ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ.ದೂರದಲ್ಲಿರುವ ಕೆಸ್ತೂರು ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಗುರುಮಲ್ಲೇಶ್ವರದಾಸೋಹ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ, ದಾಸೋಹ ತತ್ತ್ವಗಳಮೂಲಕ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಸುಮಾರು ಒಂದು ಶತಮಾನಗಳ ಇತಿಹಾಸಹೊಂದಿರಬಹುದಾದ ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ನಾಗಲಿಂಗಮಹಾಸ್ವಾಮಿಗಳನ್ನು ಹೆಸರಿಸಲಾಗಿದೆ.ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ತೋಂಟದಾರ್ಯಮಹಾಸ್ವಾಮಿಗಳ ಮರಿಗಳಾಗಿ ಮಠದ ಸೇವೆಯಲ್ಲಿದ್ದ ಶ್ರೀ ನಾಗಲಿಂಗ ಸ್ವಾಮಿಗಳುಕೆಸ್ತೂರಿನವರೇ ಆಗಿದ್ದು ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದರು. ಕರ್ತೃಗಳು ದೀರ್ಘಕಾಲ ಮಠದಆಡಳಿತವನ್ನು ನೋಡಿಕೊಂಡು, ದಾಸೋಹ ಕ್ರಿಯೆಯನ್ನು ಮಠದಲ್ಲಿ ಅಭಿವೃದ್ದಿಪಡಿಸಿಲಿಂಗೈಕ್ಯರಾಗಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದರಾಮ ಮಹಾಸ್ವಾಮಿಗಳುದೇವನೂರಿನ ಮಠದಲ್ಲಿಯೇ ಗುರುಗಳ ಸೇವೆಯಲ್ಲಿದ್ದು ನಂತರದಲ್ಲಿ ಕೆಸ್ತೂರಿನ ಶ್ರೀಮಠಕ್ಕೆಕರೆತಂದು ಅಧಿಕಾರ ಮಾಡಲಾಗಿದೆ. ಶ್ರೀಗಳು ಶ್ರೀಮಠದ ದಾಸೋಹದ ಕಾಯಕವನ್ನುಚುರುಕುಗೊಳಿಸಿದ್ದು ಶ್ರೀಮಠವನ್ನು ಅಭಿವೃದ್ದಿಪಡಿಸಿದ್ದಾರೆ. 1992ರಲ್ಲಿ ಈಗಿನ ಶ್ರೀಗಳನ್ನುಅಧಿಕಾರಕ್ಕೆ ತಂದ ಶ್ರೀಗಳು ಶತಾಯುಷಿಗಳಾಗಿ 2000ದ ಅಕ್ಟೋಬರ್‍ನಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ತೋಂಟದಾರ್ಯ ಸ್ವಾಮಿಗಳು 1992ರ ಜೂನ್10ರಂದು ಶ್ರೀಮಠದ ಪಟ್ಟಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು ಗುರುಗಳ ಸೇವೆಹಾಗೂ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಇದಕ್ಕೂ ಪೂರ್ವದಲ್ಲಿ ಮೈಸೂರಿನ ಶ್ರೀಕುದೇರು ಮಠದ ಹಿರಿಯ ಗುರುಗಳ ಸೇವೆಯಲ್ಲಿ ಆಧ್ಯಾತ್ಮದ ಅರಿವನ್ನು ಪಡೆದಿದ್ದ ಶ್ರೀಗಳುಕೆಸ್ತೂರಿನ ಮಠದ ಅಧಿಕಾರವನ್ನು ವಹಿಸಿಕೊಂಡು ಸರ್ವಾಂಗೀಣವಾಗಿಅಭಿವೃದ್ದಿಪಡಿಸಿದ್ದಾರೆ. ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು2000ನೇ ಇಸವಿಯಲ್ಲಿ ಶ್ರೀಮಠವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸಿದ್ದಾರೆ
Swamiji
Swamiji Name :
ಶ್ರೀ ಷ.ಬ್ರ. ತೋಂಟದಾರ್ಯ ಸ್ವಾಮಿಗಳು
Date of Birth :
03-07-1972
Place :
ಹಾಲನಹಳ್ಳಿ, ಹೆಚ್.ಡಿ.ಕೋಟೆ ತಾ||
Pattadikara :
10-06-1992
Photo :
Programs
ಬಸವ ಜಯಂತಿ ಆಚರಣೆ
ಕಾರ್ತಿಕ ಮಾಸದ ಕಡೆ ವಾರದಲ್ಲಿ ದೀಪೋತ್ಸವ
ಆಶ್ವೀಜ ಮಾಸ ತ್ರಯೋದಶಿಗೆ ಹಿರಿಯ
ಎರಡೂ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ
ಕೆಸ್ತೂರು - 571 441
ಯಳಂದೂರು ತಾ||, ಚಾಮರಾಜನಗರ ಜಿಲ್ಲೆ