ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕಿನ ಅಂಗ್ರಾಪುರ ಗ್ರಾಮವು ತಾಲ್ಲೂಕುಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಕಾಲದಲ್ಲಿಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾ ಮಠವಾಗಿ ಪಂಚಪೀಠಗಳ ಪರಂಪರೆಯನ್ನುರೂಡಿಸಿಕೊಂಡಿರುವ ಶ್ರೀ ಪಟ್ಟದ ಮಠದ ಕರ್ತೃ ಗುರುಗಳೆಂದು ಪೂಜ್ಯ ಶ್ರೀ ಮಹಾಂತಸ್ವಾಮಿಗಳನ್ನು ಹೆಸರಿಸˉÁಗಿದೆ.ಪೂಜ್ಯ ಶ್ರೀ ಮಹಾಂತ ಸ್ವಾಮಿಗಳ ಕುರಿತಾಗಲೀ ಅವರ ಕಾಲಮಾನದಕುರಿತಾಗಲೀ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಶ್ರೀ ಮಠದಲ್ಲಿ ಒಂದು ಗದ್ದುಗೆ ಹಾಗೂ ಮಠದಜಮೀನಿನಲ್ಲಿ ಎರಡು ಗದ್ದುಗೆಗಳು ಕಾಣಸಿಗುತ್ತಿದ್ದು ಇವುಗಳಲ್ಲಿ ಒಂದು ಕರ್ತೃ ಗುರುಗಳದ್ದುಎನ್ನˉÁಗಿದೆ. ಇವರ ನಂತರದ ಶ್ರೀಗಳು ಶ್ರೀ ಮಹಾಂತ ಸ್ವಾಮಿಗಳೆಂದು ಹೇಳˉÁಗಿದ್ದುಸ್ಪಷ್ಟತೆಯಿಲ್ಲ.ಶ್ರೀ ಮಠದ ಪರಂಪರೆಯಲ್ಲಿ ಕಾಣಸಿಗುವ 3ನೇ ಶ್ರೀಗಳಾದ ಶ್ರೀ ಷ.ಬ್ರ.ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳ ನಂತರದ ದಾಖˉÉಗಳು ಮಾತ್ರ ಲಭ್ಯ ಶ್ರೀಗಳುಧರ್ಮನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಲ್ಲಿ ಧರ್ಮದ ಬಗೆಗಿನಅರಿವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಸದಾ ಆಧ್ಯಾತ್ಮಿಕ ಜೀವಿಗಳಾಗಿದ್ದ ಶ್ರೀಗಳು1993ರ ನವೆಂಬರ್ 19ರಂದು ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ದೇಶಿಕೇಂದ್ರ ಸ್ವಾಮಿಗಳು ಹಿಂದಿನಶ್ರೀಗಳ ಐಕ್ಯಾ ನಂತರ ಅವರ ಅಪೇಕ್ಷೆಯಂತೆ 1993ರ ಡಿಸಂಬರ್ 03 ರಂದು ಶ್ರೀ ಪಟ್ಟದಮಠದ ಅಧಿಕಾರವನ್ನು ಸ್ವೀಕರಿಸಿದರು. ಆಗ ಶ್ರೀಗಳ ವಯಸ್ಸು ಕೇವಲ 10 ವರ್ಷ. ಆನಂತರವಿದ್ಯಾಭ್ಯಾಸ ಪೂರ್ಣಗೊಳಿಸಿದ ಶ್ರೀಗಳು ಶ್ರೀ ಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಗೊಳಿಸುವ ಸಂಕಲ್ಪ ತೊಟ್ಟು ಕಾರ್ಯೋನ್ಮುಖರಾದರು. ಶ್ರೀ ಮಠಕ್ಕೆ ಭಕ್ತರಸಹಕಾರದೊಂದಿಗೆ ನೂತನ ಕಟ್ಟಡವನ್ನು ನಿರ್ಮಿಸಿದರು ಹಾಗೂ ಶ್ರೀ ಮಠದಕಾರ್ಯಕ್ರಮಗಳನ್ನು ಚುರುಕುಗೊಳಿಸಿ ಸದಾ ಭಕ್ತರ ಪಾˉÉ್ಗೂಳ್ಳುವಿಕೆ ಇರುವಂತೆ ಭಕ್ತರನ್ನುಸೆಳೆದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಬಸವಲಿಂಗ ದೇಶಿಕೇಂದ್ರ ಸ್ವಾಮಿಗಳು
Date of Birth :
03-05-1983
Place :
ಅಂಗ್ರಾಪುರ, ಮಳವಳ್ಳಿ ತಾ||
Pattadikara :
03-12-1993
Photo :
Programs
ಶಿವರಾತ್ರಿಗೆ ಜಾಗರಣೆ ಯುಗಾದಿಗೆ ವನ್ನೇರು ಹಬ್ಬ ಆಚರಣೆ
ದೀಪಾವಳಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ (ಲಿಂ. ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು) ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ
Photos
Full Address Kannada
ಶ್ರೀ ಪಟ್ಟದ ಮಠ ಅಂಗ್ರಾಪುರ,
ಸುಜ್ಜಲೂರು ಪೋಸ್ಟ್ - 571 424
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