ಮಂಡ್ಯ ಜಿˉÁ್ಲ ಕೇಂದ್ರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಗುತ್ತಲುಗ್ರಾಮದಲ್ಲಿ ಶ್ರೀ ತೋಟದಯ್ಯ ಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ ಶ್ರೀ ಜಂಗಮಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಗ್ರಾಮದಲ್ಲಿ ಧಾರ್ಮಿಕವಾತಾವರಣವು ಸೃಷ್ಟಿಯಾಗಲು ಕಾರಣವಾಗಿದೆ. ಗುತ್ತಲು ಗ್ರಾಮದ ಅರ್ಕೇಶ್ವರದೇವಾಲಯವು ಪ್ರಖ್ಯಾತಗೊಂಡಿದ್ದು ಇದರಿಂದಾಗಿ ಈ ಗ್ರಾಮಕ್ಕೆ ಅರ್ಕೇಶ್ವರ ನಗರವೆಂದೂಸಹ ಕರೆಯುತ್ತಾರೆ. ಶ್ರೀಮಠದ ಕರ್ತೃಗುರುಗಳಾದ ಶ್ರೀ ತೋಟದಯ್ಯ ಶಿವಾಚಾರ್ಯಸ್ವಾಮಿಗಳು ಸಂಚಾರದಲ್ಲಿದ್ದಾಗ ಈ ಗ್ರಾಮಕ್ಕೆ ಬಂದು ನೆˉÉಗೊಂಡು ಶ್ರೀಮಠವನ್ನು ಸ್ಥಾಪನೆಮಾಡಿದ್ದಾರೆ. ಶ್ರೀಗಳು ಧರ್ಮನಿಷ್ಟರಾಗಿದ್ದು ತಮ್ಮ ಧಾರ್ಮಿಕ ಕಾರ್ಯಕ್ರಮಗಳ ಮೂಲಕಶ್ರೀಮಠಕ್ಕೆ ¨s Àಕ ್ತರನ್ನು ಸೆಳೆದು ¨s Àಕ ್ತರ ಸಹಕಾರದೊಂದಿಗೆ ಶ್ರೀಮಠವನ್ನುಅಭಿವೃದ್ದಿಗೊಳಿಸಿದ್ದಾರೆ.ಶ್ರೀ ತೋಟದಯ್ಯ ಸ್ವಾಮಿಗಳ ನಂತರ ಶ್ರೀ ಚಂದ್ರಶೇಖರ ಶಿವಾಚಾರ್ಯರು,ಹಾಗೂ ಇವರ ನಂತರ ಬಂದ ಶ್ರೀ ತೋಂಟದ ಶಿವಾಚಾರ್ಯರ ಕಾಲದಲ್ಲಿ ಶ್ರೀಮಠವುಹೆಚ್ಚು ಅಭಿವೃದ್ದಿ ಕಂಡಿದೆ. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿಪ್ರಸಿದ್ದಿ ಪಡೆದಿದ್ದು ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ. ಶ್ರೀಗಳು ನಿಧನರಾದ ನಂತರ ಸುಮಾರುಎರಡು ದಶಕಗಳ ಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 1996ರನವೆಂಬರ್ 27ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ದಶಕಗಳ ಕಾಲ ಖಾಲಿಉಳಿದಿದ್ದ ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ವಿದ್ಯಾ ಸಂಪನ್ನರು, ಧಾರ್ಮಿಕವಿಚಾರಗಳಲ್ಲಿ ಆಳವಾದ ಜ್ಞಾನವುಳ್ಳವರು ಆಗಿದ್ದು ತಮ್ಮ ಅಧ್ಯಯನಶೀಲತೆಯಿಂದಶ್ರೀಮಠದ ಭಕ್ತರಿಗೆ ಧರ್ಮದ ಬಗ್ಗೆ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಹೇಳುತ್ತಾಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
05-02-1969
Place :
ಮದ್ದೂರು, ಯಳಂದೂರು ತಾ||
Pattadikara :
27-11-1996
Photo :
Programs
ರೇಣುಕ ಜಯಂತಿ ಆಚರಣೆ ಬಸವ ಜಯಂತಿ ಆಚರಣೆ ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ಜಂಗಮ ಮಠ
ಅರ್ಕೇಶ್ವರ ನಗರ, ಗುತ್ತಲು - 571 403
ಮಂಡ್ಯ ತಾ|| & ಜಿಲ್ಲೆ