ ಅರಸರು ಮಠವನ್ನು ಕಟ್ಟಿಸಿಕೊಟ್ಟರೆಂದು ತಿಳಿದುಬರುತ್ತದೆ. ಆಗಿನ ಆ ಮಠವು ಈಗಲೂ ಇರುವುದನ್ನು ಕಾಣಬಹುದಾಗಿದೆ. ಈ ರೀತಿಯಾಗಿಸಾಗಿ ಬಂದಿರುವ ಶ್ರೀಮಠದ ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ.ಸ್ವ.ಚರಮೂರ್ತಿ ಹೊನ್ನಪ ್ಪ ಮಹಾಸ್ವಾಮಿಗಳು ಈಗಿನ ಶ್ರೀಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದು 1976ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಸಚ್ಚಿದಾನಂದಮಹಾಸ್ವಾಮಿಗಳು 1971ರ ಜೂನ್ 01ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಹಿರಿಯಗುರುಗಳ ಸೇವೆ, ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಶ್ರೀಮಠದ ಧಾರ್ಮಿಕಆಚರಣೆಗಳ ಜೊತೆಗೆ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಿದ ಶ್ರೀಗಳುಶ್ರೀಮಠವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. 1992ರಲ್ಲಿ “ಶ್ರೀ ಬಂಡೇಶ್ವರ ಸ್ವಾಮಿಎಜುಕೇಷನ್ ಸೊಸೈಟಿ”ಯನ್ನು ಸ್ಥಾಪಿಸಿದ ಶ್ರೀಗಳು ಪ್ರಾಥಮಿಕದಿಂದ ಪದವಿವರೆಗಿನ ಶಿಕ್ಷಣಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಆ ಮುಖೇನ ಗ್ರಾಮೀಣ ಭಾಗದ ಬಡ ಮಕ್ಕಳವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.ಶ್ರೀಗಳು ಶ್ರೀಮಠವನ್ನು ಹತ್ತು ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಅಭಿವೃದ್ಧಿಪಥದತ್ತ ಮುನ್ನಡೆಸಿದ್ದು ಹಳೆ ಮಠದ ಜೀರ್ಣೋದ್ಧಾರ, ಜ್ಞಾನಯೋಗ್ಯ ಸಭಾಭವನನಿರ್ಮಾಣ, ಶ್ರೀಗಳ ವಾಸಕ್ಕೆ ಕಟ್ಟಡ, ಆವರಣದಲ್ಲಿನ, ಕಲ್ಯಾಣಿ ಆವರಣದಲ್ಲಿನ ವಿದ್ಯಾಸಂಸ್ಥೆಅಭಿವೃದ್ಧಿ ಹೀಗೆ ಸುಮಾರು 30 ಕೋಟಿ ರೂಗಳ ವೆಚ್ಚದಲ್ಲಿ ಶ್ರೀಮಠದ ಅಭಿವೃದ್ಧಿಕಾರ್ಯಗಳನ್ನು ಪೂರ್ಣಗೊಳಿಸುತಲಿದ್ದಾರೆ. ಶ್ರೀಗಳು ಇತ್ತೀಚೆಗೆ ತಮ್ಮಉತ್ತರಾಧಿಕಾರಿಗಳನ್ನಾಗಿ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳನ್ನು ನೇಮಕ ಮಾಡಿಕೊಂಡಿದ್ದುಕಿರಿಯ ಶ್ರೀಗಳು, ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಸಚ್ಚಿದಾನಂದ ಮಹಾಸ್ವಾಮಿಗಳು
Date of Birth :
23-04-1947
Place :
ಬಾಣವಾಡಿ ಗ್ರಾಮ, ಮಾಗಡಿ ತಾ||
Pattadikara :
01-06-1971
Photo :
Swamiji Name :
ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಶಿವಾನಂದ ಮಹಾಸ್ವಾಮಿಗಳು
Date of Birth :
28-08-198628-08-1986
Place :
ಚಿಕ್ಕಲಬಾಳು, ಕನಕಪುರ ತಾ||
Pattadikara :
14-02-2016
Photo :

Programs

-

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜು

Photos

Full Address Kannada

ಶ್ರೀ ಏಕದಳ ಬಿಲ್ವ ಬಂಡೆಮಠ
ಕೊಮ್ಮಘಟ್ಟ ರಸ್ತೆ, ಕೆಂಗೇರಿ ಉಪನಗರ,
ಬೆಂಗಳೂರು - 560 060

Map

Near by Places

ಮೈಸೂರು ರಸ್ತೆ - 4 ಕಿ.ಮೀ.
ಕೆಂಪೇಗೌಡ ಬಸ್ ನಿಲ್ದಾಣ - 16 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!