ಬೆಂಗಳೂರಿನ ಈಗಿನ ರೈಲ್ವೆ ನಿಲ್ದಾಣಕ್ಕೆ ದಕ್ಷಿಣದ ತುತ್ತ ತುದಿಗೆ ಇರುವ ಅಡ್ಡರಸ್ತೆಯೇ ಬೇಲಿ ಮಠದ ರಸ್ತೆ. ಅರಳೇಪೇಟೆಗೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿಬಿನ್ನಿಮಿಲ್ಲಿನ ಬಲಭಾಗಕ್ಕಿರುವುದೇ ಈಗಿನ ಬೇಲಿಮಠ. ಹಿಂದೆ ಬೆಂಗಳೂರು ಪಟ್ಟಣದಸುತ್ತಲೂ ಇದ್ದ ರಕ್ಷಣಾ ಕೋಟೆಗೆ ಪಶ್ಚಿಮ ದಿಗ್ಭಾಗದಲ್ಲಿ ಮೂರು ಬಾಗಿಲುಗಳಿದ್ದವು.ಇವುಗಳಲ್ಲಿ ಮಧ್ಯದ ಅಗ್ರಹಾರದ ಬಾಗಿಲಿಗೆ ಸಮೀಪ ಈ ಮಠವಿತ್ತು. ಕೋಟೆಗೆರಕ್ಷಣಾರ್ಥವಾಗಿ ಹೊರಭಾಗದಲ್ಲಿ ಹಬ್ಬಿಸಿದ್ದ ಅಭೇದ್ಯ ಸೀಗೆ ಬೇಲಿಗೆ ಹೊಂದಿಕೊಂಡಂತೆ ಈಮಠವಿದ್ದುದರಿಂದ ಹಿಂದೆ ಇದು “ಸೀಗೆ ಬೇಲಿಮಠ”ವೆಂದೇ ಹೆಸರಾಗಿತ್ತು. ಕ್ರಮೇಣಬೇಲೀಮಠ ಮಹಾಸಂಸ್ಥಾನವಾಗಿ ರೂಢಿಗತವಾಗಿ ಕರೆಯಲ್ಪಡುತ್ತಿದೆ.ಹೊಸಕೋಟೆಯ ಶ್ರೀ ಮಹಾಂತ ಮಹಾಸ್ವಾಮಿಗಳು ಕಲ್ಯಾಣ ನಗರದಹುಮನಾಬಾದಿನಲ್ಲಿ ಬಸವತೀರ್ಥ ಮಠ ಮತ್ತು ಹುಲಕುಂಠಿ ಮಠಗಳನ್ನು ಸ್ಥಾಪಿಸಿಲೋಕಸಂಚಾರ ಕೈಗೊಂಡು ಬೆಂಗಳೂರಿಗೆ ಆಗಮಿಸಿ ಬೇಲೀಮಠವನ್ನುಸ್ಥಾಪಿಸಿರಬಹುದೆಂದು ಹೇಳಲಾಗುತ್ತದೆ. ಲಭ್ಯವಿರುವ ದಾಖಲೆಗಳ ಆದಾರದ ಮೇಲೆಹೇಳುವುದಾದರೆ ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಶ್ರೀ ಬೇಲೀಮಠಮಹಾಸಂಸ್ಥಾನವನ್ನು ಸ್ಥಾಪಿಸಿರಬಹುದೆಂದು ಅಂದಾಜಿಸಬಹುದು. ಶ್ರೀ ಬೇಲೀಮಠಕ್ಕೂ &ಶ್ರೀ ದೊಡ್ಡಮಠಕ್ಕೂ ನೇರ ಸಂಬಂಧಗಳಿದ್ದು ನಂತರ ಆಡಳಿತಾತ್ಮಕ ಸಂಬಂಧಬೇರ್ಪಟ್ಟಿತೆಂದು ತಿಳಿದುಬರುತ್ತದೆ.ಚರಮೂರ್ತಿಗಳಾಗಿದ್ದ ಹೊಸಕೋಟೆಯ ಶ್ರೀ ಮಹಾಂತ ಮಹಾಸ್ವಾಮಿಗಳುನಾಡಿನುದ್ದಕ್ಕೂ ಸಂಚರಿಸಿ ಅನೇಕ ಮಠಗಳನ್ನು ಸ್ಥಾಪಿಸುತ್ತಾ ಧರ್ಮ ಪ್ರಚಾರ ಕಾರ್ಯದಲ್ಲಿತಮ್ಮನ್ನು ತೊಡಗಿಸಿಕೊಂಡು ವೀರಶೈವ ಧರ್ಮ ಬೆಳೆಯುವಂತೆ ಮಾಡಿದ್ದಾರೆ. ಬೆಂಗಳೂರಿನಶ್ರೀ ದೊಡ್ಡಮಠ, ಪುಂಗನೂರಿನ ಶ್ರೀ ದೊಡ್ಡಮಠ, ಹೊಸಕೋಟೆಯ ಶ್ರೀ ದೊಡ್ಡಮಠ,ನೆಲಮಂಗಲದ ಶ್ರೀ ಹೊಸಮಠ ಇವೇ ಮೊದಲಾದ ಮಠಗಳು ಹೊಸಕೋಟೆಯ ಶ್ರೀಮಹಾಂತ ಸ್ವಾಮಿಗಳ ಕಾಲದಲ್ಲಿ (ಕ್ರಿ.