Shree Bale Honnuru Khasa Shakha Matha – Tendekere

Shree Bale Honnuru Khasa Shakha Matha – Tendekere Claimed

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ - ತೆಂಡೇಕೆರೆ

Average Reviews

Description

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ – ತೆಂಡೇಕೆರೆ

ಕರ್ತೃ – ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು

ಮಂಡ್ಯ ಜಿˉÉ್ಲ ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಕಾಲದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠವು ಅಸ್ತಿತ್ತ್ವದಲ್ಲಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಮಠದ ಸ್ಥಾಪಕಗುರುಗಳು ಶ್ರೀ ರಂಭಾಪುರಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.ಮೈಸೂರಿನ ಅರಸರ ಆಸ್ಥಾನ ನರ್ತಕಿಯಾಗಿದ್ದ ಚೋಕನಹಳ್ಳಿ ಗುರುಕಾರವಂಶದ ಚಿಕ್ಕ ತಾಯಿ ಅಮ್ಮನವರಿಗೆ ಅರಸರು ತಮ್ಮ ಕೊನೆಗಾಲದಲ್ಲಿ 7 ಗ್ರಾಮಗಳನ್ನುಬಳುವಳಿಯಾಗಿ ನೀಡಿದ್ದು ಆ ಗ್ರಾಮಗಳಲ್ಲಿ ತೆಂಡೇಕೆರೆ ಗ್ರಾಮವೂ ಒಂದು ಎಂದುತಿಳಿದುಬರುತ್ತದೆ. ಚಿಕ್ಕ ತಾಯಿ ಅಮ್ಮನವರು ವಯಸ್ಸಾದ ಮೇˉÉ ಈ 7 ಗ್ರಾಮಗಳನ್ನುಅಂದಿನ ಕಾಲದ ರಂಭಾಪುರಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆನೀಡಿ ಕಾಲವಾದರು ಎಂದು ಹೇಳˉÁಗುತ್ತಿದ್ದು ಇಂದಿಗೂ ಆ ಗುರುಕಾರ ವಂಶದವರುಕಾಣಸಿಗುತ್ತಾರೆ.ಈ ರೀತಿಯಾಗಿ ದಾನ ಬಂದ ತೆಂಡೇಕೆರೆ ಗ್ರಾಮದಲ್ಲಿ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮಿಗಳು ಆಗಾಗ್ಗೆ ಬಂದು ನೆˉÉನಿಂತು ಪುಣ್ಯಕ್ಷೇತ್ರವನ್ನಾಗಿಪರಿವರ್ತಿಸಿದರು. ಅಂದಿನಿಂದ ಶ್ರೀ ಮಠವು ಶ್ರೀ ಬಾಳೆಹೊನ್ನೂರು ಖಾಸಾ ಶಾಖಾಮಠವೆಂದೇ ಹೆಸರಾಯಿತು. ಹಿಂದಿನ ರಂಭಾಪುರಿ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕಾವೀರ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಮಳೆಗಾಲದಲ್ಲಿ ಇಲ್ಲಿ ನೆˉÉಸಿ ಧಾರ್ಮಿಕಆಚಾರಣೆಗಳನ್ನು ನಡೆಸುತ್ತಿದ್ದರು. ಶ್ರೀಗಳು ನಂತರ ಮುಕ್ತಿ ಮಂದಿರದಲ್ಲಿ ನೆˉÉಸಲುಪ್ರಾರಂಭಿಸಿದ್ದರಿಂದ ಈ ಕ್ಷೇತ್ರವು ಜೀರ್ಣಗೊಳ್ಳತೊಡಗಿತು.ಈಗಿನ ರಂಭಾಪುರಿ ಜಗದ್ಗುರುಗಳು ಗ್ರಾಮದ ಭಕ್ತರ ಆಶಯದಂತೆ 1994ರಸೆಪ್ಟಂಬರ್ ತಿಂಗಳಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯಸ್ವಾಮಿಗಳನ್ನು ಶ್ರೀ ಮಠಕ್ಕೆ ನೇಮಿಸಿದರು. ಆ ನಂತರ ಶ್ರೀ ಗಂಗಾಧರ ಶಿವಾಚಾರ್ಯರುಭಕ್ತರ ಸಹಕಾರದೊಂದಿಗೆ ಅವಿರತ ಶ್ರಮಿಸಿ ಜೀರ್ಣಗೊಂಡಿದ್ದ ಶ್ರೀ ಮಠವನ್ನು 1999ರಲ್ಲಿಜೀರ್ಣೋದ್ಧಾರಗೊಳಿಸಿ ಜೊತೆಗೆ ಶ್ರೀ ವೀರಭದ್ರಸ್ವಾಮಿ ಪ್ರತಿಷ್ಠಾಪನೆಯನ್ನೂ ಶ್ರೀರಂಭಾಪುರಿ ಜಗದ್ಗುರುಗಳ ಅಮೃತ ಹಸ್ತದಿಂದ ನೆರವೇರಿಸಿದರು ಮತ್ತು ಅದೇಸಮಯದಲ್ಲಿಯೇ (20-05-1997) ಶ್ರೀ ಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಅಂದಿನಿಂದಶ್ರೀ ಮಠದ, ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು
Date of Birth :
10-03-1975
Place :
ಸಕ್ಕರಾಯಪಟ್ಟಣ, ಕಡೂರು ತಾ||
Pattadikara :
20-05-1997
Photo :

Programs

ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಉತ್ಸವ ಹಾಗೂ ದೀಪೋತ್ಸವ
ಶಿವರಾತ್ರಿ ಆದ 10ನೇ ದಿನಕ್ಕೆ ಶ್ರೀ ವೀರಭದ್ರೇಶ್ವರ ರಥೋತ್ಸವ

Photos

Full Address Kannada

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾಮಠ
ತೆಂಡೇಕೆರೆ - 571 426
ಕೆ.ಆರ್.ಪೇಟೆ ತಾ||, ಮಂಡ್ಯ ಜಿಲ್ಲೆ

Map

Near by Places

ಪಾಂಡವಪುರ - 25 ಕಿ.ಮೀ.
ಮಂಡ್ಯ - 55 ಕಿ.ಮೀ.
ಮೈಸೂರು - 55 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!