ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ.ದೂರದಲ್ಲಿರುವ ಚಿಕ್ಕಕಲುಬಾಳು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಚಿಕ್ಕಕಲುಬಾಳು ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಚಿಕ್ಕಕಲುಬಾಳುಮಠದ ಸ್ಥಾಪಕರು ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಅನುಷ್ಠಾನಮೂರ್ತಿಗಳಾಗಿಶಿವಪೂಜಾನಿಷ್ಠಾರಾಗಿ ಹೆಸರು ಮಾಡಿದ್ದರು. ವೀರಶೈವ ಧರ್ಮದ ಗುರು-ಲಿಂಗ-ಜಂಗಮ,ಷಟ್ಸ್ಥಲ ಸಿದ್ದಾಂತ ಮತ್ತು ಪಂಚಾಚಾರದ ಬಗ್ಗೆ ಆಳವಾಗಿ ಅರಿವಿದ್ದ ಶ್ರೀಗಳು ಧೀರ್ಘಕಾಲಧರ್ಮಪ್ರಚಾರವನ್ನು ನಡೆಸಿ ಭಕ್ತರನ್ನು ಸಂಘಟಿಸಿ ಲಿಂಗೈಕ್ಯರಾದರು. ಆ ನಂತರ ಗ್ರಾಮಸ್ಥರೇಶ್ರೀಗಳ ಸಮಾದಿ ಗದ್ದುಗೆಯನ್ನು ನಿರ್ಮಿಸಿ ಪೂಜೆಗೆ ಒಳಪಡಿಸಿದರೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರ 10 ಜನ ಶ್ರೀಗಳು ಶ್ರೀಮಠವನ್ನು ಮುನ್ನಡೆಸಿದ್ದಾರೆಂದುಹೇಳˉÁಗುತ್ತಿದ್ದು ಗುರುಗಳ ಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃಗುರುಗಳ ನಂತರದ ಪರಂಪರೆಯಲ್ಲಿಕಂಡುಬರುವ ಪ್ರಮುಖ ಶ್ರೀಗಳೆಂದರೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಹಾಗೂಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು. ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು ಹೆಚ್ಚು ಕ್ರಿಯಾಶೀಲರಾಗಿ ತಮ್ಮ ಆಚರಣೆಗಳ ಮೂಲಕ ಅಪಾರಭಕ್ತ ಬಳಗವನ್ನು ಸಂಪಾದಿಸಿಕೊಂಡು ಮಠವನ್ನು ಸಮರ್ಥವಾಗಿ ಮುನ್ನಡೆಸಿಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಮಠದ ಪಟ್ಟಾಧಿಕಾರಿಯಾಗಿರುವ ಶ್ರೀ. ಷ.ಬ್ರ. ಪಟ್ಟದ ಶಿವಾನಂದಶಿವಾಚಾರ್ಯ ಸ್ವಾಮಿಗಳು 2003 ಸೆಪ್ಟಂಬರ್ 23ರಂದು ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿದ್ದು ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಮಠದಲ್ಲಿ 10ಗದ್ದುಗೆಗಳನ್ನು ಕಾಣಬಹುದಾಗಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ. ಶ್ರೀಮಠದಲ್ಲಿ ಪ್ರತಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಮಹೋತ್ಸವ ನಡೆಯುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಪಟ್ಟದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
28-08-1986
Place :
ಚಿಕ್ಕಕಲುಬಾಳು, ಕನಕಪುರ ತಾ||
Pattadikara :
23-09-2003
Photo :
Programs
ಪ್ರತಿ ಅಮವಾಸೆ ಮತ್ತು ಹುಣ್ಣಿಮೆಗೆ ರುದ್ರಾಭಿಷೇಕ £ರ Àಕ ಚತುರ್ದಶಿಯಂದು ದೀಪಾರಾಧನೆ z£sÀ Àುರ್ಮಾಸದಲ್ಲಿ ಇಷ್ಟಲಿಂಗ ಪೂಜೆ ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಚಿಕ್ಕಕಲುಬಾಳು, ಕೋಡ್ಲಬಾಳು ಪೋಸ್ಟ್ - 562 117 ಕನಕಪುರ ತಾ||, ರಾಮನಗರ ಜಿˉÉ್ಲ