ಶ. 1720-1761) ಸ್ಥಾಪಿತಗೊಂಡಿವೆಯೆಂದು“ಬೆಂಗಳೂರು ನಗರದ ವೀರಶೈವ ಮಠಗಳು” ಒಂದು ಸಾಂಸ್ಕøತಿಕ ಅಧ್ಯಯನ ಗ್ರಂಥದಲ್ಲಿಉಲ್ಲೇಖವಾಗಿದೆ. ಈ ರೀತಿ ನಾಡಿನಾದ್ಯಂತ ಮಠಗಳನ್ನು ಸ್ಥಾಪಿಸುತ್ತಾ ಅಪಾರ ಶಿಷ್ಯಬಳಗವನ್ನು ಹೊಂದುತ್ತಾ ಸಾಗಿದ ಶ್ರೀಗಳು 1950ರ ಸುಮಾರಿಗೆ ಶ್ರೀ ಬೇಲಿಮಠದಅಧಿಕಾರವನ್ನು ತಮ್ಮ ಆಪ್ತ ಶಿಷ್ಯ ಶ್ರೀ ಮ.ನಿ.ಪ್ರ. ಸಂಗನ ಬಸವ ಸ್ವಾಮಿಗಳಿಗೆವಹಿಸಿಕೊಟ್ಟಿದ್ದಾರೆ.ಶ್ರೀ ಸಂಗನ ಬಸವ ಮಹಾಸ್ವಾಮಿಗಳು ಸದಾ ಗುರುಗಳ ಸೇವೆಯಲ್ಲಿಯೇನಿರತರಾಗಿ ಅವರ ಜೊತೆಯಲ್ಲಿಯೇ ನಾಡಿನುದ್ದಗಲಕ್ಕೂ ಸಂಚಾರ ಕೈಗೊಂಡವರುಅಧಿಕಾರ ವಹಿಸಿಕೊಳ್ಳುವಾಗಲೇ ವಯೋವೃದ್ಧರಾಗಿದ್ದ ಶ್ರೀಗಳು ತಮ್ಮ ವೃದ್ಯಾಪದಲ್ಲಿ ಬೇಲೀಮಠದ ಧಾರ್ಮಿಕ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ವಿದ್ವಾನ್ ಪಂಡಿತರಾದಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳನ್ನು ಅಧಿಕಾರಕ್ಕೆ ತಂದರು. ಶ್ರೀ ಬಸವಲಿಂಗಸ್ವಾಮಿಗಳ ಕಾಲದಲ್ಲಿ (1766-1825) ಶ್ರೀ ಬೇಲಿ ಮಠವು ಆರ್ಥಿಕವಾಗಿ ಸದೃಡತೆಹೊಂದಿತು. ಸ್ವತಃ ವೀರಶೈವ ಕವಿಗಳಾಗಿದ್ದ ಶ್ರೀಗಳು “ಮಾಲಾಟೀಕೆ” “ಏಕೋತ್ತರ ಶತಸ್ಥಲವ್ಯಾಖ್ಯಾನ”, “ಮಹಂತಿನ ತಾರಾವಳಿ” ಮುಂತಾದ ಕೃತಿಗಳನ್ನು ರಚಿಸಿದ್ದರು. ಇವರಕಾಲದಲ್ಲಿಯೇ ಕಿರಿಯ ಶ್ರೀಗಳಾಗಿ ಶ್ರೀ ಚನ್ನವೀರ ಸ್ವಾಮಿಗಳಿದ್ದರು.ಶ್ರೀಮಠದ ಪರಂಪರೆಯ 5ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಕೆಂಪನಂಜೇಮಹಾಸ್ವಾಮಿಗಳು ಬೇಲೀಮಠದ ಇತಿಹಾಸದ ಪ್ರಮುಖರು. ಇವರು ಮೈಸೂರಿನಅರಸರಾದ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ ನಿಕಟ ಸಂಪರ್ಕವನ್ನು ಹೊಂದಿದ್ದು ಇವರಕಾಲದಲ್ಲಿ ಮೈಸೂರು ಅರಸರಿಂದ ಭೂಮಿ ದೊರೆತು ಮಠವು ಶ್ರೀಮಂತಗೊಂಡಿತು. ಇವರನಂತರ ಅಧಿಕಾರಕ್ಕೆ ಬಂದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು 1825 ರಿಂದ1899ರವರೆಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು 1858ರಲ್ಲಿ ತಮ್ಮಉತ್ತರಾಧಿಕಾರಿಯನ್ನಾಗಿ ಶ್ರೀ ಮ.ನಿ.ಪ್ರ. ರುದ್ರಮಹಾಸ್ವಾಮಿಗಳನ್ನು ಅಧಿಕಾರಕ್ಕೆ ತಂದಿದ್ದರು.