Shree Makkala Devara Matha

Shree Makkala Devara Matha Claimed

ಶ್ರೀ ಮಕ್ಕಳ ದೇವರ ಮಠ

Average Reviews

Description

ಶ್ರೀ ಮಕ್ಕಳ ದೇವರ ಮಠ – ಕಣ್ಣೂರು

ಕರ್ತೃ – ಶ್ರೀ ಮ.ನಿ.ಪ್ರ. ಶಾಂತೇಶ್ವರ ಮಹಾಸ್ವಾಮಿಗಳು

ಮಾಗಡಿ ತಾಲ್ಲೂಕಿನ ಕಣ್ಣೂರು ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿಸ್ಥಾಪಿತಗೊಂಡಿರುವ ಶ್ರೀ ಮಕ್ಕಳ ದೇವರ ಮಠವು ಪುರಾತನ ಕಾಲದಿಂದಲೂ ತನ್ನಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠದ ಸ್ಥಾಪಕ ಗುರುಗಳು ಶ್ರೀ ಮ.ನಿ.ಪ್ರ.ಶಾಂತೇಶ್ವರ ಸ್ವಾಮಿಗಳು. ಕೆಲವರು ಅನಾಥ ಮಕ್ಕಳನ್ನು ಈ ಮಠಕ್ಕೆ ತಂದು ಯಾರಿಗೂಗೊತ್ತಿಲ್ಲದಂತೆ ಮಠದ ಜಗುಲಿಯ ಮೇˉÉ ಬಿಟ್ಟು ಹೋಗುತ್ತಿರುವುದನ್ನು ಗಮನಿಸಿದ ಶ್ರೀಶಾಂತೇಶ್ವರ ಸ್ವಾಮಿಗಳು ಈ ಅನಾಥ ಮಕ್ಕಳನ್ನು ಸಾಕಿ ಸಂಸ್ಕಾರವಂತರನ್ನಾಗಿರೂಪಿಸುತ್ತಿದ್ದರು. ಈ ವಿಷಯ ನಾಡಿನಾದ್ಯಂತ ಹಬ್ಬಿ ಶ್ರೀಮಠಕ್ಕೆ ಶ್ರೀ ಮಕ್ಕಳ ದೇವರಮಠವೆಂದು ಹಾಗೂ ಶ್ರೀಗಳಿಗೆ “ಮಕ್ಕಳ ಶಾಂತೇಶ್ವರ ಸ್ವಾಮಿ”ಗಳೆಂದು ಹೆಸರು ಬಂದಿತೆಂದುತಿಳಿದುಬರುತ್ತದೆ.ಶ್ರೀ ಶಾಂತೇಶ್ವರ ಸ್ವಾಮಿಗಳ ಪ್ರಸಿದ್ಧಿ ಹಬ್ಬಿ ಆಗಿನ ಮೈಸೂರು ಅರಸರಾದನಂಜರಾಜ ಒಡೆಯರು ಸ್ವತಃ ಪರಿವಾರ ಸಮೇತ ಮಠಕ್ಕೆ ಆಗಮಿಸಿ ಹೊನ್ನಾಪುರ ಹಾಗೂಹುಲಿಕಲ್ಲು ಗ್ರಾಮಗಳನ್ನು ಶ್ರೀಮಠಕ್ಕೆ ಉಂಬಳಿಯಾಗಿ ನೀಡಿದರೆಂಬ ಐತಿಹ್ಯ ಈ ಮಠಕ್ಕೆಸಂಬಂಧಿಸಿದ ತಾಮ್ರಶಾಸನದಲ್ಲಿ ಕಾಣಸಿಗುತ್ತದೆ. ಆದರೆ ಕರ್ತೃಗಳ ನಂತರ ಶ್ರೀಮಠವುಖಾಲಿ ಉಳಿದಂತೆ ತೋರುತ್ತಿದ್ದು ಪರಂಪರೆಯ ಐದನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ನಿರಂಜನಸ್ವಾಮಿಗಳ ನಂತರದ ಇತಿಹಾಸ ಸಿಗುತ್ತದೆ ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಶಾಂತವೀರ ಸ್ವಾಮಿಗಳು ಸುಧೀರ್ಘಕಾಲ ಶ್ರೀಮಠವನ್ನು ಮುನ್ನಡೆಸಿದ್ದು 1987ರಲ್ಲಿ ಈಗಿನಶ್ರೀಗಳಿಗೆ ಪಟ್ಟಾಧಿಕಾರ ಮಾಡಿ ತಾವು ವಿಶ್ರಾಂತಿ ಜೀವನ ಕಳೆದರೆಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮೃತ್ಯುಂಜಯ ಸ್ವಾಮಿಗಳು 1987ಮೇ10ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದ್ದು ಶ್ರೀಮಠಕ್ಕೆ ನೂತನ ಕಟ್ಟಡ ನಿರ್ಮಿಸಿದ್ದಾರೆ.ಹಾಗೂ ಮಠದ ಸಮೀಪದ ಗವಿಯನ್ನು ಸಂರಕ್ಷಿಸˉÁಗಿದ್ದು ಇದೇ ಗವಿಯಲ್ಲಿ ಕರ್ತೃಗಳುಅನುಷ್ಟಾನ ಕೈಗೊಳ್ಳುತ್ತಿದ್ದರೆಂದು ಹೇಳˉÁಗುತ್ತದೆ. ಶ್ರೀಗಳು ಶ್ರೀಮಠದ ಜಮೀನನ್ನುಅಭಿವೃದ್ಧಿಪಡಿಸಿ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುವತ್ತ ಕಾರ್ಯಶೀಲರಾಗಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮೃತ್ಯುಂಜಯ ಸ್ವಾಮಿಗಳು
Date of Birth :
20-05-1969
Place :
ಕಂಚುಗˉï ಬಂಡೇಮಠ ತಾ|| ಮಾಗಡಿ
Pattadikara :
10-05-1987
Photo :

Programs

ಪ್ರತಿ ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ zಸ Àರಾದಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ

Photos

Full Address Kannada

ಶ್ರೀ ಮಕ್ಕಳದೇವರ ಮಠ ಕಣ್ಣೂರು, ಮಾರಸಂದ್ರ ಪೋಸ್ಟ್ - 561 101 ಮಾಗಡಿ ತಾ||, ರಾಮನಗರ ಜಿˉÉ್ಲ

Map

Near by Places

ಸೋಲೂರು - 18 ಕಿ.ಮೀ. ನೆಲಮಂಗಲ - 45 ಕಿ.ಮೀ. ಮಾಗಡಿ - 35 ಕಿ.ಮೀ. ರಾಮನಗರ - 70 ಕಿ.ಮೀ.

Statistic

126 Views
0 Rating
0 Favorite
0 Share
error: Content is protected !!