ಕರ್ತೃ – ಶ್ರೀ ಷ.ಬ್ರ. ಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಮಂಡ್ಯ ಜಿˉÉ್ಲ ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿರುವ ಶ್ರೀ ಕದಂಬಜಂಗಮ ಮಠವು ಬಹು ಪುರಾತನ ಮಠ. ವೈದ್ಯನಾಥ ಎಂದರೆ ಶಿವ, ಶಿವನು ಭವರೋಗವೈದ್ಯನಾದ್ದರಿಂದ ಅವನನ್ನು ವೈದ್ಯನಾಥ ಎಂತಲೂ ಕರೆಯುತ್ತಾರೆ. ಅಂತಹ ಶ್ರೀವೈದ್ಯನಾಥೇಶ್ವರ ದೇವಾಲಯವು ಅಸ್ತಿತ್ತ್ವದಲ್ಲಿರುವ ಕಾರಣಕ್ಕೆ ಈ ಊರಿಗೆ ವೈದ್ಯನಾಥಪುರಎಂದು ಹೆಸರು ಬಂದಿದೆ.ವೈದ್ಯನಾಥಪುರದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕದಂಬ ಜಂಗಮ ಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಶಿಷ್ಯವರ್ಗ (ಭಕ್ತವರ್ಗ)ದ ಪರಂಪರೆಯಲ್ಲಿ ಸಾಗಿಬಂದಿದೆ. ಪುರಾತನ ಕಾಲದ ಶ್ರೀ ಮಠದ ಸ್ಥಾಪಕರು ಶ್ರೀ ಷ.ಬ್ರ. ಶಾಂತೇಶ್ವರ ಶಿವಾಚಾರ್ಯಮಹಾಸ್ವಾಮಿಗಳು. ಶ್ರೀಗಳು ಉತ್ತರದ ಕಡೆಯಿಂದ ಸಂಚಾರ ಬಂದು ಕದಂಬ ನದಿಯದಡದಲ್ಲಿ ದೀರ್ಘ ತಪೋನುಷ್ಠಾನ ಕೈಗೊಂಡು ಇಲ್ಲಿಯೇ ಶ್ರೀ ಕದಂಬ ಜಂಗಮ ಮಠವನ್ನುಸ್ಥಾಪಿಸಿದರೆಂದು ಹೇಳˉÁಗುತ್ತದೆ.ಶ್ರೀ ಮಠದ ಕರ್ತೃಗುರುಗಳು ಶ್ರೀ ಶಾಂತೇಶ ್ವರ ಸ್ವಾಮಿಗಳೆಂದುಗುರುತಿಸˉÁದರೂ ಅವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಇವರ ಕರ್ತೃ ಗದ್ದುಗೆಯುಮಠದ ಕೇಂದ್ರಬಿಂದುವಾಗಿದ್ದು ಮಠದಲ್ಲಿ ಮತ್ತೆರಡು ಗದ್ದುಗೆಗಳು ಕಾಣಸಿಗುತ್ತವೆ. ಕರ್ತೃಗುರುಗಳು ವೈದ್ಯನಾಥಪುರದ ಜೊತೆಗೆ ಮಂಡ್ಯ ತಾ|| ಕೆರೆಗೋಡು ಹೋಬಳಿ ತುಂಕೆರೆಗ್ರಾಮದಲ್ಲಿ ಅನುಷ್ಠಾನ ಕೈಗೊಂಡಿದ್ದು ಧಾರ್ಮಿಕ ಆಚರಣೆಗಳು ನಿರಂತರವಾಗಿನಡೆದುಕೊಂಡು ಬರುತ್ತಿವೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂಇಲ್ಲಿಯವರೆಗೂ 8 ಜನ ಶ್ರೀಗಳು ಪರಂಪರೆಯಲ್ಲಿ ಬಂದಿದ್ದಾರೆಂದು ಹೇಳˉÁಗಿದೆ. ಆದರೆಅವರಲ್ಲಿ ಶ್ರೀ ಶಾಂತೇಶ್ವರ ಶಿವಾಚಾರ್ಯರು, ಶ್ರೀ ಸಿದ್ದಲಿಂಗ ದೇವರು, ಶ್ರೀ ಮರಿದೇವರುಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳಮಾಹಿತಿಗಳು ಸಿಗುತ್ತಿದ್ದು ಉಳಿದ ಮೂವರು ಶ್ರೀಗಳ ಬಗ್ಗೆ ತಿಳಿದು ಬರುವುದಿಲ್ಲ.ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಪೀಠಾಧಿಪತಿಗಳಾಗಿ ಇಲ್ಲಿಯ ಜನರ ಕಷ್ಟ-ನಷ್ಟಗಳನ್ನು ಪರಿಹರಿಸಿ ಜನತೆಯಮನದಲ್ಲಿ ನೆˉÉಗೊಂಡಿದ್ದಾರೆ. ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತರಲ್ಲಿಧಾರ್ಮಿಕ ಅರಿವನ್ನು ಮೂಡಿಸಲು ಶ್ರಮಿಸಿದ ಶ್ರೀಗಳು 1991ರ ಡಿಸಂಬರ್ 20ರಂದುಲಿಂಗೈಕ್ಯರಾದರು. ಶ್ರೀಗಳ ಐಕ್ಯಾ ನಂತರ ಸುಮಾರು 6 ವರ್ಷಗಳ ಕಾಲ ಖಾಲಿ ಉಳಿದ ಶ್ರೀಮಠಕ್ಕೆ ಪೀಠಾಧಿಪತಿಗಳಾಗಿ ಬಂದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರೇಣುಕಶಿವಾಚಾರ್ಯ ಸ್ವಾಮಿಗಳು.ಸುಮಾರು 6 ವರ್ಷಗಳ ಖಾಲಿ ಉಳಿದ ಶ್ರೀ ಮಠದ ಭಕ್ತರ ಒತ್ತಾಸೆಯಂತೆಮುಡುಕುತೊರೆ ಮಠದ ಶ್ರೀ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳು ಚಿಕ್ಕಬಳ್ಳಾಪುರತಾಲ್ಲೂಕು ನಂದಿ ಗ್ರಾಮದ ತಮ್ಮ ಶಿಷ್ಯನನ್ನು ಕರೆತಂದು ತಮ್ಮ ಮಾರ್ಗ ದರ್ಶನದಲ್ಲಿಯೇಊರ ಭಕ್ತರ ನೆರವಿನಿಂದ 1997ರ ಸೆಪ್ಟಂಬರ್ 05ರಂದು ಪಟ್ಟಾಧಿಕಾರದ ಅನುಗ್ರಹ ನೀಡಿಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳೆಂದು ಅಭಿದಾನ ನೀಡಿದರು.ಶ್ರೀ ರೇಣುಕ ಶಿವಾಚಾರ್ಯರು ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸವನ್ನುಚಿಕ್ಕಬಳ್ಳಾಪುರದಲ್ಲಿ ಪೂರೈಸಿದ್ದು ನಂತರ ಸಂಸ್ಕøತ, ವೇದ ಹಾಗೂ ಸಾಹಿತ್ಯವನ್ನುಬೆಂಗಳೂರಿನ ಮಹಾಂತಿನ ಮಠ ಮತ್ತು ಯಡೆಯೂರು ಮಠಗಳಲ್ಲಿ ಅಭ್ಯಸಿಸಿದರು.