Shree Saluru Brahanmatha

Shree Saluru Brahanmatha Claimed

ಶ್ರೀ ಸಾಲೂರು ಬೃಹನ್ಮಠ

Average Reviews

Description

ಶ್ರೀ ಸಾಲೂರು ಬೃಹನ್ಮಠ – ಮಲೆ ಮಹದೇಶ್ವರ ಬೆಟ್ಟ

ಕರ್ತೃ – ಪೂಜ್ಯ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಕೊಳ್ಳೇಗಾಲ ತಾಲ್ಲೂಕಿನ ಮಲೆಮಹಾದೇಶ್ವರ ಬೆಟ್ಟವು ಶ್ರೀ ಮಹದೇಶ್ವರರುನೆಲೆನಿಂತ ಕಾರಣಕ್ಕೆ ಪವಿತ್ರಯಾತ್ರಾ ಸ್ಥಳವಾಗಿ ಪ್ರಖ್ಯಾತಗೊಂಡಿದೆ. ಪ್ರಕೃತಿ ಸೌಂದರ್ಯದಬೀಡಾಗಿರುವ ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಮಠವೇ ಶ್ರೀ ಸಾಲೂರು ಬೃಹನ್ಮಠ.ಮಲೆಮಹದೇಶ್ವರ ಬೆಟ್ಟದ ಗಿರಿಕಂದರಗಳ ಮಧ್ಯೆ ವಿಶಾಲವಾದ ನಡುಮಲೆಯಲ್ಲಿಸ್ಥಾಪಿತಗೊಂಡಿರುವ ಶ್ರೀ ಸಾಲೂರು ಬೃಹನ್ಮಠ ವೀರಶೈವ ಧರ್ಮದ ಬೆಳವಣಿಗೆಗೆಬಹುವಾಗಿ ಶ್ರಮಿಸಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಶಾಂತಮಲ್ಲಿಕಾರ್ಜುನಮಹಾಸ್ವಾಮಿಗಳನ್ನು ಹೆಸರಿಸಲಾಗಿದ್ದು ಇವರು ಶ್ರೀ ಮಲೆ ಮಹದೇಶ್ವರರ ಧೀಕ್ಷಾ ಗುರುಗಳು.ಶ್ರೀಶೈಲದಿಂದ ಸಂಚಾರ ಹೊರಟ ಶ್ರೀ ಮಹಾದೇಶ್ವರರು ಸುತ್ತೂರು ನೋಡಲುಶರಣರ ಗುಂಪಿನಲ್ಲಿ ಆಗಮಿಸಿ ಅಲ್ಲಿಂದ ಮುಂದೆ ಕೆಲಕಾಲ ಪ್ರಭುದೇವರ ಬೆಟ್ಟದಲ್ಲಿನೆಲೆನಿಂತರು. ಇಲ್ಲಿ ಕೆಲದಿನ ನೆಲೆಸಿ ಪ್ರಭುದೇವರ ಸೇವೆ ಮಾಡಿ ಕುಂತೂರು ಮಠದ ಶ್ರೀಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದ ದೀಕ್ಷೆ ಪಡೆದು, ಶ್ರೀ ಪ್ರಭುದೇವರಿಂದ ತ್ರಿಶೂಲಪಡೆದು ಅನೇಕ ಪವಾಡಗಳನ್ನು ಮಾಡುತ್ತಾ ಮುಂದುವರೆದರು. ಮಹದೇಶ್ವರರುಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಸುತ್ತುಮಲೆ, ನಾಗಮಲೆಮುಂತಾದ ಎಪ್ಪತೇಳು ಮಲೆಗಳನ್ನು ಸುತ್ತಿ ಗಿರಿಜನರನ್ನು ಸಂಸ್ಕಾರವಂತರನ್ನಾಗಿಮಾಡುತ್ತಾರೆ. ಈ ಕತ್ತಲೆಯ ನಾಡಿನ ಅಂಧಕಾರವನ್ನು ದೂರ ಮಾಡಿ ಜಾತಿ ಬೇದವೆನ್ನದೇಆಚಾರ – ವಿಚಾರಗಳನ್ನು ತಿಳಿಸಿ ಲಿಂಗಧೀಕ್ಷೆ ನೀಡಿ ವೀರಶೈವ ಧರ್ಮ ಬೆಳೆಯಲುಕಾರಣರಾದರು.