ಶ್ರೀ ಷ.ಬ್ರ. ಇಮ್ಮಡಿ ಬಸವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು
ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದ ಮಧ್ಯಭಾಗದಲ್ಲಿಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಪಕ್ಕದಲ್ಲಿಯೇ ಸ್ಥಾಪಿತಗೊಂಡಿರುವ ಶ್ರೀದೊಡ್ಡಮಠವು. ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಬಹು ಹಿಂದೆ ಶ್ರೀ ಸರ್ಪಭೂಷಣ ಶಿವಯೋಗಿಗಳಮಠದ ಆಡಳಿತದ ಜೊತೆಯಲ್ಲಿಯೇ ನಡೆದುಕೊಂಡು ಬಂದಿದ್ದ ಶ್ರೀಮಠದ ಆಡಳಿತಕಾರಣಾಂತರಗಳಿಂದ ಪ್ರತ್ಯೇಕಗೊಂಡಿದ್ದು ಕಾಲಮಾನದ ಬಗ್ಗೆ ಮಾಹಿತಿಯಿಲ್ಲ.ಶ್ರೀ ದೊಡ್ಡಮಠದ ಪರಂಪರೆಯಲ್ಲಿ ಈವರೆಗೂ ನಾಲ್ಕು ಜನ ಶ್ರೀಗಳು ಅಧಿಕಾರನಡೆಸಿರುವುದು ಕಂಡುಬರುತ್ತಿದ್ದು ಶ್ರೀಮಠದಲ್ಲಿ ಎರಡು ಗದ್ದುಗೆಗಳನ್ನು ಕಾಣಬಹುದು.ಟಿ.ನರಸೀಪುರ ತಾಲ್ಲೂಕಿನ ಸೋಸˉÉ ತೋಪಿನ ಮಠದ ಶ್ರೀ ಬಸವರಾಜೇಂದ್ರಶಿವಾಚಾರ್ಯ ಸ್ವಾಮಿಗಳು ಪ್ರತ್ಯೇಕಗೊಂಡಿದ್ದ ಮಠದ ಹಳೆಯ ಕಟ್ಟಡವನ್ನು ತೆಗೆಸಿ1950ರಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿದರು. ನೂತನವಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ ಶ್ರೀಗಳು1975ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮಡಿ ಬಸವರಾಜೇಂದ್ರ ಶಿವಾಚಾರ್ಯಸ್ವಾಮಿಗಳನ್ನು ಇಲ್ಲಿನ ಭಕ್ತರು, ಸಮಾಜದವರು ಕರೆತಂದಿದ್ದಾರೆ. 1975ರ ಜುˉÉೈ 15ರಂದುಮದ್ದೂರು ತಾಲ್ಲೂಕು ಮಡೇನಹಳ್ಳಿಯಲ್ಲಿ ಜನಿಸಿದ ಶ್ರೀಗಳು ಶಿವಗುಡ್ಡದಲ್ಲಿ ಪ್ರೌಡ ಹಾಗೂಪದವಿಪೂರ್ವ ಶಿಕ್ಷಣ ಪಡೆದು ನಂತರ ಕೆ.ಎಂ. ದೊಡ್ಡಿಯ ಭಾರತಿ ಕಾˉÉೀಜಿನಲ್ಲಿ ಬಿ.ಎ.ಪದವಿ ಪೂರೈಸಿದರು. ಆನಂತರ ಮುಡುಕುತೊರೆಯ ತೋಪಿನ ಮಠದ ಶ್ರೀ ಮಹಾಲಿಂಗಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸಂಸ್ಕøತ ವೇದ, ಆಗಮಗಳನ್ನು ಕಲಿತಶ್ರೀಗಳು 1996ರಲ್ಲಿ ಶ್ರೀ ದೊಡ್ಡಮಠದ ಪಟ್ಟಾಧಿಕಾರ ಸ್ವೀಕರಿಸಿದರು.ಬಹುಕಾಲ ಖಾಲಿ ಉಳಿದಿದ್ದ ಶ್ರೀಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳುಶ್ರೀಮಠದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಭಕ್ತರನ್ನುಸಂಘಟಿಸುತ್ತಿದ್ದಾರೆ ಹಾಗೂ ಮಠದ ಜಮೀನನ್ನು ಅಭಿವೃದ್ಧಿಪಡಿಸಿ ಆದಾಯಮೂಲವನ್ನಾಗಿ ಪರಿವರ್ತಿಸಿದ್ದಾರೆ. ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಇಮ್ಮಡಿ ಬಸವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
15-07-1975
Place :
ಮಡೇನಹಳ್ಳಿ, ಮದ್ದೂರು ತಾ||
Pattadikara :
1996
Photo :
Programs
ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ದಾರುಕಾಚಾರ್ಯ ಜಯಂತಿ ಆಚರಣೆ ಗೌರಿ, ಗಣೇಶ ಹಬ್ಬ ಆಚರಣೆ
Photos
Full Address Kannada
ಶ್ರೀ ದೊಡ್ಡಮಠ
ಕುಂದೂರು - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