ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಶ್ರೀ ಕಾರಾಪುರವಿರಕ್ತಮಠವು ಕರ್ನಾಟಕ ಧಾರ್ಮಿಕ ಇತಿಹಾಸಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದೆ.ಯಳಂದೂರು ಪಟ್ಟಣದ ಹೊರವಲಯದಲ್ಲಿ ಎರಡು ಕಿ.ಮೀ. ಅಂತರದಲ್ಲಿ ಪ್ರಕೃತಿಸೌಂದರ್ಯದಿಂದ ಕಂಗೊಳಿಸುತ್ತಿರುವ ಹಸಿರು ತೋಟದ ಮಧ್ಯೆ ಸ್ಥಾಪಿಗೊಂಡಿರುವಶ್ರೀಮಠವು ಜಾಗೃತ ಸ್ಥಳವಾಗಿದೆ. ಸುಮಾರು 14-15ನೇ ಶತಮಾನದಲ್ಲಿಯೇಅಸ್ತಿತ್ವದಲ್ಲಿತ್ತೆಂದು ತಿಳಿದು ಬರುವ ಶ್ರೀ ವಿರಕ್ತಮಠದ ಕರ್ತೃಗುರುಗಳು ಶ್ರೀ ನಿ.ಪ್ರ.ಸ್ವ. ಸುಖಿಚಾಮರಾಜ ದೇಶಿಕೇಂದ್ರ ಸ್ವಾಮಿ ಒಡೆಯರು.ಬಹುಶಃ 12ನೇ ಶತಮಾನದ ನಂತರ ಹರಿದು ಹಂಚಿ ಹೋದ ಶರಣ ಪರಂಪರೆಸಂಚಾರದಲ್ಲಿ ನಾಡಿನೆಲ್ಲೆಡೇ ನೆಲೆಗೊಂಡಿದ್ದು ಅಂತಹ ಶರಣರಲ್ಲಿ ಕೆಲವರು ದಕ್ಷಿಣದಯಳಂದೂರು ಭಾಗಕ್ಕೂ ಬಂದಿದ್ದರು ಎಂದು ಹೇಳಲಾಗಿದೆ. ಶರಣರ ಕಾಲಘಟ್ಟದನಂತರದಲ್ಲಿ ಸುಮಾರು 14ನೇ ಶತಮಾನದ ಅಂತ್ಯ ಭಾಗದಲ್ಲಿ ಶ್ರೀ ನಿ.ಪ್ರ.ಸ್ವ. ಚಾಮರಾಜದೇಶಿಕೇಂದ್ರ ಸ್ವಾಮಿ ಒಡೆಯರು ಅವರು ಇಲ್ಲಿ ನೆಲೆನಿಂತು ಭಕ್ತರನ್ನುದ್ದರಿಸಿ ಮಠವನ್ನುಸ್ಥಾಪಿಸಿರಬಹುದು. ಇಂದಿಗೂ ಶ್ರೀಮಠದಲ್ಲಿ ಶಾಲಿವಾಹನ ಶಕ ವರ್ಷ 1332 ಎಂದೂನಮೂದಿಸಿರುವುದನ್ನು ಕಾಣಬಹುದಾಗಿದ್ದು ಇದಕ್ಕೂ ಪೂರ್ವದಲ್ಲಿಯೇ ಶ್ರೀಮಠವುಅಸ್ತಿತ್ತ್ವದಲ್ಲಿತ್ತೆಂಬುದು ಸ್ಪಷ್ಟವಾಗುತ್ತದೆ.ಶ್ರೀಮಠದ ಮೂಲ ಮಠವು ಈಗಿರುವ ಮಠದ ಸಮೀಪದಲ್ಲಿಯೇ ಇದ್ದುಚೋಳರ ಕಾಲದಲ್ಲಿ ಕಟ್ಟಲ್ಪಟ್ಟ ಮಠ ಎನ್ನಲಾಗಿದೆ. ಶ್ರೀಮಠದ ಪರಂಪರೆಯಲ್ಲಿ ಈವರೆಗೂ15 ಜನ ಶ್ರೀಗಳು ಅಧಿಕಾರ ನಡೆಸಿರುವುದನ್ನು ಕಾಣಬಹುದಾಗಿದ್ದು ಸ್ಪಷ್ಟತೆಯಿಲ್ಲ. ಶ್ರೀಮಠದಆವರಣದಲ್ಲಿ 13 ಗದ್ದುಗೆಗಳು ಹಾಗೂ ಅಣ್ಣಿಗೇರಿ ಗ್ರಾಮದಲ್ಲಿ ಒಂದು ಗದ್ದುಗೆಯಿದ್ದುಅವುಗಳ ಆದಾರದಲ್ಲಿ 15 ಜನ ಶ್ರೀಗಳಿದ್ದರೆಂದು ಹೇಳಬಹುದು. ಪ್ರಸ್ತುತ ಈಗಿನ ಶ್ರೀಗಳುಒಂದು ವರ್ಷದ ಹಿಂದೆ ನೂತನ ಮಠದ ನಿರ್ಮಾಣವನ್ನು ಪೂರ್ಣಗೊಳಿಸಿದ್ದು ಈಜಾಗದಲ್ಲೂ ಪೂರ್ವದಲ್ಲಿ ಮಠವಿತ್ತು ಎಂದು ಹೇಳಲಾಗಿದೆ.