ಧನಗೂರು ಗ್ರಾಮದ ಹೊರಭಾಗದಲ್ಲಿ ಶ್ರೀ ರಂಭಾಪುರಿ ಪೀಠದಶಾಖಾಮಠವಾದ ಶ್ರೀ ವೀರಸಿಂಹಾಸನ ಸಂಸ್ಥಾನ ಮಠವು ಸ್ಥಾಪನೆಗೊಂಡಿದ್ದು ಈ ಗ್ರಾಮದಹೆಗ್ಗುರುತಾಗಿದೆ. ಜಗದ್ಗುರು ಶ್ರೀ ರೇವಣಸಿದ್ದರ ಪುತ್ರರಾದ ಶ್ರೀ ರುದ್ರಮುನಿ ಶಿವಾಚಾರ್ಯರಕರಕಮಲ ಸಂಜಾತರಾದ ಶ್ರೀ ಷ.ಬ್ರ. ಉದ್ದಾನ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವಈ ಪುರಾತನ ಮಠವು ಈ ಭಾಗದ ಸಂಸ್ಕøತಿಗೆ ತನ್ನದೇ ಕೊಡುಗೆ ನೀಡಿದೆ.ಶ್ರೀ ಉದ್ದಾನ ಶಿವಯೋಗಿಗಳಿಂದ ಬೆಳಗಿದ ಶ್ರೀ ಮಠವು ಮುಂದೆ 16ತˉÉಮಾರುಗಳನ್ನು ಕಂಡಿದೆ. ಪರಂಪರೆಯಲ್ಲಿ ಬರುವ 5ನೇ ಶ್ರೀಗಳಾದ ಶ್ರೀ ಷ.ಬ್ರ.ಷಡಕ್ಷರದೇವ ಶಿವಾಚಾರ್ಯ ಸ್ವಾಮಿಗಳು ಮಹಾಕವಿಗಳಾಗಿದ್ದರು. ಶ್ರೀಗಳು ಕನ್ನಡ ಸಾಹಿತ್ಯˉÉೂೀಕಕ್ಕೆ “ರಾಜಶೇಖರ ವಿˉÁಸ”, “ಶಿವಧೀಕ್ಷಾರತ್ನಾವಳಿ”, “ಬಸವರಾಜ ವಿಜಯ”,”ಭಕ್ತಾದಿತ್ಯ ರತ್ನಾವಳಿ”, “ಸಂಸ್ಕøತ ಕವಿಕರ್ಣ ರಸಾಯನಂ” ಎಂಬ ಅನೇಕ ಮೌಲಿಕಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಹೀಗೆ ಮಹಾಮಹಿಮ ಶ್ರೀಗಳನ್ನು ಕಂಡ ಶ್ರೀ ಮಠದ ಅಧಿಕಾರವನ್ನುವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮುಡಿ ಷಡಕ್ಷರ ದೇಶಿಕೇಂದ್ರಶಿವಾಚಾರ್ಯ ಸ್ವಾಮಿಗಳು ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಶ್ರೀಮಠದ ಇತಿಹಾಸವನ್ನು ಬರೆಸಿದರು. ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀ ಮಠವನ್ನು ಸಮರ್ಥವಾಗಿಮುನ್ನಡೆಸಿದ್ದರು.ಪ್ರಸ್ತುತ ಶ್ರೀಗಳಾದ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳು 1998ರ ಆಗಸ್ಟ್ 28ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವಿಕರಿಸಿದ್ದು ಶ್ರೀ ಮಠವನ್ನುಸರ್ವ ರೀತಿಯಲ್ಲೂ ಉನ್ನತೀಕರಿಸಲು ಶ್ರಮಿಸುತ್ತಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿದ್ದುಅಧ್ಯಯನ ಪ್ರಿಯರಾಗಿದ್ದಾರೆ. ಶ್ರೀಗಳು ಶ್ರೀಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿ ಆದಾಯಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರಾವಣ, ಕಾರ್ತೀಕ, ಶಿವರಾತ್ರಿ ಹಾಗೂ ಧನುರ್ಮಾಸಗಳಲ್ಲಿ ವಿಶೇಷಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
10-07-1978
Place :
ಮಾದನಹಳ್ಳಿ, ನಂಜನಗೂಡು ತಾ||
Pattadikara :
28-08-1998
Photo :
Programs
ಶಿವರಾತ್ರಿಯಂದು ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ದೀಪೋತ್ಸವ z£sÀ Àುರ್ಮಾಸದಲ್ಲಿ ವಿಶೇಷ ಪೂಜೆ
ಪಾಲ್ಗುಣ ಬಹುಳ ತ್ರಯೋದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾˉÉ
Photos
Full Address Kannada
ಶ್ರೀ ವೀರಸಿಂಹಾಸನ ಸಂಸ್ಥಾನ ಮಠ
ಧನಗೂರು - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