ಕರ್ತೃ – ಶ್ರೀ ಷ. ಬ್ರ. ಚನ್ನಬಸವರಾಜ ಶಿವಾಚಾರ್ಯ ಸ್ವಾಮಿಗಳು
ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಪಟ್ಟದ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಕೋಡಿಹಳ್ಳಿ ಗ್ರಾಮದ ವೀರಶೈವಧರ್ಮಿಯರಿಗೆ ಧಾರ್ಮಿಕ ಸಂಸ್ಕಾರ ನೀಡುವ ಗುರುಗಳ ಅವಶ್ಯಕತೆಯಿದೆ ಎಂದರಿತಗ್ರಾಮದ ವೀರಶೈವರು ಶ್ರೀ ಷ.ಬ್ರ ಚನ್ನಬಸವರಾಜ ಶಿವಾಚಾರ್ಯ ಮಹಾಸ್ವಾಮಿಗಳನ್ನುಕರೆತಂದು 1924ರಲ್ಲಿ ಶ್ರೀಮಠದ ಸ್ಥಾಪನೆಗೆ ಕಾರಣರಾದರು.ಶ್ರೀ ಷ.ಬ್ರ. ಚನ್ನಬಸವರಾಜ ಶಿವಾಚಾರ್ಯರು ಇಲ್ಲಿಗೆ ಆಗಮಿಸಿ ಶ್ರೀಮಠವನ್ನುಭಕ್ತರ ಸಹಕಾರದೊಂದಿಗೆ ಸ್ಥಾಪಿಸಿ ಭಕ್ತರಿಗೆ ಧಾರ್ಮಿಕ ಅರಿವನ್ನು ನೀಡಿದರು. ತಮ್ಮಆಚರಣೆಗಳ ಮೂಲಕ ಶ್ರೀಮಠವನ್ನು ಪ್ರಚಲಿತಕ್ಕೆ ತಂದ ಶ್ರೀಗಳು ವೀರಶೈವ ತತ್ತ್ವಆಚರಣೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿದರು. 1961 ರಲ್ಲಿ ಈಗಿನ ಶ್ರೀಗಳನ್ನು ಅಧಿಕಾರಕ್ಕೆತಂದ ಶ್ರೀಗಳು 1975ರ ಜೂನ್ 26ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಿಂದಿನಶ್ರೀಗಳಿರುವಾಗˉÉೀ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಗುರುಗಳ ಆಶೀರ್ವಾದ ಹಾಗೂಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳುಗುರುಗಳಂತೆಯೇ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಾ, ವೀರಶೈವ ಸಿದ್ದಾಂತದಬಗ್ಗೆ ಉಪದೇಶವನ್ನು ನೀಡುತ್ತಾ, ವಿಭೂತಿ, ರುದ್ರಾಕ್ಷಿ, ಲಿಂಗಾಂಗ ಸಾಮರಸ್ಯದ ಬಗ್ಗೆಭಕ್ತರಲ್ಲಿ ತಿಳಿವಳಿಕೆಯನ್ನು ನೀಡುತ್ತಿದ್ದಾರೆ.ಸುದೀರ್ಘ ಐದು ದಶಕಗಳ ಕಾಲ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳು ಶ್ರೀಮಠದ ಜಮೀನನ್ನು ಅಭಿವೃದ್ದಿ ಪಡಿಸಿಬೇಸಾಯಕ್ಕೆ ಯೋಗ್ಯಗೊಳಿಸಿ ಮಠದ ಧಾರ್ಮಿಕ ಚಟುವಟಿಕೆಗಳಿಗೆ ಆದಾಯದಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಜೇಷ್ಠ ಮಾಸದ ಬಹುಳ ತಿಥಿಗೆ ಲಿಂ. ಶ್ರೀ ಷ.ಬ್ರ. ಚನ್ನಬಸವರಾಜಶಿವಾಚಾರ್ಯ ಮಹಾಸ್ವಾಮಿಗಳ ಆರಾಧನಾ ಮಹೋತ್ಸವನ್ನು ಆಚರಿಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
20-08-1943
Place :
ಬಂಡಹಳ್ಳಿ ತಾ||, ಕೊಳ್ಳೇಗಾಲ
Pattadikara :
1961
Photo :
Programs
ಜೇಷ್ಠ ಬಹುಳ ತಿಥಿಗೆ ಲಿಂ. ಶ್ರೀ ಷ.ಬ್ರ. ಚನ್ನಬಸವರಾಜ ಶಿವಾಚಾರ್ಯ ಮಹಾಸ್ವಾಮಿಗಳ ಆರಾಧನೆ ಭಾದ್ರಪದ ಶುದ್ಧ ತಿಥಿಗೆ ಗೌರಿ ಹಬ್ಬ ಬಸವ ಜಯಂತಿ ಆಚರಣೆ
Photos
Full Address Kannada
ಶ್ರೀ ಪಟ್ಟದ ಮಠ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕೋಡಿಹಳ್ಳಿ - 562 119