ವೀರಶೈವ ಮಹಾಸಭೆಯ ಸಂಸ್ಥಾಪಕರು, ಶಿವಯೋಗ ಮಂದಿರದಸಂಸ್ಥಾಪಕರೂ ಆದ ಹಾನಗಲ್ಲು ಶ್ರೀ ಕುಮಾರ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿಉಪಾಧ್ಯಾಯರಾಗಿದ್ದು ಲಿಂಗಾಂಗ ಸಾಮರಸ್ಯದ ಅನುಭವವನ್ನು ಪಡೆಯಬೇಕೆಂಬಹಂಬಲದಿಂದ ಉಪಾಧ್ಯಾಯ ವೃತ್ತಿಯನ್ನು ತ್ಯಜಿಸಿದರು. ಮುಂದೆ ಲಿಂಗಾಂಗ ಸಾಮರಸ್ಯದಅರಿವನ್ನು ಪಡೆಯಲು ಹಾಗೂ ಶಿವಯೋಗ ಸಿದ್ದಿಯನ್ನು ಪಡೆಯಲು ಗುರುಗಳಹುಡುಕಾಟದಲ್ಲಿ ಉತ್ತರದಿಂದ ದಕ್ಷಿಣದವರೆಗೂ ಅನೇಕ ಗುರುಗಳನ್ನು ಸಂದರ್ಶಿಸುತ್ತಾಮುಂದುವರೆದರು. ಆದರೆ ಎಲ್ಲಿಯೂ ಅವರಿಗೆ ಅದರ ಪರಿಪೂರ್ಣತೆ ಸಿಗುವುದಿಲ್ಲ.ಪ್ರಯುಕ್ತ ಜ್ಞಾನ ಪಿಪಾಸುಗಳಾದ ಶ್ರೀ ಕುಮಾರಸ್ವಾಮಿಗಳು ಪ್ರಯಾಣ ಮುಂದುವರೆಸುತ್ತಾತಪೋನಿಷ್ಠರು, ಪರಮ ವೈರಾಗ್ಯಮೂರ್ತಿಗಳು, ಶಿವಯೋಗಸಿದ್ದರೂ ಆದಂತಹ ಯಳಂದೂರು ಶ್ರೀ ಕಾರಾಪುರ ವಿರಕ್ತಮಠದ 12ನೇ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಬಸವಲಿಂಗಮಹಾಸ್ವಾಮಿಗಳವರಲ್ಲಿಗೆ ಬಂದು ಶಿಷ್ಯವೃತ್ತಿಯನ್ನು ಕೈಗೊಂಡು ಗುರುಗಳ ಅನುಗ್ರಹಕ್ಕೆಪಾತ್ರರಾಗಿ ಚಿನ್ಮಯ ದೀಕ್ಷೆಯನ್ನು ಹೊಂದಿದರು. ತಮ್ಮ ಬಹುದಿನದ ಬಯಕೆಯಾದಲಿಂಗಾಂಗ ಸಾಮರಸ್ಯದ ದಿವ್ಯಜ್ಞಾನವನ್ನು ಅರಿತು ಶಿವಯೋಗ ಸಿದ್ದಿಯನ್ನುಪರಿಪೂರ್ಣಗೊಳಿಸಿಕೊಂಡರು.ಹೀಗೆ ಸುಮಾರು 12 ವರ್ಷಗಳ ಕಾಲ ಗುರು ಸೇವೆಯಲ್ಲಿಯೇ ನಿರತರಾಗಿದ್ದುಗುರುಗಳಲ್ಲಿದ್ದ ಅಹಿಂಸೆ ಪರಿಪಾಲನೆ, ಸಕಲ ಪ್ರಾಣಿಗಳಲ್ಲಿದ್ದ ದಯಾಗುಣ ಹಾಗೂಶಿವಯೋಗ ಸಿದ್ದಿಯನ್ನು ಕಂಡು ಬೆರಗಾದರು. ಹೀಗೆ ಗುರುಗಳ ಸೇವೆಯಲ್ಲಿಸಾರ್ಥಕತೆಯನ್ನು ಕಂಡ ಶ್ರೀ ಕುಮಾರ ಸ್ವಾಮಿಗಳು ನಂತರ ಧರ್ಮಪ್ರಚಾರಾರ್ಥ ಉತ್ತರಕರ್ನಾಟಕಕ್ಕೆ ಸಂಚರಿಸಿದ್ದು ಮುಂದಿನದೆಲ್ಲ ಇತಿಹಾಸ. ಇಂತಹ ಮಹಾನ್ ಗುರುಗಳಾದ ಶ್ರೀಬಸವಲಿಂಗ ಮಹಾಸ್ವಾಮಿಗಳಂತಹ ಮಹನೀಯರಿಂದ, ಶಿವಯೋಗಿಗಳಿಂದ ಈ ಭೂಮಿಪುಣ್ಯಭೂಮಿಯಾಗಿದ್ದು ಶ್ರೀ ಕಾರಾಪುರ ವಿರಕ್ತಮಠದ ಖ್ಯಾತಿಯು ಉತ್ತುಂಗಕ್ಕೇರಿತು.