ಚಾಮರಾಜನಗರ ಜಿˉÉ್ಲ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮವುತಾಲ್ಲೂಕು ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಜಾಲಿಕಂತೆ ಮಠವು ತನ್ನ ಆಚರಣೆಗಳ ಮೂಲಕಪ್ರಚಲಿತದಲ್ಲಿದೆ. ಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಜಾಲಿಕಂತೆ ಮಠದ ಕರ್ತೃ ಗುರುಗಳು ಶ್ರೀ ಷ.ಬ್ರ. ತೋಂಟದಾರ್ಯಮಹಾಸ್ವಾಮಿಗಳು.ಕರ್ತೃ ಗುರುಗಳು ಮಧುವನಹಳ್ಳಿ ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿದ ನಂತರತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನಿರ್ಮಿಸಿದರು. ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನು ಹೆಚ್ಚಿಸಿದ ಗುರುಗಳು ಅವರಸಹಕಾರದೊಂದಿಗೆ ಮಠವನ್ನು ಮುನ್ನಡೆಸಿದ್ದರು. ಇವರ ನಂತರ ಶ್ರೀ ಷ.ಬ್ರ.ಮರಿತೋಂಟದಾರ್ಯ ಸ್ವಾಮಿಗಳು, ಶ್ರೀ ಷ.ಬ್ರ. ತೋಂಟದಾರ್ಯ ಮಹಾಸ್ವಾಮಿಗಳುಶ್ರೀಮಠವನ್ನು ಮುನ್ನಡೆಸಿರುವುದು ಕಂಡು ಬರುತ್ತಿದ್ದು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಈ ಎˉÁ್ಲ ಗುರುಗಳ ನಂತರ ಶ್ರೀಮಠದ ಅಧಿಕಾರಕ್ಕೆ ಬಂದ 4ನೇ ಗುರುಗಳಾದಶ್ರೀ ಷ.ಬ್ರ. ಚನ್ನಮಲ್ಲ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದ್ದುಅಭಿವೃದ್ಧಿ ಕಂಡಿದೆ. ಆಗಾಗ್ಗೆ ಸಂಚಾರ ಕೈಗೊಳ್ಳುತ್ತಿದ್ದ ಶ್ರೀಗಳು ಪುಣ್ಯಕ್ಷೇತ್ರಗಳಲ್ಲಿಅನುಷ್ಠಾನಗೊಳ್ಳುತ್ತಾ ಭಕ್ತರನ್ನು ಸಂಘಟಿಸುತ್ತ ವೀರಶೈವ ಧರ್ಮದ ಬೆಳವಣಿಗೆಗೆಶ್ರಮಪಟ್ಟಿದ್ದು 1907ರಲ್ಲಿ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಸ್ವಾಮಿಗಳಿಗೆ ಅಧಿಕಾರವಹಿಸಿಕೊಟ್ಟಿದ್ದಾರೆ.ಶ್ರೀ ಷ.ಬ್ರ. ಬಸವಲಿಂಗ ಸ್ವಾಮಿಗಳು ಸುಮಾರು 45 ವರ್ಷಗಳ ಕಾಲ ಶ್ರೀಮಠದಶ್ರೇಯೋಭಿವೃದ್ದಿಗೆ ಶ್ರಮಿಸಿದ್ದು ತಮ್ಮ ಜೀವಿತಾವಧಿಯಲ್ಲಿಯೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಶಿವಕುಮಾರ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು 1952ರಮಾರ್ಚ್ 02ರಂದು ಪಟ್ಟಾಧಿಕಾರ ಮಾಡಿದರು. ಶ್ರೀ ಶಿವಕುಮಾರ ಸ್ವಾಮಿಗಳು ಕಳೆದಆರೂವರೆ ದಶಕಗಳಲ್ಲಿ ಭಕ್ತರನ್ನು ಸಂಘಟಿಸುತ್ತಾ ಮಠದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬಂದಿದ್ದು ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶ್ರೀಮಠದಲ್ಲಿ ಕರ್ತೃಗಳೂಸೇರಿದಂತೆ ಎˉÁ್ಲ ಗುರುಗಳ ಗದ್ದುಗೆಗಳಿದ್ದು ಪೂಜ್ಯನೀಯವಾಗಿವೆ.
Swamiji
Swamiji Name :
ಶ್ರೀ ಷ.ಬ್ರ. ಶಿವಕುಮಾರ ಸ್ವಾಮಿಗಳು
Date of Birth :
20-08-1938
Place :
ಮಧುವನಹಳ್ಳಿ, ಕೊಳ್ಳೇಗಾಲ ತಾ||
Pattadikara :
02-03-1952
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ
ಶ್ರಾವಣ ಮಾಸ ತ್ರಯೋದಶಿಗೆ ಲಿಂ|| ಶ್ರೀ ಷ.ಬ್ರ. ಬಸವಲಿಂಗ
ಮಹಾಸ್ವಾಮಿಗಳ ಪುಣ್ಯಾರಾಧ£
Photos
Full Address Kannada
ಶ್ರೀ ಜಾಲಿಕಂತೆ ಮಠ
ಮಧುವನಹಳ್ಳಿ - 571 801
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