ಶ್ರೀ ಮಹದೇಶ್ವರರ ಪವಾಡಗಳನ್ನು ಕೇಳಿ ತಿಳಿದ ದೀಕ್ಷಾಗುರುಗಳಾದ ಕುಂತೂರಿನಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶಿಷ್ಯನನ್ನು ಕಣ್ಣಾರೆ ಕಂಡು ಹರಸಬೇಕೆಂದುಇಲ್ಲಿಗೆ ಆಗಮಿಸಿ ಹರ್ಷಿಸುತ್ತಾರೆ. ಮಹದೇಶ್ವರರು ತಮ್ಮ ಗುರುಗಳನ್ನು ನಡುಮಲೆಯಕಾಡುಜನರ ಉದ್ದಾರಕ್ಕೆಂದು ಜೀವ ಸವೆಸಿದ ಶ್ರೀ ಮುಪ್ಪಿನ ಮಹಾಸ್ವಾಮಿಗಳ ದರ್ಶನಮಾಡಿಸಲು ಕರೆತರುತ್ತಾರೆ. ಶ್ರೀ ಮುಪ್ಪಿನ ಸ್ವಾಮಿಗಳ ದರ್ಶನ ಪಡೆದ ಶ್ರೀಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಹಾದಾನಂದಗೊಂಡು ಇಂತಹ ಯತಿಶ್ರೇಷ್ಪರುತಪಸನ್ನಾಚರಿಸಿದ ಜಾಗದಲ್ಲಿ ಮಠ ಸ್ಥಾಪನೆಗೆ ಮುಹೂರ್ತ ಸ್ಥಂಭವನ್ನು ಸ್ಥಾಪಿಸಿ “ಈ ಸ್ತಂಭಯಾವಾಗಲು ಮುಪ್ಪಾಗದಿರಲಿ” ಎಂದು ಹರಿಸಿದರು. ಈ ರೀತಿಯಾಗಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳಿಂದ ಸ್ಥಾಪಿತಗೊಂಡು ಶ್ರೀ ಮಹದೇಶ್ವರರ ಪವಾಡಗಳಿಂದಪ್ರಸಿದ್ದಿಗೊಂಡ ಮಠವೇ ಶ್ರೀ ಸಾಲೂರು ಬೃಹನ್ಮಠ.ಇದೇ ಸಂದರ್ಭದಲ್ಲಿ ಮಹದೇಶ್ವರರ ಪವಾಡಗಳನ್ನು ನೋಡಲು ಹಾಗೂ ಶ್ರೀಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಶಿರ್ವಾದಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದಶ್ರೀ ಸಾಲೂರು ಸ್ವಾಮಿಗಳು ಗುರುಗಳ ಕಾಯಕ ನೋಡಿ ಬೆರಗಾದರು. ಇಲ್ಲಿಯೇನೆಲೆಗೊಳ್ಳಲು ನಿರ್ದರಿಸಿದ ಶ್ರೀ ಸಾಲೂರು ಸ್ವಾಮಿಗಳನ್ನು ಆಗ ತಾನೇ ಸ್ಥಾಪಿಸಿದ್ದ ಮಠದಗುರುಗಳನ್ನಾಗಿ ನಿಯುಕ್ತಿಗೊಳಿಸಲಾಯಿತು. ಶ್ರೀ ಸಾಲೂರು ಸ್ವಾಮಿಗಳು ವೀರಶೈವ ಧರ್ಮದಪ್ರಚಾರ ಕಾರ್ಯಕ್ಕಾಗಿ ನಾಡಿನಾದ್ಯಂತ ಸಂಚರಿಸಿ, ತತ್ತ್ವಗಳನ್ನು ಭೋದಿಸಿ ಜನರನ್ನುಜಾಗೃತಗೊಳಿಸಿದರು. ಈ ಕಾರ್ಯ ನೋಡಿ ಮನಸೋತು ಕಂಚಿ ತೆಲಂಗಾಣ ಮಠದ ಶ್ರೀಕರಿಬಸವ ಮಹಾಸ್ವಾಮಿಗಳು ಗುರುಗಳ ಹಾದಿಯಲ್ಲಿಯೇ ಮಹದೇಶ್ವರ ಬೆಟ್ಟಕ್ಕೆ ಬಂದುನೆಲೆಗೊಂಡರು. ಶ್ರೀ ಸಾಲೂರು ಸ್ವಾಮಿಗಳು ಶ್ರೀ ಮಹದೇಶ್ವರರ ನೇತೃತ್ವದಲ್ಲಿ ಕೈಗೊಂಡಮಹತ್‍ಕಾರ್ಯಗಳಿಗಾಗಿ ಪ್ರಸಿದ್ದಿಗೊಂಡಿದ್ದು ಶ್ರೀಮಠವನ್ನು ಇವರ ಹೆಸರಿನಿಂದಲೇಗುರುತಿಸಲಾಗುತ್ತಿದೆ.ಶ್ರೀ ಮಲೆ ಮಹಾದೇಶ್ವರರು ನಡುಮಲೆಯಲ್ಲಿಯೇ ಜೀವಂತ ಸಮಾದಿಯಾಗಿದ್ದುಇವರು ನಿರ್ವಿಕಲ್ಪಸಮಾದಿ ಹೊಂದಿದ ಜಾಗದಲ್ಲಿಯೇ ಶ್ರೀ ಮಲೆಮಹದೇಶ್ವರದೇವಸ್ಥಾನವನ್ನು ನಿರ್ಮಿಸಲಾಗಿದ್ದು ನಾಡಿನಾದ್ಯಂತ ಹೆಸರಾಗಿದೆ. ಕರ್ತೃಗಳಾದ ಶ್ರೀಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳ ಗದ್ದುಗೆಯು ಶ್ರೀ ಮಠದ ಹೊರಭಾಗದಲ್ಲಿದ್ದುಇನ್ನುಳಿದ ಸ್ವಾಮಿಗಳ ಗದ್ದುಗೆಗಳು ಆವರಣದಲ್ಲಿವೆ. ಒಟ್ಟು ಶ್ರೀಮಠದಲ್ಲಿ 22 ಗದ್ದುಗೆಗಳನ್ನುಕಾಣಬಹುದಾಗಿದ್ದು ಪೂಜ್ಯನೀಯವಾಗಿವೆ. ಶ್ರೀಮಠದ ಪರಂಪರೆಯಲ್ಲಿ ಈವರೆಗೂ 22ಜನಶ್ರೀಗಳು ಅಧಿಕಾರ ನಡೆಸಿದ್ದು ಶ್ರೀಮಠದ ಪರಂಪರೆಯು ಶ್ರೀಮಂತವಾಗಿದೆ.ಶ್ರೀಮಠದ ಪರಂಪರೆಯಲ್ಲಿ ಕಂಡುಬರುವ ಈಚೆಗಿನ ಎರಡು ತಲೆಮಾರುಗಳಹಿಂದಿನ ಶ್ರೀಗಳಾದ ಶ್ರೀ. ಷ.ಬ್ರ. ಶಾಂತಲಿಂಗ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠ ಮತ್ತುದೇವಸ್ಥಾನ ಅಭಿವೃದ್ದಿ ಕಂಡಿತು. 