ಹಿಂದಿನ ಮಹಾನುಭಾವರ ದಿವ್ಯ ಆಶೀರ್ವಾದದ ಬಲದಿಂದ ಸಮಾಜ ಸುಧಾರಣೆಗಾಗಿ,ಧರ್ಮ ಜಾಗೃತಿಗಾಗಿ ಅನೇಕ ಯೋಜನೆಗಳನ್ನು ಕೈಗೊಂಡು ಇಂದಿಗೂ ಪ್ರತಿನಿತ್ಯ ಜ್ಞಾನದಾಸೋಹ, ಅನ್ನದಾಸೋಹವನ್ನು ಮಾಡುತ್ತಾ ಮುಂದುವರೆದಿದೆ.ಇಂತಹ ಪ್ರಖ್ಯಾತ ವಿರಕ್ತಮಠದ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಬಸವಲಿಂಗಮಹಾಸ್ವಾಮಿಗಳು ಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು1962ರಲ್ಲಿ ಲಿಂಗೈಕ್ಯರಾದರು. ಈಗಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಬಸವರಾಜ ಮಹಾಸ್ವಾಮಿಗಳು1963ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀಮಠದ ಸರ್ವತೋಮುಖ ಅಭಿವೃದ್ದಿ ಕಡೆಗೆಗಮನಕೊಟ್ಟು ಮಠವನ್ನು ಅಭಿವೃದ್ದಿಪಡಿಸಿದ್ದಾರೆ. ಶ್ರೀಮಠದ ಆಸ್ತಿಯಾಗಿ ಬಹಳಷ್ಟುಜಮೀನಿದ್ದು ಇದನ್ನೇ ನಂದನವನವನ್ನಾಗಿಸಿರುವ ಶ್ರೀಗಳು ಇತ್ತೀಚಿಗೆ ನೂತನ ಕಟ್ಟಡದನಿರ್ಮಾಣ ಮಾಡಿದ್ದಾರೆ. ತಮ್ಮ ಕಾಯಕಯೋಗದಿಂದ, ಆಚರಣೆಗಳ ಮೂಲಕ ಅಪಾರಭಕ್ತಬಳಗವನ್ನು ಹೊಂದಿರುವ ಶ್ರೀಗಳು ಶ್ರೀಮಠದಲ್ಲಿ ದಾಸೋಹದ ವ್ಯವಸ್ಥೆ ಮಾಡಿದ್ದಾರೆ.ಶ್ರೀಮಠವನ್ನು ಆರ್ಥಿಕವಾಗಿ ಸ್ವಾವಲಂಬನೆ ಸಾದಿಸುವಲ್ಲಿ ಯಶಸ್ವಿಯಾಗಿರುವ ಶ್ರೀಗಳುಶ್ರೀಮಠದ ವತಿಯಿಂದ ಗೋಶಾಲೆ ತೆರೆದಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಬಸವರಾಜ ಮಹಾಸ್ವಾಮಿಗಳು
Date of Birth :
05-05-1950
Place :
ಯರಗಂಬಳ್ಳಿ, ಯಳಂದೂರು ತಾ||
Pattadikara :
1963
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ
ಶಿವರಾತ್ರಿ, ಭೀಮನ ಅಮವಾಸೆ, ಮಹಾನವಮಿ,
ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿ
ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ
ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಗೋಶಾಲೆ
Photos
Full Address Kannada
ಶ್ರೀ ಕಾರಾಪುರ ವಿರಕ್ತ ಮಠ
ಯಳಂದೂರು (ಕಾರಾಪುರ) - 571 1441
ಯಳಂದೂರು ತಾ||, ಚಾಮರಾಜನಗರ ಜಿಲ್ಲೆ