ಶ್ರೀ ರುದ್ರಸ್ವಾಮಿಗಳು ಗುರುಗಳ ಮಾರ್ಗದರ್ಶನದಲ್ಲಿ ಸುಧೀರ್ಘ 40 ವರ್ಷಗಳಆಡಳಿತವನ್ನು ನಡೆಸಿದ್ದು 1880ರಲ್ಲಿ ಬೇಲೀಮಠದ ಹಳೆಯ ಕಟ್ಟಡವನ್ನುಜೀರ್ಣೋದ್ಧಾರಗೊಳಿಸಿದರು. ಹಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು1899ರಲ್ಲಿ ಲಿಂಗೈಕ್ಯರಾಗಿದ್ದು ಗುರುಗಳು ಐಕ್ಯಗೊಂಡ ಕೆಲವೇ ದಿನಗಳಲ್ಲಿ ಶ್ರೀರುದ್ರಸ್ವಾಮಿಗಳೂ ಲಿಂಗೈಕ್ಯರಾಗಿದ್ದು ತಿಳಿದುಬರುತ್ತದೆ.ಇವರುಗಳ ನಂತರ ಬೇಲೀಮಠದಲ್ಲಿದ್ದುಕೊಂಡು ಶಿಷ್ಯವೃತ್ತಿಯನ್ನುನಡೆಸಿಕೊಂಡು ಬರುತ್ತಿದ್ದ ಶ್ರೀ ಶಿವರುದ್ರ ದೇವರನ್ನು ಸಮಾಜದ ಗುರು-ಹಿರಿಯರೆಲ್ಲಾ ಸೇರಿ1899ರಲ್ಲಿ ಶ್ರೀಮಠದ ಅಧಿಕಾರಕ್ಕೆ ತಂದಿದ್ದು ಶ್ರೀ ಮ.ನಿ.ಪ್ರ. ಶಿವರುದ್ರ ಮಹಾಸ್ವಾಮಿಗಳೆಂಬಅಭಿದಾನದಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡರು. ಶ್ರೀಗಳು ಅಧಿಕಾರ ವಹಿಸಿಕೊಂಡನಂತರ ಅನೇಕ ಎಡರು-ತೊಡರುಗಳನ್ನು ಎದುರಿಸಬೇಕಾಯಿತು. ಶ್ರೀಗಳು ಮಠದ ಮೂಲಅಸ್ತಿತ್ತ್ವವನ್ನು ಕಾಪಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದು ಶ್ರೀಮಠದ ಆಸ್ತಿಯನ್ನು ಕಾನೂನುಬದ್ದಗೊಳಿಸಿ ಆದಾಯದ ಮೂಲವನ್ನು ಹೆಚ್ಚಿಸಿಕೊಂಡರು. ಇವರ ಕಾಲದಲ್ಲಿ ಶ್ರೀಮಠವುಆರ್ಥಿಕವಾಗಿ ಸದೃಡಗೊಂಡು ಬೆಳೆಯಿತು. ಮುಂದೆ 1924ರ ಮೇ 09ರಂದು ಶ್ರೀ ಮ.ನಿ.ಪ್ರ.ಇಮ್ಮಡಿ ಸಿದ್ದಲಿಂಗ ಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಅಧಿಕಾರಕ್ಕೆ ತಂದು1941ರ ಆಗಸ್ಟ್ 06ರಂದು ಲಿಂಗೈಕ್ಯರಾದರು.1941ರವರೆಗೂ ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡ ಶ್ರೀಇಮ್ಮಡಿ ಸಿದ್ದಲಿಂಗ ಸ್ವಾಮಿಗಳು 1941ರ ತರುವಾಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸಿದರು. ಕ್ರಿಯಾಶೀಲ ವ್ಯಕ್ತಿತ್ತ್ವದ ಶ್ರೀಗಳು ಹಿಂದೆ ಸ್ಥಾಪಿತಗೊಂಡಿದ್ದ ಶ್ರೀ ಶಿವರುದ್ರಸ್ವಾಮಿಗಳ ವೇದಪಾಠಶಾಲೆ ಹಾಗೂ ವಿದ್ಯಾರ್ಥಿ ನಿಲಯವನ್ನು ಮುಂದುವರೆಸಿಅಭಿವೃದ್ಧಿಗೊಳಿಸಿದರು. 1951ರಲ್ಲಿ ಇವರೇ ಒಂದು ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಇವರ ಇನ್ನೊಂದು ಪ್ರಮುಖ ಸಾಧನೆಎಂದರೆ ಸಂಸ್ಕøತದಲ್ಲಿನ “ಶಿವಲಿಂಗಾರ್ಚನೆ ಪ್ರಯೋಗ”, “ವೀರಶೈವಾನಂದ ಚಂದ್ರಿಕೆ”,“ಲಿಂಗಧಾರಣ ಚಂದ್ರಿಕೆ” ಮೂರು ಉದ್ಛ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಪ್ರಕಟಿಸಿದ್ದು.