Shree Channabasava Odeyar Matha – Purigali

Shree Channabasava Odeyar Matha – Purigali Claimed

ಶ್ರೀ ಚನ್ನಬಸವ ಒಡೆಯರ್ ಮಠ - ಪೂರಿಗಾಲಿ

Average Reviews

Description

ಶ್ರೀ ಚನ್ನಬಸವ ಒಡೆಯರ್ ಮಠ – ಪೂರಿಗಾಲಿ

ಕರ್ತೃ – ಶ್ರೀ ಷ.ಬ್ರ. ಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮಿಗಳು

ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಚನ್ನಬಸವ ಒಡೆಯರ್ ಮಠವು ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಸುಮಾರು 200ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಚನ್ನಬಸವ ಒಡೆಯರ್ ಮಠದಲ್ಲಿ ಈವರೆಗೂ ಐದುಜನ ಶ್ರೀಗಳನ್ನು ಕಾಣಬಹುದು.ಶ್ರೀ ಗೋಸಲ ಚನ್ನಬಸವೇಶ್ವರರ ಕ್ಷೇತ್ರದಿಂದ ಸಂಚಾರ ಮಾಡುತ್ತಾ ಪೂರಿಗಾಲಿಗ್ರಾಮಕ್ಕೆ ಬಂದ ಶ್ರೀ ಚನ್ನಬಸವ ಒಡೆಯರು ಇಲ್ಲಿ ಕೆಲಕಾಲ ನೆˉÉನಿಂತು ತಪೋನುಷ್ಠಾನಕೈಗೊಂಡಿದ್ದರು. ಅಪಾರ ಭಕ್ತ ಬಳಗವನ್ನು ಸಂಪಾದಿಸಿಕೊಂಡಿದ್ದ ಶ್ರೀಗಳು ಆಗಾಗಪೂರಿಗಾಲಿಗೆ ಆಗಮಿಸಿ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದ್ದರು.ಇವರ ಧಾರ್ಮಿಕ ಆಚರಣೆಗಳಿಗಾಗಿ ಗ್ರಾಮದಲ್ಲಿ ಶ್ರೀಮಠವು ತೆˉÉ ಎತ್ತಿತ್ತು.ಈ ರೀತಿ ಪ್ರಾರಂಭಗೊಂಡ ಶ್ರೀಮಠವನ್ನು ಉತ್ತುಂಗಕ್ಕೆ ಕೊಂಡೊಯ್ದವರುಶ್ರೀಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದ ಶ್ರೀಗಳ ತರುವಾಯ ಶ್ರೀ ಷ.ಬ್ರ.ಎರಡನೆಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ಸ್ವೀಕರಿಸಿ ಮಠವನ್ನುಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ಮುನ್ನಡೆಸಿದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಜಯದೇವ ಶಿವಾಚಾರ್ಯ ಸ್ವಾಮಿಗಳು1961ರ ಆಗಸ್ಟ್ ಮೂವತ್ತರಂದು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಗುರುಗಳು ಕಾಯಕಯೋಗಿಗಳಾಗಿ ಮಠದಆಸ್ತಿಯನ್ನು ಅಭಿವೃದ್ಧಿಪಡಿಸಿ ಮಠಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದ್ದಾರೆ. ಹಿಂದಿನಗುರುಗಳು ನೂತನವಾಗಿ ನಿರ್ಮಿಸಿದ್ದ ಮಠದ ಕಟ್ಟಡವನ್ನು ಶ್ರೀ ಜಯದೇವ ಸ್ವಾಮಿಗಳುವಿಸ್ತರಿಸಿ ನವೀಕರಣಗೊಳಿಸಿದ್ದು ಮಠದ ಆವರಣದಲ್ಲಿರುವ ಮೂರು ಗದ್ದುಗೆಗಳನ್ನುನವೀಕರಣಗೊಳಿಸಿದ್ದಾರೆ. ಶ್ರೀಗಳು ಇತ್ತೀಚೆಗೆ 2002ರಲ್ಲಿ ಶ್ರೀ ಷ.ಬ್ರ. ಶಿವಾನಂದಶಿವಾಚಾರ್ಯ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ಪಟ್ಟದ ಅನುಗ್ರಹ ನೀಡಿದ್ದಾರೆ.ಪ್ರಸ್ತುತ ಉಭಯ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವಲ್ಲಿಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಜಯದೇವ ಶಿವಾಚಾರ್ಯ ಸ್ವಾಮಿಗಳು
Date of Birth :
05-04-1943
Place :
ಮಡೇನಹಳ್ಳಿ, ಮದ್ದೂರು ತಾ||
Pattadikara :
30-08-1961
Photo :
Swamiji Name :
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
21-05-1983
Place :
ಮಡೇನಹಳ್ಳಿ, ಮದ್ದೂರು ತಾ||
Pattadikara :
2002
Photo :

Programs

ಶ್ರೀ ರೇಣುಕಾ ಜಯಂತಿ ಆಚರಣೆ
ಶ್ರೀ ಮಠದಲ್ಲಿ ಗೌರಿ ಗಣೇಶ ಹಬ್ಬ ಆಚರಣೆ,
ಲಲಿತ ಸಹಸ್ರನಾಮ ಪಾರಾಯಣ ಹಾಗೂ ವಿವಿಧ ಕಾರ್ಯಕ್ರಮಗಳು

Full Address Kannada

ಶ್ರೀ ಚನ್ನಬಸವ ಒಡೆಯರ್ ಮಠ
ಪೂರಿಗಾಲಿ - 571 463
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಮಳವಳ್ಳಿ - 17 ಕಿ.ಮೀ.
ಮದ್ದೂರು - 37 ಕಿ.ಮೀ.
ಮಂಡ್ಯ - 44 ಕಿ.ಮೀ.
ಮೈಸೂರು - 46 ಕಿ.ಮೀ.

Statistic

471 Views
0 Rating
0 Favorite
0 Share
error: Content is protected !!