1914ರಲ್ಲಿ ಅಧಿಕಾರಕ್ಕೆ ಬಂದ ಶ್ರೀ ಶಾಂತಲಿಂಗ ಸ್ವಾಮಿಗಳುಪವಾಡ ಪುರುಷರೆಂದೇ ಹೆಸರಾಗಿದ್ದರು. ಇವರು ಮಠಕ್ಕಿಂತಲೂ ನಡುಮಲೆಯ ಕ್ಷೇತ್ರನಾಥ ಮಹದೇಶ್ವರ ಸ್ವಾಮಿ ದೇವಾಲಯದ ಅಭಿವೃದ್ದಿ ಹಾಗೂ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟುಧರ್ಮಕಾರ್ಯಗಳನ್ನು ಮಾಡಿದರು. ಮೈಸೂರು ಅರಸರ ಸಹಕಾರ ಪಡೆದು ರಥೋತ್ಸವಕ್ಕೆರಥವನ್ನು ನಿರ್ಮಿಸಿದರು. ಅಲ್ಲದೇ ದೇವಸ್ಥಾನದ ಕಟ್ಟಡವನ್ನು ವಿಸ್ತರಿಸಿ, ಧಾರ್ಮಿಕಪೂಜಾವಿಧಿ ವಿದಾನಗಳನ್ನು ಪ್ರಚುರಪಡಿಸಿದರು. ಈ ರೀತಿಯಾಗಿ ಅವಿಸ್ಮರಣೀಯಸೇವೆಯನ್ನು ಮಾಡಿದ ಶ್ರೀಗಳು ತಮ್ಮ ಕರಕಮಲ ಸಂಜಾತರಾದ ಶ್ರೀ ಇಮ್ಮಡಿ ಮುದ್ದುವೀರಸ್ವಾಮಿಗಳಿಗೆ ಅಧಿಕಾರ ಹಸ್ತಾಂತರಿಸಿದು.ಸುಮಾರು ಏಳು ದಶಕಗಳ ಕಾಲ ಮಠ ಮತ್ತು ದೇವಸ್ಥಾನದ ಅಭಿವೃದ್ದಿಗೆಶ್ರಮಿಸಿದ ಶ್ರೀಗಳು ತಮ್ಮ ಜೀವನಾನುಭವದ ಸಂಪತ್ತಿನಿಂದ ಧಾರ್ಮಿಕ ಹಾಗೂಸಮಾಜಿಕವಾಗಿ ಈ ಕ್ಷೇತ್ರವನ್ನು ಬಹುಮುಖವಾಗಿ ಬೆಳೆಸಿದರು. ಈ ರೀತಿ ಅನೇಕ ಜನಪರಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಠದ ವತಿಯಿಂದ ಜ್ಞಾನಜ್ಯೋತಿ ಹಚ್ಚಲು”ಶ್ರೀಮಾದೇಶ್ವರ ಸ್ವಾಮಿ ಕೃಪ ವಿದ್ಯಾಸಂಸ್ಥೆ” ಸ್ಥಾಪಿಸಿದರು. ಇವರ ನಂತರ ಶ್ರೀಮಠದಅಧಿಕಾರಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಮಹದೇವ ಮಹಾಸ್ವಾಮಿಗಳ ಕಾಲದಲ್ಲಿಶ್ರೀಮಠವು ಹೆಚ್ಚಿನ ಪ್ರಸಿದ್ದಿ ಕಂಡಿದೆ. ಜೋಳಿಗೆ ಹಿಡಿದು ಹಳ್ಳಿಹಳ್ಳಿಗಳನ್ನು ಸುತ್ತಿzs Àರ್ಮಪ್ರಚಾರಕಾರ್ಯ ಕೈಗೊಂಡ ಶ್ರೀಗಳು ಶ್ರೀಮಠದ ವಿದ್ಯಾಸಂಸ್ಥೆಯನ್ನುಉನ್ನತೀಕರಿಸಿದರು. ಬೇಸಾಯಗಾರರಾಗಿ ಶಿಕ್ಷಣ ತಜ್ಞರಾಗಿ, ಆತ್ಮ ಜ್ಞಾನವುಳ್ಳಮಹಾಯೊಗಿಗಳಾಗಿ ತತ್ತ್ವಚಿಂತಕರಾಗಿ ಎಲ್ಲಾ ಕ್ಷೇತ್ರಗಳಲೂ ಅನುಭವ ಸಂಪಾದಿಸಿದ್ದಇವರು ಮಠವನ್ನು ಉದ್ದರಿಸಿದ ಜಂಗಮ ಜ್ಯೋತಿಗಳು.ಶ್ರೀಮಠದಲ್ಲಿ ಚರ ಮತ್ತು ಸ್ಥಿರ ಪಟ್ಟಾಧಿಕಾರವು ಏಕಕಾಲಕ್ಕೆ ಇಬ್ಬರು ಗುರುಗಳಿಗೆನಡೆಯುತ್ತಾ ಬಂದಿದೆ. ಈ ಸಂಪ್ರದಾಯದ ಪ್ರಕಾರವಾಗಿ ಶ್ರೀ.