ಈಗಿನ ಶ್ರೀಗಳಾದ ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರಮಹಾಸ್ವಾಮಿಗಳು 1965ರಲ್ಲಿ ಹಿಂದಿನ ಶ್ರೀಗಳ ಐಕ್ಯಾನಂತರ ಶ್ರೀಮಠದ ಸಂಪೂರ್ಣಅಧಿಕಾರ ಹೊಂದಿದ್ದು ಮಠವನ್ನು ಆರ್ಥಿಕವಾಗಿ ಸದೃಡಗೊಳಿಸಿರುವುದಲ್ಲದೇಶೈಕ್ಷಣಿಕವಾಗಿಯೂ ಅಭಿವೃದ್ಧಿಪಡಿಸಿದ್ದಾರೆ. ಉತ್ತಮ ವಾಗ್ಮಿಗಳಾಗಿರುವ ಶ್ರೀಗಳು ನಾಡನ್ನೆಲ್ಲಾಸಂಚರಿಸಿ ಧರ್ಮ ಪ್ರಸಾರವನ್ನು ಮಾಡುತ್ತಿದ್ದಾರೆ. ಪರಂಪರೆಯ ನಾಲ್ಕನೆಯ ಗುರುಗಳಾದಶ್ರೀ ಕೆಂಪನಂಜೇ ಮಹಾಸ್ವಾಮಿಗಳ ಕಾಲದಲ್ಲಿಯೇ ವೇದ ಪಾಠಶಾಲೆಯನ್ನುಪ್ರಾರಂಭಿಸಿದ್ದರೆಂಬ ಮಾಹಿತಿಯಿದ್ದು ಇಲ್ಲಿ ಮಠಾಧಿಪತಿಗಳಾಗುವ ವಟುಗಳು ಶಿಕ್ಷಣಪಡೆಯುತ್ತಿದ್ದರು. ಅಂದಿನಿಂದ ಪ್ರಾರಂಭಗೊಂಡಿರುವ ಶ್ರೀಮಠದ ಶಿಕ್ಷಣ ಸೇವೆ ಇಂದಿಗೂಮುಂದುವರೆದುಕೊಂಡು ಬಂದಿದೆ.ಶ್ರೀಮಠದ ಶೈಕ್ಷಣಿಕ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀ ನಿ.ಪ್ರ.ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ನೆಲಮಂಗಲ ಸಮೀಪದ ಶಾಖಾಮಠದ ಆವರಣದಲ್ಲಿ ಬೃಹತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮಾಂತರ ಭಾಗದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ತಾಂತ್ರಿಕ ಮಹಾವಿದ್ಯಾಲಯ, ಫಾರ್ಮಸಿ ಕಾಲೇಜ್,ಕಂಪ್ಯೂಟರ್ ಶಿಕ್ಷಣ ಸೇರಿದಂತೆ ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಣ ಒದಗಿಸುತ್ತಶಿಕ್ಷಣ ಸಂಸ್ಥೆಯನ್ನು ವಿಸ್ತರಿಸಿ ಬೆಳೆಸಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು
Pattadikara :
1965
Photo :
Programs
ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ
ಪ್ರತಿ ಹಬ್ಬಗಳ ಆಚರಣೆ
Photos
Full Address Kannada
ಶ್ರೀ ಬೇಲೀ ಮಠ ಮಹಾಸಂಸ್ಥಾನ
ಕಾಟನ್ಪೇಟೆ, ಬಿನ್ನಿಮಿಲ್ ಹತ್ತಿರ ಬೆಂಗಳೂರು - 560 053
ಬೆಂಗಳೂರು ದಕ್ಷಿಣ ತಾ|| ಮತ್ತು ಬೆಂಗಳೂರು ನಗರ ಜಿಲ್ಲೆ