ಮುಂದೆ ಮುಡುಕುತೊರೆಯಲ್ಲಿ ತಮ್ಮ ಗುರುಗಳಾದ ಶ್ರೀ ಮಹಾಲಿಂಗ ಶಿವಾಚಾರ್ಯರಮಾರ್ಗದರ್ಶನದಲ್ಲಿ ಆಧ್ಯಾತ್ಮ ಶಿಕ್ಷಣ ಹಾಗೂ ಜ್ಯೋತಿಷ್ಯಗಳಲ್ಲಿ ಪರಿಣಿತಿ ಪಡೆದರು.1997ರಲ್ಲಿ ಶ್ರೀ ಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳು ಹಂತಹಂತವಾಗಿ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 2001-2002ರಲ್ಲಿ “ಶ್ರೀ ಶಾಂತೇಶ್ವರವಿದ್ಯಾಸಂಸ್ಥೆ”ಯನ್ನು ಸ್ಥಾಪಿಸಿದ ಶ್ರೀಗಳು ಅದರಡಿಯಲ್ಲಿ ಪ್ರಾಥಮಿಕ ಶಾˉÉ ಹಾಗೂಜ್ಯೋತಿಷ್ಯ ವೇದ ಪಾಠಶಾˉÉಯನ್ನು ಪ್ರಾರಂಭಿಸಿದ್ದಾರೆ. 2006ರಲ್ಲಿ ಲಿಂ. ಶ್ರೀ ಶಿವಾನಂದಶಿವಾಚಾರ್ಯರ ಗದ್ದುಗೆ ಪ್ರತಿಷ್ಠಾಪನೆ ಜೊತೆಗೆ ಶ್ರೀ ಶಾಂತೇಶ್ವರ ಮತ್ತು ಶ್ರೀರೇಣುಕಾಚಾರ್ಯ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ್ದಾರೆ. ಹೀಗೆ ಹಂತ ಹಂತವಾಗಿ ಶ್ರೀಮಠದ ಅಭಿವೃದ್ಧಿಯಲ್ಲಿ ನಿರತರಾಗಿರುವ ಶ್ರೀಗಳು ಪ್ರತಿ ಹುಣ್ಣಿಮೆಯಲ್ಲಿ ಪ್ರವಚನನಡೆಸಿಕೊಡುತ್ತಾರೆ.ಶ್ರೀ ಮಠದ ಪಕ್ಕದಲ್ಲಿ 2 ಹಳೇ ಕಟ್ಟಡಗಳಿದ್ದು ಅದರಲ್ಲಿ ಒಂದುಶಿಥಿˉÁವಸ್ಥೆಯಲ್ಲಿದೆ. ಆ ಕಟ್ಟಡದಲ್ಲಿ 3 ಜನ ಶ್ರೀಗಳ ಗದ್ದುಗೆಗಳಿವೆ ಎಂದು ಹೇಳˉÁಗುತ್ತದೆ.ಶ್ರೀ ಮಠದಲ್ಲಿ ಮಾರ್ಗಶಿರ ಸಪ್ತಮಿಗೆ ಲಿಂ|| ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯರಆರಾಧನೆ & ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
05-04-1974
Place :
ಬೆಣಚಿಗೆರೆ, ಗುಬ್ಬಿ ತಾ||
Pattadikara :
05-09-1997
Photo :
Programs
ಪ್ರತಿ ತಿಂಗಳು ಹುಣ್ಣಿಮೆಗೆ ಪ್ರವಚನ ಕಾರ್ತಿಕ ಮಾಸದಲ್ಲಿ ಶ್ರೀ ಮಠದ ಜಾತ್ರೆ z£sÀ Àುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಮಾರ್ಗಶಿರ ಸಪ್ತಮಿಗೆ ಲಿಂ|| ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ & ವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಶ್ರೀ ಶಾಂತೇಶ್ವರ ವಿದ್ಯಾಸಂಸ್ಥೆ ಜ್ಯೋತಿಷ್ಯ ವೇದ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಕದಂಬ ಜಂಗಮ ಮಠ
ವೈದ್ಯನಾಥಪುರ - 571 428
ಮದ್ದೂರು ತಾ||, ಮಂಡ್ಯ ಜಿಲ್ಲೆ