ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಗ್ರಾಮವುತಾಲ್ಲೂಕು ಕೇಂದ್ರದಿಂದ ಕೇವಲ 07 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿಅಸ್ತಿತ್ತ್ವದಲ್ಲಿರುವ ಮಠವೇ ಶ್ರೀ ಪಟ್ಟದ ಮಠ. ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿರುವ ಶ್ರೀ ಪಟ್ಟದ ಮಠವು ಮಲೆಮಹಾದೇಶ್ವರ ಬೆಟ್ಟದಲ್ಲಿರುವ ಶ್ರೀ ಸಾಲೂರು ಬೃಹನ್ಮಠದ ಶಾಖಾಮಠವಾಗಿಗುರುತಿಸಿಕೊಂಡಿದೆ.ಕರ್ತೃ ಗುರುಗಳು ಸುಮಾರು 150 ವರ್ಷಗಳ ಹಿಂದೆ ಮಲೆಮಹಾದೇಶ್ವರಬೆಟ್ಟದಿಂದ ಸಂಚಾರ ಹೊರಟು ಅಲ್ಲಲ್ಲಿ ನೆಲೆಗೊಂಡು ಅನುಷ್ಠಾನಗೊಳ್ಳುತ್ತಾ ಕೊನೆಗೆಗುಂಡೇಗಾಲ ಗ್ರಾಮಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವ ಕರ್ತೃಗಳು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನು ರೂಪಿಸಿ ಅವರಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಗುರುಗಳ ಗದ್ದುಗೆಯು ಶ್ರೀಮಠದಲ್ಲಿದ್ದುನಿತ್ಯಪೂಜೆಗೆ ಒಳಪಟ್ಟಿದೆ.ಕರ್ತೃಗಳ ನಂತರದ ಪರಂಪರೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಈಗಿನಶ್ರೀಗಳಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಸ್ವಾಮಿಗಳು ಮಲೆ ಮಹಾದೇಶ್ವರ ಬೆಟ್ಟದ ಮಠದಲ್ಲಿಆಧ್ಯಾತ್ಮ ಶಿಕ್ಷಣ ಪಡೆದಿದ್ದು 2002ರಲ್ಲಿ ಗುಂಡೇಗಾಲದ ಶ್ರೀ ಪಟ್ಟದ ಮಠದ ಅಧಿಕಾರಸ್ವೀಕರಿಸುತ್ತಾರೆ. ಪ್ರಸ್ತುತ ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದುಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.ಪ್ರಸ್ತುತ ಮಠವನ್ನು ಊರಿನ ಭಕ್ತರ ಸಹಕಾರದೊಂದಿಗೆ ಶ್ರೀಗಳಮಾರ್ಗದರ್ಶನದಲ್ಲಿ ಜೀರ್ಣೋದ್ದಾರಗೊಳಿಸಲಾಗಿದೆ. ಶ್ರೀಗಳು ಇತ್ತೀಚೆಗೆ ಶ್ರೀಮಠದಲ್ಲಿಪ್ರಾರ್ಥನಾ ಮಂದಿರವನ್ನು ಕಟ್ಟಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಕಾರ್ತಿಕ ಮಾಸದ ಪ್ರತಿ ಸೋಮವಾರ ವಿಶೇಷ ಪೂಜೆ, ಕಾರ್ತಿಕೋತ್ಸವ ನಡೆಸಲಾಗುತ್ತದೆಹಾಗೂ ಪ್ರತಿವರ್ಷ ಮೇ 22ರಂದು ಶ್ರೀ ಮಠದ ವಾರ್ಷಿಕೋತ್ಸವ ನಡೆಯುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಸ್ವಾಮಿಗಳು
Date of Birth :
01-06-1961
Place :
ಪಿ.ಜಿ.ಪಾಳ್ಯ, ಕೊಳ್ಳೇಗಾಲ ತಾ||
Pattadikara :
2002
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಮೇ 22ರಂದು ಶ್ರೀಮಠದ ವಾರ್ಷಿಕಾರಾಧನೆ ಹಾಗೂ ಕಾರ್ಯಕ್ರಮಗಳು
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ
Photos
Full Address Kannada
ಶ್ರೀ ಪಟ್ಟದ ಮಠ
ಗುಂಡೇಗಾಲ, ಪಾಳ್ಯ ಪೋ. - 571 440
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