ರಾಮನಗರ ಜಿˉÁ್ಲ ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವ ಬಿಡದಿ ಗ್ರಾಮದಹೊರಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಚೌಕಿಮಠವು ಶ್ರೀ ಮರಳೆಗವಿಮಠದಶಾಖಾಮಠವಾಗಿ ವಿರಕ್ತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಶ್ರೀಮಠದಇತಿಹಾಸ ಹಾಗೂ ಕರ್ತೃಗುರುಗಳ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದಲ್ಲಿಕರ್ತೃ ಗದ್ದುಗೆಯಿದ್ದು ನಂತರ ಖಾಲಿ ಉಳಿದಿರುವಂತೆ ತೋರುತ್ತಿದ್ದು ಮರಳೇಗವಿ ಮಠದಶ್ರೀಗಳು ಶ್ರೀಮಠದ ನಿರ್ವಹಣೆಯನ್ನು ಮಾಡಿಕೊಂಡು ಬಂದಿರುತ್ತಾರೆ.ಬಹುಕಾಲ ಖಾಲಿ ಉಳಿದಿದ್ದ ಶ್ರೀ ಚೌಕಿಮಠಕ್ಕೆ ಶ್ರೀ ಮರಳೇಗವಿ ಮಠದ ಲಿಂ|| ಶ್ರೀಮ.ನಿ.ಪ್ರ. ಚರಮೂರ್ತಿ ಶಿವರುದ್ರ ಸ್ವಾಮಿಗಳು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಹುಚ್ಚಪ್ಪಸ್ವಾಮಿಗಳನ್ನು 1973ರಲ್ಲಿ ಅಧಿಕಾರಕ್ಕೆ ತಂದು ಅನುಗ್ರಹ ನೀಡಿದ್ದಾರೆ. ಈಗಿನ ಶ್ರೀಗಳು ಬರುವಮುಂಚೆ ಶ್ರೀಗಳ ತಂದೆ-ತಾಯಿಗಳೇ ಶ್ರೀಮಠವನ್ನು ನೋಡಿಕೊಂಡು ಹೋಗುತ್ತಿದ್ದು ತದನಂತರ ಈಗಿನ ಶ್ರೀಗಳಿಗೆ ಪಟ್ಟಾಧಿಕಾರವಾಗಿದೆ.ಶ್ರೀ ಮ.ನಿ.ಪ್ರ. ಹುಚ್ಚಪ್ಪ ಸ್ವಾಮಿಗಳು ರಾಮನಗರ ತಾಲ್ಲೂಕು ಅಯ್ಯನೂರುಪಾಳ್ಯಗ್ರಾಮದಲ್ಲಿ ಜನಿಸಿದ್ದು ನಂತರದಲ್ಲಿ ಶ್ರೀ ಮರಳೇಗವಿ ಮಠದಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಕಳೆದ ನಾಲ್ಕುದಶಕಗಳಲ್ಲಿ ಶ್ರೀಮಠವನ್ನು ಮುಂಚೂಣಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಪುರಾತನಮಠವಾಗಿರುವ ಶ್ರೀ ಚೌಕಿಮಠವು ಪ್ರಸ್ತುತ ಶಿಥಿˉÁವಸ್ಥೆಯಲ್ಲಿದ್ದು ಮಠದ ಕಟ್ಟಡಕ್ಕೆ ಕಾಯಕಲ್ಪನೀಡಬೇಕಿದೆ.ಶ್ರೀಗಳು ಶ್ರೀಮಠದಲ್ಲಿ ಭಕ್ತರ ಸಹಕಾರದೊಂದಿಗೆ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ಅಮವಾಸೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ನಡೆಸುತ್ತಾರೆ.ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಸುತ್ತಿದ್ದು ವಿವಿಧ ಕಾರ್ಯಕ್ರಮಗಳುಆಯೋಜನೆಗೊಂಡಿರುತ್ತವೆ ಮತ್ತು ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಗಳುನಡೆಯುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಹುಚ್ಚಪ್ಪ ಸ್ವಾಮಿಗಳು
Place :
ಅಯ್ಯನೂರಪಾಳ್ಯ, ರಾಮನಗರ ತಾ||
Pattadikara :
23-05-1973
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೀಪೆÇೀತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಶಾª್ರÀಣ ಮಾಸದಲ್ಲಿ ವಿಶೇಷ ಪೂಜೆ