ಷ.ಬ್ರ. ಪಟ್ಟದ ಗುರುಸ್ವಾಮಿಗಳುಸ್ಥಿರ ಪಟ್ಟಾಧ್ಯಕ್ಷರಾಗಿ, ಶ್ರೀ. ಷ.ಬ್ರ. ಇಮ್ಮಡಿ ಮಹಾದೇವ ಮಹಾಸ್ವಾಮಿಗಳು ಚರಪಟ್ಟಾಧ್ಯಕ್ಷರಾಗಿ ಶ್ರೀಮಠವನ್ನು ಪ್ರಗತಿ ಪಥದತ್ತಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಅಧಿಕಾರಕ್ಕೆಬಂದ ನಂತರ ಶ್ರೀಮಠದ ವಿದ್ಯಾಸಂಸ್ಥೆ ಅಡಿಯಲ್ಲಿ ಅನೇಕ ಶಾಲಾ-ಕಾಲೇಜು,ವಿದ್ಯಾರ್ಥಿನಿಲಯಗಳನ್ನು ತೆರೆದಿದ್ದಾರೆ. ಯಾತ್ರಿನಿವಾಸ, ಪ್ರಸಾದನಿಲಯ ಹಾಗೂವೃದ್ದಾಶ್ರಮಗಳನ್ನು ಪ್ರಾರಂಭಿಸಿದ್ದಾರೆ. ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನುಕಲ್ಪಿಸಿರುವ ಶ್ರೀಗಳು ನಿತ್ಯ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಪಟ್ಟದ ಗುರುಸ್ವಾಮಿಗಳು
Date of Birth :
02-08-1956
Place :
ಗಂಗಾಧರಕಟ್ಟೆ ಹೊಸೂರು, ಕೊಳ್ಳೇಗಾಲ ತಾ||
Pattadikara :
28-01-1994
Photo :
Swamiji Name :
ಶ್ರೀ ಷ.ಬ್ರ. ಇಮ್ಮಡಿ ಮಹಾದೇವ ಮಹಾಸ್ವಾಮಿಗಳು
Place :
ಶಾಗ್ಯ, ಕೊಳ್ಳೇಗಾಲ ತಾ||
Pattadikara :
28-01-1994
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕಾರ್ತಿಕೋತ್ಸವ
ಜನವರಿ 28ಕ್ಕೆ ಲಿಂ|| ಶ್ರೀ ಷ.ಬ್ರ. ಮಹಾದೇವ ಸ್ವಾಮಿಗಳ
ಆರಾಧನೆ ಮತ್ತು ಸಾಮೂಹಿಕ ವಿವಾಹಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪೌಢಶಾಲೆ
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸಾಲೂರು ಬೃಹನ್ಮಠ
ಮಲೆ ಮಹದೇಶ್ವರ ಬೆಟ್ಟ - 571 490
ಕೊಳ್ಳೆಗಾಲ ತಾ||, ಚಾಮರಾಜನಗರ ಜಿ||

Map

Statistic

296 Views
0 Rating
0 Favorite
0 Share
error: Content is protected !!