Shree Guru Malleshwara Pattada Matha

Shree Guru Malleshwara Pattada Matha Claimed

ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ

Average Reviews

Description

ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ – ಆಲಹಳ್ಳಿ

ಕರ್ತೃ – ಪೂಜ್ಯ ಶ್ರೀ ಬಸಪ್ಪ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಆಲಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಗುರುಮಲ್ಲೇಶ್ವರ ಪಟ್ಟದ ಮಠವು ಶ್ರೀ ಸೋಮಹಳ್ಳಿ ಶ್ರೀ ವೀರಸಿಂಹಾಸನ ಶಿಲಾಮಠದಶಾಖಾ ಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಬಸಪ್ಪ ಮಹಾಸ್ವಾಮಿಗಳನ್ನು ಹೆಸರಿಸಲಾಗಿದೆ.ದೇವನೂರು ಶ್ರೀ ಗುರುಮಲ್ಲೇಶ್ವರರು ಈ ಭಾಗದ ಪ್ರಮುಖ ಧಾರ್ಮಿಕ ಹೆಸರು.ಇಂತಹ ಗುರುಗಳ ಅನುಷ್ಠಾನದಿಂದ ಜಾಗೃತಗೊಂಡು ಸ್ಥಾಪಿಸಲ್ಪಟ್ಟ ಮಠವೇ ಆಲಹಳ್ಳಿ ಶ್ರೀಗುರುಮಲ್ಲೇಶ್ವರ ಪಟ್ಟದ ಮಠ. ಇಲ್ಲಿಗೆ ಪ್ರಥಮ ಗುರುಗಳಾಗಿ ಬಂದವರೇ ಕರ್ತೃ ಶ್ರೀ ಬಸಪ್ಪಮಹಾಸ್ವಾಮಿಗಳು. ದೇವನೂರಿನ ಮಠದಲ್ಲಿ ಗುರುಗಳ ಸೇವೆಯಲ್ಲಿದ್ದ ಗುರುಗಳು ನಂತರಅಲ್ಲಿನ ಗುರುಗಳ ಇಚ್ಛೆಯಂತೆ ಆಲಹಳ್ಳಿ ಗ್ರಾಮಕ್ಕೆ ಬಂದು ಇಲ್ಲಿದ್ದ ಚಿಕ್ಕಮಠವನ್ನುಜೀರ್ಣೋದ್ಧಾರಗೊಳಿಸಿದರು. ನಂತರ ಭಕ್ತರಿಗೆ ಆಧ್ಯಾತ್ಮದ ಅರಿವನ್ನು ಮೂಡಿಸುತ್ತಾಸಂಸ್ಕಾರಯುತ ಸಮಾಜವನ್ನು ರೂಪಿಸಿದರು.ಶ್ರೀ ಬಸಪ್ಪ ಸ್ವಾಮಿಗಳು ಮಠವನ್ನು ಅಭಿವೃದ್ದಿಗೊಳಿಸಿ ನಂತರ ತಮ್ಮ ಶಿಷ್ಯರಾಗಿಸೇವೆಯಲ್ಲಿದ್ದ ಈಗಿನ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡರು. 1994ರ ಮಾರ್ಚ್ 16ರಂದು ಶ್ರೀ ಪಟ್ಟದಮಠದ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀ ಷ.ಬ್ರ. ಶಿವಕುಮಾರ ಸ್ವಾಮಿಗಳು ತಮ್ಮ ಗುರುಗಳಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಶ್ರೀಮಠದ ಕಟ್ಟಡವನ್ನು ವಿಸ್ತರಿಸಿದ ಶ್ರೀಗಳು ಶ್ರೀಮಠವನ್ನುಸಂಪೂರ್ಣವಾಗಿ ನವೀಕರಿಸಿದ್ದಾರೆ. ಜೊತೆಗೆ ಬಸವ ಬವನ, ಹಿರಿಯ ಗುರುಗಳ ಮಂಟಪ,ಕಲ್ಯಾಣ ಮಂಟಪ ಇತ್ಯಾದಿಗಳನ್ನು ನಿರ್ಮಿಸಿ ಅಭಿವೃದ್ದಿಗೊಳಿಸಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿ, ಬಸವ ಜಯಂತಿ,ಧನುರ್ಮಾಸಗಳಲ್ಲಿ ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ. ಕಾರ್ತೀಕ ಮಾಸದ ಪ್ರತಿಸೋಮವಾರ ದೀಪೋತ್ಸವವನ್ನು ನಡೆಸುತ್ತಿರುವ ಶ್ರೀಗಳು ಚೈತ್ರ ಶುದ್ದ ದಶಮಿಗೆ ಲಿಂ|| ಶ್ರೀಬಸಪ್ಪ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಯೋಜಿಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಕುಮಾರ ಸ್ವಾಮಿಗಳು
Date of Birth :
01-01-1947
Place :
ಶಂಭುದೇವನಪುರ, ಟಿ.ನರಸೀಪುರ ತಾ||
Pattadikara :
16-03-1994
Photo :

Programs

ಚೈತ್ರ ಶುದ್ದ ದಶಮಿಗೆ ಲಿಂ|| ಶ್ರೀ ಬಸಪ್ಪ ಮಹಾಸ್ವಾಮಿಗಳ ಪುಣ್ಯಾರಾಧನೆ
ಶಿವರಾತ್ರಿಗೆ ಜಾಗರಣೆ, ವಿಶೇಷ ಪೂಜೆ
ಬಸವ ಜಯಂತಿ ಆಚರಣೆ
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ದೀಪೋತ್ಸವ

Photos

Full Address Kannada

ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ
ಆಲಹಳ್ಳಿ - 571 442
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಟಗರಪುರ ಗೇಟ್ - 2 ಕಿ.ಮೀ.
ಉತ್ತಮಹಳ್ಳಿ - 0 ಕಿ.ಮೀ.
ಕೊಳ್ಳೇಗಾಲ - 15 ಕಿ.ಮೀ.
ಚಾಮರಾಜನಗರ - 30 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!